Nepal Gift to Ram Mandir: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾಗಲಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ಸಾವಿರಾರು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನೆರೆಯ ರಾಷ್ಟ್ರ ನೇಪಾಳ ಕೂಡ ವಿಶೇಷ ವಸ್ತುಗಳನ್ನು ಕಳುಹಿಸಲಿದೆ.
ಇದನ್ನೂ ಓದಿ: ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2ನೇ ಪತ್ನಿ ಇವರೇ… ಡಿಕೆ ಗೆಳೆಯನೊಂದಿಗೇ ಓಡಿಹೋಗಿದ್ದಳು ಮೊದಲ ಪತ್ನಿ!
ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಸೀತಾ ಮಾತೆಯ ತವರು ಮನೆ ಎಂದು ಕರೆಯಲ್ಪಡುವ ನೇಪಾಳದಿಂದ ವಿವಿಧ ರೀತಿಯ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಬರಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
'ಮೈ ರಿಪಬ್ಲಿಕ್' ಪತ್ರಿಕೆಯ ಸುದ್ದಿ ಪ್ರಕಾರ, ಈ ವಸ್ತುಗಳನ್ನು ಕಳುಹಿಸಲು ಜನಕ್ಪುರ ಧಾಮ್-ಅಯೋಧ್ಯಾ ಧಾಮ್ ಯಾತ್ರೆಯನ್ನು ಆಯೋಜಿಸಲಾಗುತ್ತದೆ. ಜಾನಕಿ ದೇವಸ್ಥಾನದ ಜಂಟಿ ಮಹಾಂತ್ ರಾಮರೋಷನ್ ದಾಸ್ ವೈಷ್ಣವ್ ಮಾತನಾಡಿ, ಯಾತ್ರೆಯು ಜನವರಿ 18 ರಂದು ಪ್ರಾರಂಭವಾಗಿ ಜನವರಿ 20 ರಂದು ಮುಕ್ತಾಯಗೊಳ್ಳಲಿದೆ. ಅದರೊಂದಿಗೆ ತಂದ ವಸ್ತುಗಳನ್ನು ಅದೇ ದಿನ ಶ್ರೀ ರಾಮಮಂದಿರ ಟ್ರಸ್ಟ್ಗೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: “ತಂಡದ ಹಿತದೃಷ್ಟಿಯಿಂದ ಈತನೇ ಟೆಸ್ಟ್’ನಲ್ಲಿ ವಿಕೆಟ್ ಕೀಪರ್ ಆಗಿ ಆಡಲಿದ್ದಾನೆ”: ದ್ರಾವಿಡ್ ಹೇಳಿಕೆ
ಜನಕ್’ಪುರಧಾಮದಿಂದ ಹೊರಡುವ ಪ್ರಯಾಣವು ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌನ್ಗಢ, ಗಧಿಮಾಯಿ, ಬಿರ್ಗಂಜ್, ಬೆಟ್ಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್ಪುರ ಮೂಲಕ ಉತ್ತರ ಪ್ರದೇಶದ ಅಯೋಧ್ಯೆಯನ್ನು ತಲುಪಲಿದೆ. ಇದಕ್ಕೂ ಮೊದಲು ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಸಂಗ್ರಹಿಸಿದ ಸಾಲಿಗ್ರಾಮ ಕಲ್ಲುಗಳನ್ನು ಅಯೋಧ್ಯೆಗೆ ಶ್ರೀರಾಮನ ವಿಗ್ರಹವನ್ನು ತಯಾರಿಸಲು ಕಳುಹಿಸಲಾಗಿದೆ. ಇದನ್ನು ಉದ್ಘಾಟನಾ ದಿನದಂದು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ಪತ್ರಿಕೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ