"ಲೀಲಾವತಿ ಬೆಡ್ ರೂಂನಲ್ಲಿದ್ದ ರಾಜ್’ಕುಮಾರ್’ಗೆ ಊಟ ಮಾಡಿಸುವ ಫೋಟೋ…"-ಬ್ರಹ್ಮಾಂಡ ಗುರೂಜಿ

Brahmanda Guruji: ಲೀಲಾವತಿಯವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕಿದ ಬ್ರಹ್ಮಾಂಡ ಗುರೂಜಿ, “ಬೆಡ್‌ ರೂಂನಲ್ಲಿ ರಾಜ್‌ಕುಮಾರ್‌’ಗೆ ಊಟ ಮಾಡಿಸುತ್ತಿರುವ ಫೋಟೋ ಒಂದನ್ನು ತೋರಿಸಿದ್ರು. ಅದೆಷ್ಟು ಚೆನ್ನಾಗಿದೆ ಗೊತ್ತಾ?” ಎಂದು ಹೇಳಿದ್ದಾರೆ

Written by - Bhavishya Shetty | Last Updated : Dec 12, 2023, 08:36 PM IST
    • ಹಿರಿಯ ನಟಿ ಲೀಲಾವತಿ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ
    • ಲೀಲಾವತಿಯವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕಿದ ಬ್ರಹ್ಮಾಂಡ ಗುರೂಜಿ
    • ಬಗ್ಗೆ ಬಿಗ್ ಬಾಸ್ ಖ್ಯಾತಿಯ ಬ್ರಹ್ಮಾಂಡ ಗುರೂಜಿ
"ಲೀಲಾವತಿ ಬೆಡ್ ರೂಂನಲ್ಲಿದ್ದ ರಾಜ್’ಕುಮಾರ್’ಗೆ ಊಟ ಮಾಡಿಸುವ ಫೋಟೋ…"-ಬ್ರಹ್ಮಾಂಡ ಗುರೂಜಿ  title=
Brahmanda Guruji Statement About Leelavati

Brahmanda Guruji: ಕನ್ನಡ ಸಿನಿರಂಗದ ಹಿರಿಯ ನಟಿ ಲೀಲಾವತಿ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಅಗಲಿಕೆಯ ನೋವು ಇಂದಿಗೂ ಕಾಡುತ್ತಿದೆ. ಸಿನಿಮಾಗಳು ಮಾತ್ರವಲ್ಲದೆ, ಸಮಾಜಸೇವೆಯಿಂದಲೂ ಮನೆಮಾತಾಗಿದ್ದ ಲೀಲಾವತಿ ಅವರ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮತ್ತೆ ಬರ್ತಿದ್ದಾರೆ ಜೂ. ಧೋನಿ… ವರ್ಷದ ಬಳಿಕ ತಂಡಕ್ಕೆ ಮರಳಿದ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ!

ಲೀಲಾವತಿಯವರೊಂದಿಗೆ ಕಳೆದ ಸವಿ ನೆನಪುಗಳನ್ನು ಮೆಲುಕು ಹಾಕಿದ ಬ್ರಹ್ಮಾಂಡ ಗುರೂಜಿ, “ಬೆಡ್‌ ರೂಂನಲ್ಲಿ ರಾಜ್‌ಕುಮಾರ್‌’ಗೆ ಊಟ ಮಾಡಿಸುತ್ತಿರುವ ಫೋಟೋ ಒಂದನ್ನು ತೋರಿಸಿದ್ರು. ಅದೆಷ್ಟು ಚೆನ್ನಾಗಿದೆ ಗೊತ್ತಾ?” ಎಂದು ಹೇಳಿದ್ದಾರೆ.  

ಲೀಲಾವತಿಯವರು ಕಟ್ಟಿಸಿದ ಹೊಸ ಮನೆಗೆ ಬ್ರಹ್ಮಾಂಡ ಗುರೂಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ಮನುಷ್ಯನಿಗೆ ಮನುಷತ್ವ ಮುಖ್ಯ, ಲೀಲಾವತಿಯವರಿಗೆ ಆತ್ಮೀಯತೆ ಹೆಚ್ಚು. ಪ್ರೀತಿ ವಾತ್ಸಲ್ಯ ಜಾಸ್ತಿ ಇರಬೇಕು ಅಂತಿದ್ದರು. ಇದೇ ಕಾರಣಕ್ಕೆ ಮಗನನ್ನು ಹೆಚ್ಚಾಗಿ ಜೊತೆಯಲ್ಲೇ ಇರಿಸಿಕೊಂಡಿದ್ದರು. ಅವನನ್ನು ಸ್ವಲ್ಪ ಫ್ರೀ ಆಗಿ ಬಿಟ್ಟಿದ್ದರೆ, ಧೈರ್ಯವಾಗಿರುತ್ತಿದ್ದನೋ ಏನೋ? ಆದರೆ ಏನಾಗಿದೆ… ವಿನೋದ್‌’ಗೆ ಧೈರ್ಯವಿಲ್ಲ" ಎಂದಿದ್ದಾರೆ.

"ಹೊಸ ಮನೆ ಕಟ್ಟಿಸಿದ ಮೇಲೆ ಅಲ್ಲಿಗೆ ಹೋಗಿದ್ದಾಗ ಅವಾರ್ಡ್‌’ಗಳನ್ನು ತೋರಿಸಿದ್ರು. ಅದೇ ವೇಳೆ ಬೆಡ್‌ ರೂಂನಲ್ಲಿದ್ದ ರಾಜ್‌’ಕುಮಾರ್‌’ಗೆ ಊಟ ಮಾಡಿಸುವ ಫೋಟೋ ತೋರಿಸಿದರು. ಎಷ್ಟು ಚೆನ್ನಾಗಿದೆ… ನೀವೇನಾದರೂ ನೋಡಿದ್ರೆ… ರಾಜ್‌ ಕುಮಾರ್ ಅವರನ್ನು ಲೀಲಾವತಿ ಎಷ್ಟು ಪ್ರೀತಿ ಮಾಡುತ್ತಿದ್ರು ಎಂಬುದು ಗೊತ್ತಾಗುತ್ತೆ” ಎಂದಿದ್ದಾರೆ.

ಇದನ್ನೂ ಓದಿ: ಮಿಡಲ್ ಸ್ಟಂಪ್ ಕಿತ್ತು ನೆಲಕ್ಕೆ ಬಿದ್ದರೂ ನಾಟೌಟ್ ಎಂದ ಅಂಪೈರ್!

ಈ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News