ಸತತ ಮೂರನೇ ದಿನವೂ ಇಳಿಕೆ ಕಂಡ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಸ್ಥಿರ

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 7 ಪೈಸೆಗಳಷ್ಟು ಇಳಿಕೆ ಕಂಡಿದ್ದು, ಡೀಸೆಲ್ ಬೆಲೆ ಸ್ಥಿರವಾಗಿದೆ.

Last Updated : Aug 3, 2019, 09:22 AM IST
ಸತತ ಮೂರನೇ ದಿನವೂ ಇಳಿಕೆ ಕಂಡ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಸ್ಥಿರ title=

ನವದೆಹಲಿ: ದೇಶಾದ್ಯಂತ ಶನಿವಾರದ ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 7 ಪೈಸೆಗಳಷ್ಟು ಇಳಿಕೆ ಕಂಡಿದ್ದು, ಡೀಸೆಲ್ ಬೆಲೆ ಸ್ಥಿರವಾಗಿದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಈ ಪರಿಷ್ಕೃತ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಈ ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ (ರೂ./ಲೀ)

ಡೀಸೆಲ್ (ರೂ./ಲೀ)

ದೆಹಲಿ 72.62 66.00
ಕೊಲ್ಕತ್ತಾ 75.30 68.19
ಮುಂಬೈ 78.27 69.17
ಚೆನ್ನೈ 75.44 69.71
ಬೆಂಗಳೂರು 75.06 68.18
ಹೈದರಾಬಾದ್ 77.16 71.88
ತಿರುವನಂತಪುರಂ 75.71 70.73

Trending News