New Imperial Bakery: ಕೆಜಿಎಫ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಆ ಹೆಸರು ಕೇಳಿದ್ರೆ ನಮಗೆ ಪಟ್ ಅಂತ ನೆನಪಾಗೋದೆ ಅಲ್ಲಿನ ಚಿನ್ನದ ಗಣಿ ಪ್ರದೇಶ. ಈ ಪ್ರದೇಶ ಇದೀಗ ತನ್ನ ಚರಿತ್ರೆಯ ಸಾಲು ಬರೋದಕ್ಕೆ ಸಜ್ಜಾಗುತ್ತ ಇದೆ. ರಾಷ್ಟ್ರಕ್ಕೆ ಮೊದಲ ಚಿನ್ನ ಕೊಟ್ಟಂತಹ ಜಿಲ್ಲೆ ಕೊಲಾರ ಎಂಬ ಹೆಗ್ಗಳಿಕೆ ಇದೆ. ಬ್ರಿಟಿಷರ ಆಡಳಿತದಲ್ಲಿ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದ್ದ ಕೆಜಿಎಫ್ ನಗರ ಇಂದಿಗೂ ಹಲವು ವಿಶೇಷತೆಗಳಿಗೆ ಮಾದರಿಯಾಗಿದೆ. ಕೋಲಾರ ಚಿನ್ನಕ್ಕಷ್ಟೇ ಅಲ್ಲ ಅಚ್ಚುಮೆಚ್ಚಿನ ತಿಂಡಿ ತಿನಿಸುಗಳಿಗೂ ಫೇಮಸ್. ಅಷ್ಟಕ್ಕೂ ಯಾವುದಾ ಜಾಗ? ಆ ಜಾಗಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆ? ಎಲ್ಲವೂ ಈ ಸ್ಟೋರಿಯಲ್ಲಿದೆ.
ಕೆಜಿಎಫ್ ನಗರದಲ್ಲಿಯೇ ಪ್ರಖ್ಯಾತ ಬೇಕರಿ ಎಂದರೆ, ಅದೇ ಬ್ರಿಟೀಷರ ಕಾಲದಲ್ಲೇ ಪ್ರಸಿದ್ಧಿ ಪಡೆದ ನ್ಯೂ ಇಂಪಿರಿಯಲ್ ಬೇಕರಿ. ಈಗಾಗಲೇ ನಾಲ್ಕು ತಲೆಮಾರುಗಳಷ್ಟು ಹಳೆಯದಾಗಿದೆ. ಸಯ್ಯದ್ ದಿವಾನ್ ಎಂಬುವವರು 1880ರ ದಶಕದಲ್ಲಿ ಈ ಬೇಕರಿಯನ್ನು ಆರಂಭಿಸಿದ್ದರು. ಈ ಬೇಕರಿ ಆಗಿನ ಬ್ರಿಟೀಷರ ಆಕರ್ಷಣೀಯ ಕೇಂದ್ರವಾಗಿತ್ತು ಎಂದು ಹೇಳಲಾಗುತ್ತದೆ. ಅಂದಿನ ದಿನಗಳಲ್ಲಿ ಕೆಜಿಎಫ್ ಚಿನ್ನದ ಗಣಿಗಾರಿಕೆ ಉತ್ತುಂಗದಲ್ಲಿತ್ತು. ಅಲ್ಲಿ ಕೆಲಸ ಮಾಡುವ ಗಣಿ ಕಾರ್ಮಿಕರಿಂದ ಹಿಡಿದು, ಸಾವಿರಾರು ಸಂಖ್ಯೆಯ ಬ್ರಿಟಿಷ್ ಅಧಿಕಾರಿಗಳಿಗೆ, ಹಾಗೂ ಎದುರೇ ಇದ್ದ ಬ್ರಿಟಿಷರ ಕಾಲದ ಆಸ್ಪತ್ರೆಗೆ ಆಹಾರದ ಆಧಾರದ ಸ್ತಂಭವಾಗಿದ್ದೆ ಇದೇ ನ್ಯೂ ಇಂಪಿರಿಯಲ್ ಬೇಕರಿ.
ಈ ತಂತ್ರಜ್ಞಾನ ಯುಗದಲ್ಲಿ ಇಂದಿನ ದಿನಗಳ ಆಧುನಿಕರಣೀಯ ಮಾದರಿಯನ್ನು ಅನುಸರಿಸದೆ, ಹಳೆಯ ಕಾಲದ ಸಾಂಪ್ರದಾಯಕ ಶೈಲಿಯ ಸೌದೆ ಒಲೆಯನ್ನು ಉಪಯೋಗಿಸಿ ತಿಂಡಿಗಳನ್ನು ತಯಾರು ಮಾಡುತ್ತಾರೆ ಎಂದರೆ ಈಗ ಯಾರು ನಂಬುತ್ತಾರೆ ಹೇಳಿ, ಅದರೂ ನಂಬಲೇ ಬೇಕು. ಕೆಜಿಎಫ್ ನಗರದ ಬಿಜಿಎಂಎಲ್ ಆಸ್ಪತ್ರೆ ಎದುರಿನ ಓಲ್ಡ್ ಬೇಕರಿಯ ಕಟ್ಟಡ ಅತ್ಯಂತ ಹಳೆಯದು, ಅಷ್ಟಾಗಿ ನಮ್ಮನ್ನು ಆಕರ್ಷಣೆ ಮಾಡದೆ ಇರಬಹುದು. ಆದರೆ ಇಲ್ಲಿ ಸಿಗುವ ಬಗೆ ಬಗೆಯ ತಿಂಡಿ-ತಿನಿಸುಗಳಿಗೆ ಮನಸೋಲದವರೇ ಇಲ್ಲ. ಈ ಬೇಕರಿಯಲ್ಲಿ ಈಗಲೂ ಹಳೆಯ ಕಾಲದ ಸೌದೆ ಬಳಸುವ ಓವೆನ್ ಮೂಲಕವೇ ತಿಂಡಿಗಳನ್ನು ಬೇಕ್ ಮಾಡಲಾಗುತ್ತದೆ. ಆಧುನಿಕ ತಂತ್ರಜ್ಞಾನಗಳ ಬದಲು ಕೈ ಮೂಲಕವೇ ಶುಚಿಯಾದ ಮತ್ತು ರುಚಿಕರವಾದ ಮಾಫಿನ್ಸ್, ರಸ್ಕ್, ಪಪ್ಸ್, ಬಿಸ್ಕೇಟ್ಗಳು ಬಿಸಿ ಬಿಸಿಯಾಗಿಯೇ ಗ್ರಾಹಕರಿಗೆ ಬಡಿಸುತ್ತಾರೆ.
ಇದನ್ನೂ ಓದಿ- ವಿದೇಶಿಯರಿಗೂ ಬಲು ಪ್ರಿಯ ಪನೀರ್ನ ಈ 8 ಫೇಮಸ್ ರೆಸಿಪೀಸ್
ಈಗೀನ ಜನರೇಷನ್ಸ್ ಪೂರ್ವಜರು ಮಾಡಿರೋ ಆಸ್ತಿಯನ್ನೇ ಕೂತು ಕರಗಿಸುವಂತ ಕಾಲದಲ್ಲಿ , ಇಲ್ಲಿ ಒಂದೇ ಕುಟುಂಬದ ನಾಲ್ಕನೇ ತಲೆಮಾರಿನ ತನಕ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ವಿಶೇಷ ಸಂಗತಿ. ಈ ಬೇಕರಿ ಮಾಲೀಕರಾದ ಇಸ್ಮಾಯಿಲ್ ಇದೀಗ ಬೇಕರಿಯನ್ನು ಎಂದಿನಂತೆ ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ತಿಂಡಿ ತಿನಿಸು ಎಷ್ಟರ ಮಟ್ಟಿಗೆ ಹೆಸರುವಾಸಿಯೆಂದರೆ, ನಗರದಿಂದ ಎಷ್ಟೋ ಕಿಲೋ ಮೀಟರ್ಗಳಷ್ಟು ದೂರವಿದ್ದರೂ, ಇವತ್ತಿಗೂ ಜನರು ಈ ಬೇಕರಿಯನ್ನು ಮರೆತಿಲ್ಲ. ಈಗಲೂ ಬೇಕರಿಗೆ ಬಂದು ಬಿಸಿ ಬಿಸಿಯಾದ ತಿಂಡಿ ತಿನಿಸುಗಳನ್ನು ಖರೀದಿಸುತ್ತಾರೆ.
ಆದ್ರೆ ಇಲ್ಲಿನ ತಿನಿಸುಗಳ ರುಚಿ ನೋಡಿರುವವರು ಎಷ್ಟೇ ದೂರು ಹೋಗಿದ್ದರೂ ಸಹ ಕೆಜಿಎಫ್ ಗೆ ಬಂದರೆ ಈ ಬೇಕರಿಗೆ ಭೇಟಿ ನೀಡಿ ಇಲ್ಲಿಯ ತಿನಿಸುಗಳನ್ನು ಖರೀದಿಸದೆ ಹೋಗುವುದಿಲ್ಲ. ಆಂಗ್ಲರು ದೇಶವನ್ನು ಬಿಟ್ಟು ಹೋದರು ಈಗಲೂ ಕೂಡ ಕೆಲವರು ಇಲ್ಲಿಯ ಬೇಕರಿಯನ್ನು ಇನ್ನೂ ಮರೆತಿಲ್ಲ, ಭಾರತಕ್ಕೆ ಬಂದ್ರೆ ಇಲ್ಲಿಗೆ ಬಂದೇ ಹೋಗುತ್ತಾರಂತೆ, ಬೇಕರಿ ಆರಂಭಿಸಿದ ಸಯ್ಯದ್ ದಿವಾನ್ ಬಳಿಕ, ಅವರ ಮಗ ಸಯ್ಯದ್ ಜಾಫರ್, ನಂತರ ಹುಸೇನ್, ಇದೀಗ ಹುಸೇನ್ ಅವರ ಮಗ ಇಸ್ಮಾಯಿಲ್ ನಾಲ್ಕನೇ ತಲೆಮಾರಿಗೆ ಬೇಕರಿ ನಡೆಸಿಕೊಂಡು ತಮ್ಮ ಮುಂದಿನ ತಲೆಮಾರಿಗೆ ಬೇಕರಿಯನ್ನು ಉಳಿಸಿಕೊಂಡು ಹೊಗುತ್ತಿರುವ ಪ್ರಯತ್ನಕ್ಕೆ ಸೈ ಅನ್ನಲೇಬೇಕು.
ಇದನ್ನೂ ಓದಿ- ಒಡೆದ ಹಿಮ್ಮಡಿಗೆ ಈ ಮನೆಮದ್ದಿನಿಂದ ಒಂದೇ ವಾರದಲ್ಲಿ ಸಿಗುತ್ತೆ ಸುಲಭ ಪರಿಹಾರ
ಕೆಜಿಎಫ್ನ ಇತಿಹಾಸದ ಒಂದು ಭಾಗವಾಗಿಯೂ ಇಲ್ಲಿನ ಜನರ ಮನಸ್ಸಲ್ಲಿ ಈಗಲೂ ನ್ಯೂ ಇಂಪಿರಿಯಲ್ ಬೇಕರಿ ಬೇರೂರಿದೆ. ಯಾವುದೇ ರೀತಿಯ ನೂತನ ತಂತ್ರಜ್ಞಾನದ ಮಿಷನ್ಗಳಿಗೆ ಮನ ಸೋಲದೇ ಈಗಲೂ ಸಾಂಪ್ರಾದಯಕ ಶೈಲಿಯಲ್ಲೆಯೇ ಬೇಕರಿ ಪ್ರಿಯರಿಗೆ ತಮ್ಮ ಬೇಕರಿ ಉತ್ಪನ್ನಗಳನ್ನು ಗ್ರಾಹಕರಿಗೆ ಬಡಿಸುತ್ತಿರೋದು ನಿಜಕ್ಕೂ ಶ್ಲಾಘನೀಯ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.