“ಎಲ್ಲವೂ ಹೇಳಿದೆ, ಎಲ್ಲವನ್ನೂ ಮಾಡಿದೆ”- ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್!

Amitab Bacchan New Post: ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಭಿಷೇಕ್ ತಮ್ಮ ಮದುವೆ ಉಂಗುರವನ್ನು ಧರಿಸಿರಲಿಲ್ಲ. ಅಷ್ಟೇ ಅಲ್ಲದೆ, ಕೆಲ ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಕೂಡ ವೆಡ್ಡಿಂಗ್ ರಿಂಗ್ ಧರಿಸಿರಲಿಲ್ಲ.

Written by - Bhavishya Shetty | Last Updated : Dec 10, 2023, 10:39 PM IST
    • ಬಾಲಿವುಡ್‌’ನ ಅತ್ಯಂತ ಪ್ರಸಿದ್ಧ ಬಚ್ಚನ್ ಕುಟುಂಬ
    • ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ
    • ಅಭಿಷೇಕ್ ಬಚ್ಚನ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
“ಎಲ್ಲವೂ ಹೇಳಿದೆ, ಎಲ್ಲವನ್ನೂ ಮಾಡಿದೆ”- ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್! title=
Amitabh Bachchan

Amitab Bacchan New Post: ಬಾಲಿವುಡ್‌’ನ ಅತ್ಯಂತ ಪ್ರಸಿದ್ಧ ಬಚ್ಚನ್ ಕುಟುಂಬ ಇದೀಗ ಗಾಸಿಪ್ ಮಾತ್ರವಲ್ಲದೆ ಚರ್ಚಾ ಕೂಪವಾಗಿದೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಮತ್ತು ನಟಿ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬುತ್ತಿದೆ. ಈ ಸುದ್ದಿಯನ್ನು ಬಚ್ಚನ್ ಕುಟುಂಬದ ಯಾರೂ ಖಚಿತಪಡಿಸಿಲ್ಲ. ಆದರೆ ಕುಟುಂಬ ಸದಸ್ಯರ ನಡೆಗಳಿಂದಾಗಿ ಈ ವದಂತಿಗಳಲ್ಲಿ ಸ್ವಲ್ಪ ಸತ್ಯವಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲ್ಲ ಈ ಪವರ್ ಫುಲ್ ವೇಗಿ!

ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಭಿಷೇಕ್ ತಮ್ಮ ಮದುವೆ ಉಂಗುರವನ್ನು ಧರಿಸಿರಲಿಲ್ಲ. ಅಷ್ಟೇ ಅಲ್ಲದೆ, ಕೆಲ ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಕೂಡ ವೆಡ್ಡಿಂಗ್ ರಿಂಗ್ ಧರಿಸಿರಲಿಲ್ಲ. ಈ ಎರಡು ಘಟನೆಗಳು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಶ್ವೇತಾ ನಂದ ಪುತ್ರ ಅಭಿನಯಿಸಿರುವ ‘ದಿ ಆರ್ಚೀಸ್‌’ ಫಸ್ಟ್ ಶೋಗೆ ಇಡೀ ಬಚ್ಚನ್ ಕುಟುಂಬವು ರೆಡ್ ಕಾರ್ಪೆಟ್ಗೆ ಬಂದಿತ್ತು. ಈ ವೇಳೆ ಎಲ್ಲರ ಕಣ್ಣು ಐಶ್ವರ್ಯಾ ಮತ್ತು ಅಭಿಷೇಕ್ ಮೇಲೆ ನೆಟ್ಟಿತ್ತು. ಎಂದಿನಂತೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಇದ್ದ ಬಾಂಡಿಂಗ್ ಈ ಬಾರಿ ಕಾಣಲಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ಇದನ್ನೂ ಓದಿ: 46ನೇ ವಯಸ್ಸಿನಲ್ಲಿ ಖ್ಯಾತ ಕಿರುತೆರೆ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕಾಮಿಡಿ ನಟ

ಈ ಎಲ್ಲದರ ಬೆನ್ನಲ್ಲೇ ಅಮಿತಾಬ್ ಬಚ್ಚನ್ ತಮ್ಮ ಇನ್’ಸ್ಟಾಗ್ರಾಂ ಫಾಲೋವರ್ಸ್ ಪಟ್ಟಿಯಿಂದ ಐಶ್ವರ್ಯಾ ರೈ ಅವರನ್ನು ಅನ್ ಫಾಲೋ ಮಾಡಿದ್ದರು. ಇದೀಗ ಮತ್ತೊಂದು ರಹಸ್ಯಮಯ ಪೋಸ್ಟ್ ಶೇರ್ ಮಾಡಿರುವ ಅವರು, “ಎಲ್ಲವೂ ಹೇಳಿದೆ ಎಲ್ಲವನ್ನೂ ಮಾಡಿದೆ. ಮಾಡುವುದನ್ನೂ ಮಾಡಿಯಾಗಿದೆ” ಎಂದು ರಹಸ್ಯಮಯ ಪೋಸ್ಟ್ ಶೇರ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News