Accident CCTV Video: ಎಲ್ಲಾದರೂ ಹೋಗುವಾಗ ಮೊದಲೇ ಇಂತಹ ಸಮಯಕ್ಕೆ ಹೋಗಬೇಕು ಎಂದು ತಿಳಿದಿದ್ದರೂ ಕೊನೆ ಕ್ಷಣದವರೆಗೂ ಕಾಲಹರಣ ಮಾಡಿ ಕೊನೆಗೆ ಆತುರಾತುರವಾಗಿ ಹೊರಡುವವರೇ ಹೆಚ್ಚು. ಅಯ್ಯೋ... ಟೈಮ್ ಆಗಿಯೇ ಹೋಯಿತು ಎಂದು ನೆಪ ಒಡ್ಡಿ ರ್ಯಾಷ್ ಡ್ರೈವ್ ಮಾಡುವವರೇ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ...
ಅವಸರವೇ ಅಪಘಾತಕ್ಕೆ ಕಾರಣ ಎಂದು ತಿಳಿದಿದ್ದರೂ ರ್ಯಾಷ್ ಡ್ರೈವ್ ಮಾಡುವವರು, ಕಡೆ ಪಕ್ಷ ಮಕ್ಕಳು ಜೊತೆಗಿದ್ದಾಗಲಾದರೂ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆತುರ ಅವಸರ ಕೊನೆಯ ಕ್ಷಣದಲ್ಲಿ ಗಾಡಿ ತೆಗೆದು ಸ್ಪೀಡ್ ಆಗಿ ವಾಹನ ಚಲಾಯಿಸುವವರೇ... ಒಂದು ಕ್ಷಣದ ನಿರ್ಲಕ್ಷ್ಯ ನಿಮ್ಮ ಪ್ರೀತಿಪಾತ್ರರ ಪ್ರಾಣ ಕ್ಷಣ ಮಾತ್ರದಲ್ಲಿ ಹಾರಿ ಹೋಗಲು ಕಾರಣವಾಗಬಹುದು ಹುಷಾರ್..!
ಮಗನನ್ನು ಶಾಲೆಗೆ ಡ್ರಾಪ್ ಮಾಡಲು ಹೋಗುವಾಗ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋದ ತಂದೆ ಮಗನ ಪ್ರಾಣಕ್ಕೆ ಕುತ್ತಾದ ಬೆಚ್ಚಿ ಬಿಳಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ- ನಾಯಿಯಂತೆ 'ಚಿರತೆ' ಬಾಲ ಹಿಡಿದು ಬಲೆಗೆ ಎಸೆದ ಭೂಪ: ವೀಡಿಯೋ ವೈರಲ್
ಮಗುವನ್ನು ಶಾಲೆಗೆ ಡ್ರಾಪ್ ಮಾಡಲು ಹೋಗಿದ್ದ ತಂದೆ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಯತ್ನಿಸಿದಾಗ ಗಾಡಿಯಿಂದ ಕೆಳಕ್ಕುರುಳಿದ ಮಗ ಟ್ಯಾಂಕರ್ ಚಕ್ರದ ಅಡಿ ಸಿಲುಕಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹಗದೂರು ಮುಖ್ಯ ರಸ್ತೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 10 ವರ್ಷದ ಬಾಲಕ ಕಾಗೆಂದ್ರ ತನ್ನದಲ್ಲದ ತಪ್ಪಿಗೆ ಬದುಕಿಗೆ ವಿದಾಯ ಹೇಳಿದ್ದಾನೆ.
ಏನಿದು ಘಟನೆ..?
ಮಗನನ್ನ ಶಾಲೆಗೆ ಬಿಡಲು ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಮೃತ ಬಾಲಕನ ತಂದೆ ಮುಂದಾಗ್ತಾರೆ. ಆ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಗೆ ಡಿಕ್ಕಿ ಆಗುತ್ತೆ -ಲೆಫ್ಟ್ ಸೈಡ್ ಬೈಕ್ ಇಂದ ಬಾಲಕ ಕೆಳಗೆ ಬೀಳ್ತಾನೆ. ಈ ಸಂದರ್ಭದಲ್ಲಿ ಒಂದು ಬದಿಯಲ್ಲಿ ಟಾಟಾ ಏಸ್ ಮಿನಿ ಗೂಡ್ಸ್ ವಾಹನ ಬರುತ್ತದೆ, ಇನ್ನೊಂದೆಡೆ ವಾಟರ್ ಟ್ಯಾಂಕ್ ಚಕ್ರ ಮಗುವಿನಮೈ ಮೇಲೆ ಹರಿದು ಹೋಗುತ್ತೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...
ಇದನ್ನೂ ಓದಿ- ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಅಟ್ಟಾಡಿಸಿ ಹಿಡಿದ ಚಿರತೆ: ವಿಡಿಯೋ ವೈರಲ್
ಈ ಘಟನೆ ನಡೆದ ಸ್ಥಳಕ್ಕೆ 100 ಮೀಟರ್ ಅಂತರದಲ್ಲಿ ಕಾರ್ಮೆಲ್ ಥೆರಸಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದ್ದು, ಈ ರಸ್ತೆಯಲ್ಲಿ ಶಾಲೆ ಆರಂಭವಾಗುವ ಮತ್ತು ಶಾಲೆ ಬಿಡುವ ಸಮಯದಲ್ಲಿಭಾರೀ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವಂತೆ ಶಾಲಾ ಶಿಕ್ಷಕರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.