ಆಲೂಗಡ್ಡೆಯಿಂದ ಕೇವಲ 7 ದಿನದಲ್ಲೇ ಕಣ್ಣಿನ ಸುತ್ತವಿರುವ ಕಪ್ಪು ಕಲೆ ಮಾಯ..! ಟ್ರೈ ಮಾಡಿ

Potaro mask for Dark Circles : ಮಾರುಕಟ್ಟೆಯಲ್ಲಿ ದೊರೆಯುವ ಸಿಕ್ಕ ಸಿಕ್ಕ ಸೌಂದರ್ಯವರ್ಧಕಗಳನ್ನು ಬಳಸುವ ಬದಲು, ಕಣ್ಣಿನ ಕೆಳಗಿನ ಕಪ್ಪು ವಲಯಗಳನ್ನು ತೆಗೆದುಹಾಕಲು ನೀವು ಆಲೂಗಡ್ಡೆ ಐ ಮಾಸ್ಕ್ ಅನ್ನು ಬಳಸಬಹುದು. ಈ ಐ ಮಾಸ್ಕ್ ತ್ವರಿತವಾಗಿ ಕೆಲಸ ಮಾಡುತ್ತದೆ ಮತ್ತು ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ.

Written by - Krishna N K | Last Updated : Jan 6, 2024, 05:58 PM IST
  • ಡಾರ್ಕ್ ಸರ್ಕಲ್ ನಿಂದಾಗಿ ಮಂಕಾಗಿಬಿಡುತ್ತೆ ಮುಖದ ಸೌಂದರ್ಯ
  • ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇಲ್ಲಿದೆ ಐ ಮಾಸ್ಕ್‌
  • ಕಣ್ಣಿನ ಕೆಳಗಿನ ಕಪ್ಪು ವಲಯಗಳನ್ನು ತೆಗೆದುಹಾಕುತ್ತೆ ಆಲೂಗಡ್ಡೆ
ಆಲೂಗಡ್ಡೆಯಿಂದ ಕೇವಲ 7 ದಿನದಲ್ಲೇ ಕಣ್ಣಿನ ಸುತ್ತವಿರುವ ಕಪ್ಪು ಕಲೆ ಮಾಯ..! ಟ್ರೈ ಮಾಡಿ title=

Dark circles remedies in kannada: ಮುಖದ ಸೌಂದರ್ಯ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಡಾರ್ಕ್ ಸರ್ಕಲ್ ನಿಂದಾಗಿ ಸೌಂದರ್ಯ ಮಂಕಾಗಿಬಿಡುತ್ತದೆ. ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಜನರು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಅವುಗಳಲ್ಲಿರುವ ರಾಸಾಯನಿಕವು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಇಂದು ನಾವು ಬ್ಲಾಕ್‌ ಸರ್ಕಲ್‌ ಅನ್ನು ನೈಸರ್ಗಿಕವಾಗಿ ಹೋಗಲಾಡಿಸಲು ವಿಧಾನವನ್ನು ತಿಳಿಯೋಣ ಬನ್ನಿ... 

ಕೆಲವೇ ದಿನಗಳಲ್ಲಿ ಕಣ್ಣಿನ ಕೆಳಗಿರುವ ಕಪ್ಪು ವರ್ತುಲವನ್ನು ಹೋಗಲಾಡಿಸಲು ನೀವು ಅಡುಗೆಮನೆಯಲ್ಲಿ ಸಿಗುವ ಈ ವಸ್ತುಗಳನ್ನು ಬಳಸಬಹುದು. ಅಡುಗೆ ಮನೆಯಲ್ಲಿ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಹಲವು ವಸ್ತುಗಳಿವೆ, ಅದರಲ್ಲಿ ಅತ್ಯಂತ ಪರಿಣಾಮಕಾರಿ ಅಂದ್ರೆ ಆಲೂಗೆಡ್ಡೆ. ಆಲೂಗೆಡ್ಡೆಯಲ್ಲಿರುವ ಕೆಲವು ಅಂಶಗಳು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮತ್ತು ಪಫಿನೆಸ್ ಅನ್ನು ತಕ್ಷಣವೇ ತೆಗೆದುಹಾಕುತ್ತವೆ. ನಿಮ್ಮ ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಇದ್ದರೆ, ನೀವು ಆಲೂಗಡ್ಡೆ ಮಾಸ್ಕ್ ಬಳಸಬಹುದು.

ಇದನ್ನೂ ಓದಿ:ರಕ್ತವನ್ನು ತೆಗೆದುಕೊಳ್ಳುವ ಮೊದಲು ಮತ್ತು ದಾನ ಮಾಡುವ ಮೊದಲು ಈ ಸರ್ಕಾರಿ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಿ

ಆಲೂಗಡ್ಡೆ ಮಾಸ್ಕ್‌ : ಐ ಮಾಸ್ಕ್ ಮಾಡಲು, ಮೊದಲು ಆಲೂಗೆಡ್ಡೆಯನ್ನು ಮ್ಯಾಶ್ ಮಾಡಿ ನಂತರ ಕಣ್ಣಿನ ಸುತ್ತ ಅದನ್ನು ಹಚ್ಚಿರಿ. ಕನಿಷ್ಠ 10 ನಿಮಿಷಗಳ ಕಾಲ ಬಿಟ್ಟು, ನಂತರ ಮುಖವನ್ನು ತೊಳೆಯಿರಿ. ಇದಲ್ಲದೇ ಆಲೂಗೆಡ್ಡೆಯ ರಸವನ್ನು ತೆಗೆದು ಕಣ್ಣಿನ ಸುತ್ತಲು ಹಚ್ಚಿಕೊಳ್ಳಬಹುದು. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಈ ಟಿಪ್ಸ್‌ ಪಾಲಿಸಿದ್ರೆ, 7 ದಿನಗಳಲ್ಲಿ ಬ್ಲಾಕ್ಸ್‌ ಸರ್ಕಲ್‌ ಮಾಯವಾಗುತ್ತವೆ. 

ಪ್ರಯೋಜನಗಳು : ಆಲೂಗಡ್ಡೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಈ ಮಾಸ್ಕ್‌ ಅನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಬಹುದು. ಕಣ್ಣುಗಳ ಕೆಳಗಿರುವ ಕಪ್ಪು ವಲಯಗಳನ್ನು ತೆಗೆದುಹಾಕಲು ಆಲೂಗಡ್ಡೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ಈ ರೋಗಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News