ಸತತ ಅರ್ಧಶತಕ ಸಿಡಿಸಿ ಶ್ರೇಷ್ಠ ದಾಖಲೆ ಬರೆದ ಸಾಯಿ ಸುದರ್ಶನ್: ಕ್ರಿಕೆಟ್ ಇತಿಹಾಸದಲ್ಲೇ ಬಲು ಅಪರೂಪದ ರೆಕಾರ್ಡ್ ಇದು…

IND vs SA 2nd ODI Highlights: ಸಾಯಿ ಸುದರ್ಶನ್ (62) ಕಳೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ್ದು, ಇದೀಗ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. 83 ಎಸೆತಗಳ ತಮ್ಮ ಇನ್ನಿಂಗ್ಸ್‌’ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ.

Written by - Bhavishya Shetty | Last Updated : Dec 19, 2023, 10:57 PM IST
    • ಸಾಯಿ ಸುದರ್ಶನ್ ಸತತ ಎರಡನೇ ODI ನಲ್ಲಿ ಅರ್ಧ ಶತಕ ಬಾರಿಸಿದರು
    • ODI ಪದಾರ್ಪಣೆಯ ಬಳಿಕ ಸತತ ಅರ್ಧಶತಕ ಗಳಿಸಿದ ಭಾರತೀಯರು
    • ಕ್ರಿಕೆಟ್ ಇತಿಹಾಸದಲ್ಲೇ ಬಲು ಅಪರೂಪದ ರೆಕಾರ್ಡ್ ಇದು
ಸತತ ಅರ್ಧಶತಕ ಸಿಡಿಸಿ ಶ್ರೇಷ್ಠ ದಾಖಲೆ ಬರೆದ ಸಾಯಿ ಸುದರ್ಶನ್: ಕ್ರಿಕೆಟ್ ಇತಿಹಾಸದಲ್ಲೇ ಬಲು ಅಪರೂಪದ ರೆಕಾರ್ಡ್ ಇದು… title=
sai sudarshan

IND vs SA 2nd ODI Highlights: ಯುವ ಆರಂಭಿಕರಾದ ಸಾಯಿ ಸುದರ್ಶನ್ ಸತತ ಎರಡನೇ ODI ನಲ್ಲಿ ಅರ್ಧ ಶತಕ ಬಾರಿಸಿದರು. ಇದರ ಹೊರತಾಗಿಯೂ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ODI (IND vs SA) ನಲ್ಲಿ 46.2 ಓವರ್‌’ಗಳಲ್ಲಿ 211 ರನ್‌’ಗಳಿಗೆ ಆಲೌಟ್ ಆಗಿತ್ತು. ಸುದರ್ಶನ್ ಹೊರತಾಗಿ ನಾಯಕ ಕೆಎಲ್ ರಾಹುಲ್ (56) ಕೂಡ ಅರ್ಧಶತಕ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ನಾಂಡ್ರೆ ಬರ್ಗರ್ 3 ವಿಕೆಟ್ ಪಡೆದರು.

ಇದನ್ನೂ ಓದಿ: ಸಾಕ್ಷಾತ್ ಶಿವಸುತ ಗಣಪತಿಯೇ ಮೆಚ್ಚಿದ ರಾಶಿಗಳಿವು: 2024ರಲ್ಲಿ ಇವರಾಗಿರುತ್ತಾರೆ ಅದೃಷ್ಟಕ್ಕೆ ಮತ್ತೊಂದು ಹೆಸರು…

ಇನ್ನು ಸಾಯಿ ಸುದರ್ಶನ್ (62) ಕಳೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ್ದು, ಇದೀಗ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. 83 ಎಸೆತಗಳ ತಮ್ಮ ಇನ್ನಿಂಗ್ಸ್‌’ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಸುದರ್ಶನ್ ಮತ್ತು ನಾಯಕ ರಾಹುಲ್ ಮೂರನೇ ವಿಕೆಟ್‌’ಗೆ 68 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ 64 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿದರು. ಇವರಲ್ಲದೆ, ತಿಲಕ್ ವರ್ಮಾ (10), ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (12), ರಿಂಕು ಸಿಂಗ್ (17) ಮತ್ತು ಅರ್ಷದೀಪ್ ಸಿಂಗ್ (18) ಅಲ್ಪ ಮೊತ್ತ ಕಲೆಹಾಕಲಷ್ಟೇ  ಶಕ್ತರಾದರು.

ದಕ್ಷಿಣ ಆಫ್ರಿಕಾ ಪರ ಎಡಗೈ ವೇಗಿ ನಾಂಡ್ರೆ ಬರ್ಗರ್ ಗರಿಷ್ಠ 3 ವಿಕೆಟ್ ಪಡೆದರು. ರುತುರಾಜ್ ಗಾಯಕ್ವಾಡ್ (4), ತಿಲಕ್ ವರ್ಮಾ ಹಾಗೂ ನಾಯಕ ರಾಹುಲ್’ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಈತನೇ. ಇವರಲ್ಲದೆ ಬುರಾನ್ ಹೆಂಡ್ರಿಕ್ಸ್ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರೆ, ನಾಯಕ ಏಡೆನ್ ಮಾರ್ಕ್ರಾಮ್ ಮತ್ತು ಲಿಜರ್ಡ್ ವಿಲಿಯಮ್ಸ್ ತಲಾ 1 ವಿಕೆಟ್ ಪಡೆದರು.

ವಿಶೇಷ ದಾಖಲೆ ಬರೆದ ಸುದರ್ಶನ್:

ಮಂಗಳವಾರ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸಾಯಿ ಸುದರ್ಶನ್ ವೃತ್ತಿಜೀವನದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ನವಜೋತ್ ಸಿಂಗ್ ಸಿಧು 1987 ರಲ್ಲಿ ತಮ್ಮ ಮೊದಲ ನಾಲ್ಕು ODI ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದರು. ಅವರ ಬಳಿಕ ಸುದರ್ಶನ್ ಈ ಅಪರೂಪದ ದಾಖಲೆ ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ.

ODI ಪದಾರ್ಪಣೆಯ ಬಳಿಕ ಸತತ ಅರ್ಧಶತಕ ಗಳಿಸಿದ ಭಾರತೀಯರು:

  • ನವಜೋತ್ ಸಿಂಗ್ ಸಿಧು: 73 ರನ್ vs ಆಸ್ಟ್ರೇಲಿಯಾ, 75 ರನ್ vs ನ್ಯೂಜಿಲೆಂಡ್, 51 ರನ್ vs ಆಸ್ಟ್ರೇಲಿಯಾ, 55 ರನ್ vs ಜಿಂಬಾಬ್ವೆ
  • ಸಾಯಿ ಸುದರ್ಶನ್ - ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 55 ರನ್, ದಕ್ಷಿಣ ಆಫ್ರಿಕಾ ವಿರುದ್ಧ 63 ರನ್

ಇದನ್ನೂ ಓದಿ: RCBಯ ಈ 4 ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಖಚಿತ ಎಂದ ಕೋಚ್ ಆಂಡಿ ಫ್ಲವರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News