Salar: ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಮೊದಲ ಭಾಗ ಮೊನ್ನೆ ಪ್ಯಾನ್ ಇಂಡಿಯಾ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಈ ಚಿತ್ರದ ನಿರ್ದೇಶಕರಾಗಿದ್ದು, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇದರೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ಸ್ ಸಿಕ್ಕಿದ್ದು.. ಸಲಾರ್‌ನ ಮೊದಲ ದಿನದ ಕಲೆಕ್ಷನ್‌ಗಳು ಮತ್ತೊಮ್ಮೆ ಬಾಲಿವುಡ್‌ನ ಟೆನ್ಶನ್‌ಗೆ ಕಾರಣವಾಗಿವೆ..
ಮೊದಲ ದಿನವೇ ವಿಶ್ವಾದ್ಯಂತ ಚಿತ್ರ 178.7 ಕೋಟಿ ಗಳಿಸಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಅಂದರೆ ನಿವ್ವಳ ಕಲೆಕ್ಷನ್ 89 ಕೋಟಿಗೂ ಹೆಚ್ಚು.. ಈ ವರ್ಷ ಬಾಲಿವುಡ್‌ನ ಶಾರುಖ್ ಖಾನ್ ಮತ್ತು ರಣಬೀರ್ ಕಪೂರ್ ಅವರ ಚಿತ್ರಗಳು ಭಾರತದಾದ್ಯಂತ ದೊಡ್ಡ ಓಪನಿಂಗ್ ಗಳಿಸಿದ್ದು.. ಪಠಾಣ್ 106 ಕೋಟಿ, ಜವಾನ್ 129 ಕೋಟಿ ಮತ್ತು ಅನಿಮಲ್ 116 ಕೋಟಿ ಗ್ರಾಸ್ ಪಡೆದಿವೆ. ಆದರೆ ಇದೀಗ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ.. ಬಾಲಿವುಡ್ ಸ್ಟಾರ್ ಗಳ ಸಿನಿಮಾಗಳನ್ನು ಮೀರಿ ಕಲೆಕ್ಷನ್ ಪಡೆಯುವ ಮೂಲಕ ಸಂಚಲನ ಮೂಡಿಸಿದೆ..
The most violent man announced his arrival ⚠️#SalaarCeaseFire hits 𝟏𝟕𝟖.𝟕 𝐂𝐑𝐎𝐑𝐄𝐒 𝐆𝐁𝐎𝐂 (worldwide) on the opening day!
𝐓𝐡𝐞 𝐛𝐢𝐠𝐠𝐞𝐬𝐭 𝐨𝐩𝐞𝐧𝐢𝐧𝐠 𝐟𝐨𝐫 𝐚𝐧𝐲 𝐈𝐧𝐝𝐢𝐚𝐧 𝐅𝐢𝐥𝐦 𝐢𝐧 𝟐𝟎𝟐𝟑 💥#BlockbusterSalaar #RecordBreakingSalaar… pic.twitter.com/dJokmsdXMq
— Salaar (@SalaarTheSaga) December 23, 2023
ಇದನ್ನೂ ಓದಿ-Salar: ಪ್ರಭಾಸ್ ಜೊತೆ ನಟಿಸಲು ಪೃಥ್ವಿರಾಜ್ ಸುಕುಮಾರನ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಈ ಕಲೆಕ್ಷನ್ ನೋಡಿದ ಮೇಲೆ ಬಾಲಿವುಡ್ ಮಂದಿಗೆ ಮತ್ತೆ ಟೆನ್ಶನ್ ಶುರುವಾಗಿದೆ. ಇಲ್ಲಿಯವರೆಗೆ ಬಾಲಿವುಡ್ ಇಂಡಸ್ಟ್ರಿಯ ಹಿಟ್ ಲಿಸ್ಟ್ ನಲ್ಲಿ ಬಾಹುಬಲಿ 2 ಮೊದಲ ಸ್ಥಾನದಲ್ಲಿದೆ. ಈ ವರ್ಷ ಪಠಾಣ್ ಚಿತ್ರದ ಮೂಲಕ ಶಾರುಖ್ ಖಾನ್ ಆ ಸ್ಥಾನವನ್ನು ಪಡೆದುಕೊಂಡರು. ಆ ನಂತರ ಜವಾನ್ ಮೊದಲ ಸ್ಥಾನ, ಪಠಾಣ್ ಎರಡನೇ ಸ್ಥಾನ ಮತ್ತು ಬಾಹುಬಲಿ 2 ಮೂರನೇ ಸ್ಥಾನಕ್ಕೆ ಸೇರ್ಪಡೆಗೊಂಡಿತು. ಇದೀಗ ಸಲಾರ್ ಮೊದಲ ದಿನವೇ ಈ ರೇಂಜ್ ಕಲೆಕ್ಷನ್ ಪಡೆದಿದ್ದು, ಮತ್ತೆ ಮೊದಲ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಬಾಲಿವುಡ್ ಮಂದಿ..
ಇನ್ನು Netflix ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು.. 300 ಕೋಟಿಗೂ ಹೆಚ್ಚು ಹಣ ನೀಡಿ ಈ ಹಕ್ಕುಗಳನ್ನು ಕೊಂಡುಕೊಂಡಿದೆ ಎನ್ನಲಾಗಿದೆ. ಎಂಟು ವಾರಗಳ (ಎರಡು ತಿಂಗಳು) ನಂತರ ಈ ಚಿತ್ರ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.. ಈ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳ ಒಟ್ಟು ವ್ಯವಹಾರ ಸುಮಾರು 350 ಕೋಟಿ ವರೆಗೂ ಆಗಿದೆ ಎನ್ನಲಾಗಿದೆ. ಈ ಹಿಂದೆ RRR ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು 325 ಕೋಟಿಗೆ ಮಾರಾಟವಾಗಿದೆ ಎಂದು ವರದಿಯಾಗಿದ್ದು.. ಈ ವಿಷಯದಲ್ಲೂ ಸಲಾರ್ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ-ಬಸು ಕುಮಾರ್ ಈಗ "ಡಿಟೆಕ್ಟಿವ್ ಗಜವದನ" ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ