ಬಿಜೆಪಿ ಸೇರಿದ ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟು ಬಬಿತಾ ಫೋಗತ್

ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಫೋಗತ್ ಮತ್ತು ಅವರ ತಂದೆ ಕುಸ್ತಿ ತರಬೇತುದಾರ ಮಹಾವೀರ್ ಫೋಗಟ್ ಸೋಮವಾರದಂದು ಬಿಜೆಪಿಗೆ ಸೇರಿದರು. 

Last Updated : Aug 12, 2019, 02:01 PM IST
ಬಿಜೆಪಿ ಸೇರಿದ ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟು ಬಬಿತಾ ಫೋಗತ್   title=
ANI photo

ನವದೆಹಲಿ: ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಫೋಗತ್ ಮತ್ತು ಅವರ ತಂದೆ ಕುಸ್ತಿ ತರಬೇತುದಾರ ಮಹಾವೀರ್ ಫೋಗಟ್ ಸೋಮವಾರದಂದು ಬಿಜೆಪಿಗೆ ಸೇರಿದರು. 

ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರೆನ್ ರಿಜಿಜು, ಹರಿಯಾಣದ ಉಸ್ತುವಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಮತ್ತು ಅದರ ರಾಜ್ಯ ಮುಖ್ಯಸ್ಥ ಸುಭಾಷ್ ಬಾದಾಲಾ ಅವರ ಸಮ್ಮುಖದಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

ಇದೇ ವೇಳೆ ತಂದೆ-ಮಗಳ ಜೋಡಿಯನ್ನು ಶ್ಲಾಘಿಸಿದ ರಿಜಿಜು, ಬಬಿತಾ ಫೋಗಾಟ್ ಹಲವಾರು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸುವ ಮೂಲಕ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ಆಕೆಯ ತಂದೆ ತನ್ನ ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳನ್ನಾಗಿ ಮಾಡಲು ಶ್ರಮಿಸಿದ ಆದರ್ಶ ಪ್ರಾಯ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವರ್ಷದ ಕೊನೆಯಲ್ಲಿ ಅಲ್ಲಿ ವಿಧಾನ ಚುನಾವಣೆ ನಡೆಯುವುದರಿಂದ ಪಕ್ಷಕ್ಕೆ ಫೋಗಾಟ್ ಅವರ ಸೇರ್ಪಡೆಯಿಂದಾಗಿ ಹರಿಯಾಣದಲ್ಲಿ ಬಿಜೆಪಿಗೆ ರಾಜಕೀಯವಾಗಿ ಬಲ ಬರಲಿದೆ ಎನ್ನಲಾಗಿದೆ.

ಫೋಗಟ್ ಸಹೋದರಿಯರು ಮತ್ತು ಅವರ ತಂದೆ ಕುರಿತ ಜೀವನ ಕತೆಯನ್ನಾದರಿಸಿದ ಹಿಂದಿ ಚಲನಚಿತ್ರ ದಂಗಲ್ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದದ್ದು ಅಷ್ಟೇ ಅಲ್ಲದೆ ಪೋಗೊತ್ ಸಹೋದರಿಯರನ್ನು ಮನೆ ಮಾತಾಗಿಸಿತ್ತು.  

Trending News