ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ

ವಿವಾಹಿತ ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಸಮಸ್ಯೆಗಳಿಗೆ ರಕ್ಷಣೆ ನೀಡುವ ಈ ವಿಧೇಯಕದಲ್ಲಿ ತಮ್ಮ ಪತ್ನಿಯರಿಗೆ ತಲಾಖ್.. ತಲಾಖ್.. ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಪತಿಯರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. 

Last Updated : Aug 1, 2019, 04:12 PM IST
ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ title=
File Image

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾಗಿದ್ದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಅಂಕಿತ ಹಾಕಿದ್ದಾರೆ. 

ಸದ್ಯದಲ್ಲಿಯೇ ಅದು ಕಾನೂನಾಗಿ ಜಾರಿಗೆ ಬರಲಿದ್ದು, ವಿವಾಹಿತ ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಸಮಸ್ಯೆಗಳಿಗೆ ರಕ್ಷಣೆ ನೀಡುವ ಈ ವಿಧೇಯಕದಲ್ಲಿ ತಮ್ಮ ಪತ್ನಿಯರಿಗೆ ತಲಾಖ್.. ತಲಾಖ್.. ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಪತಿಯರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. 

ಈ ಹಿಂದೆ ಮುಸ್ಲಿಂ ಧರ್ಮದ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇತ್ತು. ಇದರನ್ವಯ ಪತಿಯು ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿತ್ತು. ಆದರೆ ಮುಸ್ಲಿಂ ಪುರುಷರು ಇದನ್ನು ದುರ್ಬಳಕೆ ಮಾಡುವುದರಿಂದ ಮದುವೆಯಾದ ಮುಸ್ಲಿಂ ಮಹಿಳೆಯರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿತ್ತು.

ಕಾನೂನು ದುರ್ಬಳಕೆಯಾಗುತ್ತಿದ್ದ ಬಗ್ಗೆ ಸಾಕಷ್ಟು ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನಲ್ಲೆಯಲ್ಲಿ ಇದನ್ನು ಮನಗಂಡ ತ್ರಿವಳಿ ತಲಾಖ್ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಿತು. ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದ್ದು ಇನ್ನು ಮುಂದೆ ತ್ರಿವಳಿ ತಲಾಖ್ ಹೇಳಿದರೆ ಕ್ರಿಮಿನಲ್ ಅಪರಾಧವಾಗಲಿದೆ. 

Trending News