Classical singer Prabha Atre passes away: ಖ್ಯಾತ ಶಾಸ್ತ್ರೀಯ ಗಾಯಕಿ ಪ್ರಭಾ ಅತ್ರೆ ಇಂದು ನಿಧನರಾದರು. ಮಾಧ್ಯಮ ವರದಿಗಳ ಪ್ರಕಾರ, ಬೆಳಿಗ್ಗೆ ಅವರಿಗೆ ಹೃದಯಾಘಾತ ಸಂಭವಿಸಿದ್ದು.. ತಕ್ಷಣ ಅವರನ್ನು ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ..
ಗಾಯಕಿ ಪ್ರಭಾ ಅತ್ರೆ 13 ಸೆಪ್ಟೆಂಬರ್ 1932 ರಂದು ಪುಣೆಯಲ್ಲಿ ಜನಿಸಿದರು.. ಕಿರಾನಾ ಘರಾನಾ ಸೇರಿದವರಾಗಿದ್ದು.. ಅಲ್ಲಿನ ಅತ್ಯಂತ ಹಿರಿಯ ಗಾಯಕಿಯಾಗಿದ್ದರು..ಖಯಾಲ್, ಠುಮ್ರಿ, ದಾದ್ರ, ಗಜಲ್, ಗೀತ್, ನಾಟ್ಯಸಂಗೀತ ಮತ್ತು ಭಜನ್ ಮುಂತಾದ ಅನೇಕ ಸಂಗೀತ ಪ್ರಕಾರಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ಅಲ್ಲದೇ ಇವರು ಅನೇಕ ರಾಗಗಳನ್ನು ಸಹ ಕಂಡುಹಿಡಿದಿದ್ದರು..
ಇದನ್ನೂ ಓದಿ-Bigg Boss Kannada 10 ಮನೆಯಲ್ಲಿ ನಮ್ರತಾ - ಕಾರ್ತಿಕ್ ಕದ್ದುಮುಚ್ಚಿ.... ವೈರಲ್ ಆದ ಫೋಟೋಸ್!
ಪ್ರಭಾ ಅತ್ರೆ ಮುಡಿಗೇರಿಸಿಕೊಂಡ ಪ್ರಶಸ್ತಿಗಳು:
1990-ಪದ್ಮಶ್ರೀ ಪ್ರಶಸ್ತಿ
2002-ಪದ್ಮಭೂಷಣ ಪ್ರಶಸ್ತಿ
2022-ಪದ್ಮವಿಭೂಷಣ ಪ್ರಶಸ್ತಿ
ಸಂಗೀತ ಸಂಯೋಜನೆಯ ಬಗ್ಗೆ ಬರೆದ ಪ್ರಭಾ ಅತ್ರೆ ಪುಸ್ತಕಗಳು:
ಸ್ವರಗಿಣಿ
ಸ್ವರರಂಗಿ
ಸ್ವರಂಜನಿ
ಜೊತೆಗೆ ಪ್ರಭಾ ಅವರು ಆಲ್ ಇಂಡಿಯಾ ರೇಡಿಯೊದ ಮಾಜಿ ಸಹಾಯಕ ನಿರ್ಮಾಪಕರು ಮತ್ತು ನಾಟಕ ಕಲಾವಿದರಾಗಿದ್ದರು.
ಪ್ರಭಾ ಅವರ ಹೆಸರಿನಲ್ಲಿ ವಿಶ್ವದಾಖಲೆ:
ಒಂದೇ ವೇದಿಕೆಯಲ್ಲಿ 11 ಪುಸ್ತಕಗಳನ್ನು ಬಿಡುಗಡೆ ಮಾಡಿದ ವಿಶ್ವದಾಖಲೆಯನ್ನೂ ಪ್ರಭಾ ಅತ್ರೆ ಹೊಂದಿದ್ದಾರೆ. ಏಪ್ರಿಲ್ 18, 2016 ರಂದು, ಅವರು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಸಂಗೀತದ ಕುರಿತಾದ 11 ಪುಸ್ತಕಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆ ಮಾಡಿದರು.
ಇದನ್ನೂ ಓದಿ-ಇನ್ನೊಮ್ಮೆ ಪೊಲೀಸ್ ಠಾಣೆಗೆ DBoss ಬಂದ್ರೆ, ಕರ್ನಾಟಕ ಅಲ್ಲಿರುತ್ತೆ..! ದರ್ಶನ್ ಫ್ಯಾನ್ಸ್ ಗುಡುಗು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.