ಕೇವಲ 6 ದಿನಗಳಲ್ಲಿ ಯಾವುದೇ ವೆಚ್ಚವಿಲ್ಲದೆ ಒಡೆದ ಹಿಮ್ಮಡಿ ಸರಿಪಡಿಸಿ..!

Cracked Heels remedies : ಹಿಮ್ಮಡಿ ಬಿರುಕು ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲಿ ತಯಾರಿಸಿದ ಹೀಲ್ ಕ್ರ್ಯಾಕ್ ಕ್ರೀಮ್ ಗಳನ್ನು ನಿಯಮಿತವಾಗಿ ಬಳಸಿದರೆ ಸುಲಭವಾಗಿ ಪರಿಹಾರ ಪಡೆಯಬಹುದು. ಇದಲ್ಲದೆ, ಇದರಲ್ಲಿರುವ ಗುಣಲಕ್ಷಣಗಳು ಉರಿಯೂತವನ್ನು ಸುಲಭವಾಗಿ ನಿವಾರಿಸುತ್ತದೆ. ಬನ್ನಿ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ 

Written by - Krishna N K | Last Updated : Dec 11, 2023, 03:34 PM IST
  • ಹಿಮ್ಮಡಿ ಬಿರುಕು ಸಮಸ್ಯೆಯಿಂದ ಬಳಲುತ್ತಿದ್ದೀರಾ..?
  • ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
  • ಯಾವುದೇ ವೆಚ್ಚವಿಲ್ಲದೆ ಸುಲಭವಾಗಿ ಈ ಸಮಸ್ಯೆಗೆ ಪರಹಾರ ಇಲ್ಲಿದೆ.
ಕೇವಲ 6 ದಿನಗಳಲ್ಲಿ ಯಾವುದೇ ವೆಚ್ಚವಿಲ್ಲದೆ ಒಡೆದ ಹಿಮ್ಮಡಿ ಸರಿಪಡಿಸಿ..! title=

Cracked Heels : ಚಳಿಗಾಲದಲ್ಲಿ ಅನೇಕ ಜನರು ಚರ್ಮದ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಲ್ಲಿ ಪಾದಗಳು, ಹಿಮ್ಮಡಿಗಳು ಹವಾಮಾನದ ಪ್ರಭಾವಕ್ಕೆ ಒಳಗಾಗಿ, ಊತದಂತಹ ಸಮಸ್ಯೆಗಳನ್ನು ಎದುರಿಸುತ್ತವೆ. ಅದಕ್ಕಾಗಿಯೇ ಅನೇಕ ಜನರು ಶೀತ ಕಾಲದಲ್ಲಿ ಹಿಮ್ಮಡಿ ಬಿರುಕಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದರೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. 

ಹೌದು.. ಚಳಿಗಾಲದಲ್ಲಿ ಹಿಮ್ಮಡಿ ಬಿರುಕಿನಿಂದ ಕೆಲವರು ತೀವ್ರ ನೋವಿನಿಂದ ಬಳಲುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂ ಹೆಚ್ಚು ಬಳಕೆಯಾಗುತ್ತದೆ. ಆದರೆ ಅವರು ಅವುಗಳನ್ನು ಬಳಸುವುದರಿಂದ ಯಾವುದೇ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮನೆಯಲ್ಲಿ ತಯಾರಿಸಿದ ಕ್ರೀಂ ಬಳಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ತಜ್ಞರು. ಯಾವುದೇ ವೆಚ್ಚವಿಲ್ಲದೆ ಸುಲಭವಾಗಿ ಈ ಸಮಸ್ಯೆಗೆ ಮನೆಯಲ್ಲಿ ಪರಿಹಾರ ಪಡೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. 

ಇದನ್ನೂ ಓದಿ: ಮಧುಮೇಹ ರೋಗಿಗಳು ಎಳನೀರನ್ನು ಕುಡಿಯಬಹುದೇ..? ಸಂದೇಹ ಬಗೆಹರಿಸಿಕೊಳ್ಳಿ

ಮನೆಯಲ್ಲಿ ಹೀಲ್ ಕ್ರ್ಯಾಕ್ ಕ್ರೀಮ್ ತಯಾರಿಸಲು ಬೇಕಾದ ಪದಾರ್ಥಗಳು
ಸಾಸಿವೆ ಎಣ್ಣೆ 2 ಟೀಸ್ಪೂನ್
ತೆಂಗಿನ ಎಣ್ಣೆ 2 ಟೀಸ್ಪೂನ್
ವ್ಯಾಸಲೀನ್ 1 ಟೀಸ್ಪೂನ್
ವಿಟಮಿನ್ ಇ ಕ್ಯಾಪ್ಸುಲ್ಗಳು
1/2 ಟೀಸ್ಪೂನ್ ಕರ್ಪೂರ

ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ ಎರಡು ಚಮಚ ತೆಂಗಿನೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಕರ್ಪೂರವನ್ನು ನುಣ್ಣಗೆ ಪುಡಿಮಾಡಿ ಅದರಲ್ಲಿ ಮಿಶ್ರಣ ಮಾಡಬೇಕು. ಈ ಮಿಶ್ರಣದಲ್ಲಿ ವ್ಯಾಸಲೀನ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಕೂಡ ಬೆರೆಸಿ ಪಕ್ಕಕ್ಕೆ ಇಡಬೇಕು. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ಮತ್ತು ರೆಫ್ರಿಜರೇಟರ್ನಲ್ಲಿ ಇರಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ ಬಿರುಕು ಬಿಟ್ಟ ಪಾದಗಳಿಗೆ ಹೆಚ್ಚಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News