ಮುಂಬೈ: ಸುರೇಶ ರೈನಾ ಶುಕ್ರವಾರದಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದರಿಂದಾಗಿ ಮುಂಬರುವ ದೇಶಿಯ ಕ್ರಿಕೆಟ್ ನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.ಈಗ ಅವರು ಮೊಣಕಾಲು ಸರ್ಜರಿಗೆ ಒಳಗಾಗಿರುವ ವಿಷಯವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ ಅವರಿಗೆ ಚೇತರಿಸಿಕೊಳ್ಳಲು ಕನಿಷ್ಠ 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯ ಎಂದು ತಿಳಿಸಿದೆ.
ಈಗ ಈ ಟ್ವೀಟ್ ನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಸುರೇಶ ರೈನಾ ಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. 'ನಿಮ್ಮ ವೃತ್ತಿ ಜೀವನದ ಕೆಲಸದಿಂದಾಗಿ ಅದರಲ್ಲೂ ವಿಶೇಷವಾಗಿ ಕಳೆದ ಕೆಲವು ವರ್ಷಗಳಿಂದ ನೀವು ಅನೇಕರಿಗೆ ಸ್ಪೂರ್ತಿದಾಯರಾಗಿದ್ದಿರಿ. ಈಗ ನಿಮ್ಮ ದೇಹ ಹೇಳಿದಂತೆ ಕೇಳಿ ನನ್ನ ಫ್ರೆಂಡ್, ನಾಳೆಯಿಂದ ನೀವು ತರಬೇತಿಯಿಂದ ಹೊರಗೆ ಉಳಿಯಲಿದ್ದಿರಿ 'ಎಂದು ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ.
@ImRaina u have been an inspiration to so many with your incredible work ethic over your career, especially these last couple of years. Listen to your body now my friend - knowing u, u will want to be out training tomorrow #aramse https://t.co/tc3LY4R4qF
— Jonty Rhodes (@JontyRhodes8) August 10, 2019
ಬಿಸಿಸಿಐ ಪ್ರಕಾರ, 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆದಾದ ನಂತರ ಅವರು ಕಳೆದ ಕೆಲವು ತಿಂಗಳಿಂದ ಅಸ್ವಸ್ಥತೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಸುರೇಶ್ ರೈನಾ ಭಾರತದ ಪರವಾಗಿ 18 ಟೆಸ್ಟ್, 226 ಏಕದಿನ ಪಂದ್ಯಗಳಿಂದ ಕ್ರಮವಾಗಿ 768 ಮತ್ತು 5,615 ರನ್ ಗಳಿಸಿದ್ದಾರೆ. 78 ಟಿ20 ಪಂದ್ಯಗಳಲ್ಲಿ ಅವರು 1605 ರನ್ ಗಳಿಸಿದ್ದಾರೆ. 2019 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ರೈನಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು, ಅಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ 17 ಪಂದ್ಯಗಳಲ್ಲಿ 383 ರನ್ ಗಳಿಸಿದ್ದರು.