Prithviraj Sukumaran: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದಲ್ಲಿ ಮೂಡಿಬಂದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಪ್ರೀ ಬುಕ್ಕಿಂಗ್ ನಿಂದಲೇ ಸುನಾಮಿ ಎಬ್ಬಿಸುತ್ತಿದೆ.. ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ.. ವಾರಾಂತ್ಯ ಮಾತ್ರವಲ್ಲದೆ ಇನ್ನೂ ಹದಿನೈದು ದಿನಗಳ ಕಾಲ ಬಾಕ್ಸ್ ಆಫೀಸ್ ಅಲ್ಲಾಡಿಸುವುದು ಖಚಿತವಾಗಿದೆಯಂತೆ. ಈ ಹಿನ್ನಲೆಯಲ್ಲಿ ಈ ಚಿತ್ರದ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ. ಅದರಲ್ಲೂ ಈ ಚಿತ್ರಕ್ಕೆ ಯಾರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎನ್ನು ವಿಚಾರ ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ..
ಪ್ರಭಾಸ್ 100 ಕೋಟಿ ಸಂಭಾವನೆ ಮತ್ತು ಲಾಭದಲ್ಲಿ ಪಾಲು ನಿಗದಿಪಡಿಸಿರುವುದು ಗೊತ್ತೇ ಇದೆ. ಇನ್ನು ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಎಷ್ಟು ಸಂಭಾವನೆ ಪಡೆದಿದ್ದಾರೆ.. ಎಂಬುದು ಇದೀಗ ಬಿಸಿಬಿಸಿ ಚರ್ಚೆಯಾಗುತ್ತಿದೆ.. ಸಿಕ್ಕಿರುವ ಮಾಹಿತಿ ಪ್ರಕಾರ.. ವರದರಾಜ ಪಾತ್ರದಲ್ಲಿ ನಟಿಸಲು ಪೃದ್ವಿರಾಜ್ ಗೆ ನಾಲ್ಕು ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ...
ಇದನ್ನೂ ಓದಿ-ಬಸು ಕುಮಾರ್ ಈಗ "ಡಿಟೆಕ್ಟಿವ್ ಗಜವದನ" ..!
ಇನ್ನು ಈ ಚಿತ್ರ ಕೇರಳದಲ್ಲೂ ಧೂಳೆಬ್ಬಿಸುತ್ತಿದೆ. ಅಲ್ಲಿ ಮೊದಲ ದಿನವೇ ಆನ್‌ಲೈನ್ ಬುಕ್ಕಿಂಗ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.. ಕೇರಳದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ.. ಫಸ್ಟ್ ಮಾರ್ನಿಂಗ್ ಶೋನಿಂದ ರಾತ್ರಿ ಸೆಕೆಂಡ್ ಶೋ ವರೆಗೆ ಒಂದು ಶೋನ ಟಿಕೆಟ್ ಕೂಡ ಮಿಕ್ಕಿರಲಿಲ್ಲ.. ಮತ್ತೊಂದೆಡೆ, ಚಿತ್ರದ ಬ್ಲಾಕ್ ಬಸ್ಟರ್ ಟಾಕ್‌ನೊಂದಿಗೆ, ಶನಿವಾರ ಮತ್ತು ಭಾನುವಾರದ ಟಿಕೆಟ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಮುಂಗಡವಾಗಿ ಬುಕ್ ಮಾಡಲಾಗುತ್ತಿದೆ...
ಇದನ್ನೂ ಓದಿ-ಡಿವೋರ್ಸ್ ಸುದ್ದಿ ಬೆನ್ನಲೇ ಪಬ್ಲಿಕ್’ನಲ್ಲೇ ಜಗಳವಾಡಿದ ಅಭಿಷೇಕ್-ಐಶ್ವರ್ಯಾ ರೈ!
#Salaar 1 ಬದ್ಧ ವೈರಿಗಳಾಗುವ ಇಬ್ಬರು ಸ್ನೇಹಿತರ ಕಥೆಯೊಂದಿಗೆ ಈ ಚಿತ್ರ ಎರಡು ಭಾಗಗಳಲ್ಲಿ ಮುಂದುವರೆಯುತ್ತದೆ.. ಮೊದಲ ಭಾಗವು 'ಸಲಾರ್ ಭಾಗ 1' ಎಂದು ಬಿಡುಗಡೆಯಾಗಿದ್ದು.. ಚಿತ್ರದಲ್ಲಿ ಶ್ರುತಿ ಹಾಸನ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಬಾಲಿವುಡ್ ಖ್ಯಾತ ನಟ ಮತ್ತು ನಿರ್ದೇಶಕ ಟಿನು ಆನಂದ್, ಜಗಪತಿ ಬಾಬು, ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಚಿತ್ರಗಳು ತೆಲುಗು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾದರೂ ಕ್ರೇಜ್ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಪ್ರಭಾಸ್ ಫ್ಯಾನ್ ಫಾಲೋಯಿಂಗ್. ಅಲ್ಲದೆ ಅವರ ಕ್ರೇಜಿ ಕಾಂಬಿನೇಷನ್‌ಗಳು. ಅಲ್ಲದೇ ಸಲಾರ್ ಹೊರತುಪಡಿಸಿ ಅವರ ಮುಂಬರುವ ಸಿನಿಮಾಗಳ ನಿರೀಕ್ಷೆಗಳು ಗಗನಕ್ಕೇರಿವೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ #Salaar ಸಿನಿಮಾವನ್ನು ನಿರ್ದೇಶನ ಮಾಡಿದ್ದರಿಂದ ಪ್ರಭಾಸ್ ಗೆ ಈ ಸಿನಿಮಾ ಖಂಡಿತಾ ಬ್ಲಾಕ್ ಬಸ್ಟರ್ ಆಗಲಿದೆ ಎನ್ನಲಾಗುತ್ತಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ