Smart Hacks: ಹಳೆಯ ಹರಿದ ಜೀನ್ಸ್ ಎಸೆಯ ಬೇಡಿ..! ಈ ಸ್ಮಾರ್ಟ್ ವಿಧಾನಗಳಿಂದ ಮರುಬಳಕೆ ಮಾಡಿ..

Old Jeans Ideas: ಎಲ್ಲಾರು ಜೀನ್ಸ್ ಧರಿಸಿವುದು ಸಾಮಾನ್ಯ. ಅದನ್ನು ನಿರಂತರವಾಗಿ ಹಾಕಿಕೊಳ್ಳುವುದರಿಂದ ಹರಿದು ಹೊಗಬಹುದು ಇಲ್ಲವಾದಲ್ಲಿ ಹಳೆಯದಾಗಿ ಕಾಣಬಹುದು.  ಅಂತಹ ಜಿನ್ಸ್‌ ಇನ್ನು ಮುಂದೆ ಉಪಯುಕ್ತವಲ್ಲ ಎನ್ನುವ ಪರಿಸ್ಥಿತಿಯಲ್ಲಿಗೆ ಬರುತ್ತವೆ, ಅದನ್ನು ಎಸೆಯುವ ಬದಲು ಮರುಬಳಕೆ ಮಾಡಬಹುದು. ಈ ಹಳೆಯ ಮತ್ತು ಹರಿದ ಜೀನ್ಸ್ ಅನ್ನು ಹೇಗೆ ಅಚ್ಚುಕಟ್ಟಾಗಿ ಮರುಬಳಕೆ ಮಾಡಬಹುದು ಎಂಬುದನ್ನು ತಿಳಿಯಿರಿ.  

Written by - Zee Kannada News Desk | Last Updated : Jan 14, 2024, 12:09 PM IST
  • ಹಳೆಯ ಜೀನ್ಸ್‌ಗಳಿಂದ ಹೊಚ್ಚ ಹೊಸ ವಸ್ತುಗಳು ತಯಾರಿಕೆ.
  • ಹಳೆಯ ಜೀನ್ಸ್‌ನಿಂದ ಆರ್ಕಷಕ ಕೈ ಚೀಲವನ್ನು ತಯಾರಿಸಬಹುದು.
  • ಹಳೆಯ ಜೀನ್ಸ್‌ನಿಂದ ಸುಂದರವಾದ ಮತ್ತು ಆಕರ್ಷಕವಾದ ಹ್ಯಾಂಗಿಂಗ್ ವಾಲ್ ಆರ್ಟ್ ಅನ್ನು ಮಾಡಬಹುದು.
Smart Hacks: ಹಳೆಯ ಹರಿದ ಜೀನ್ಸ್ ಎಸೆಯ ಬೇಡಿ..! ಈ ಸ್ಮಾರ್ಟ್ ವಿಧಾನಗಳಿಂದ ಮರುಬಳಕೆ ಮಾಡಿ.. title=

Old Jeans Hacks: ಜೀನ್ಸ್ ಎಷ್ಟೇ ಹಾಕಿಕೊಂಡರೂ ಅದು ಬಹು ಬೇಗ ಸವೆಯುವುದಿಲ್ಲ ಆದರೆ ಕೆಲವೊಮ್ಮೆ ಹರಿದು ಹೋಗುತ್ತವೆ ಅಥವಾ ಹಳೆಯದಾಗಿ ಕಾಣಿಸುತ್ತದೆ. ಅಂತಹ ಸಮಯದಲ್ಲಿ ಜೀನ್ಸ್ ನಿಷ್ಟ್ರಯೋಜಕವಾಗುತ್ತದೆ. ಆದರೆ ಇದನ್ನು ಎಸೆಯುವ ಬದಲು ಈ  ಬಟ್ಟೆಯನ್ನು ಇತರ ಹಲವು ವಿಧಾನಗಳಲ್ಲಿ ಬಳಸಬಹುದು. ನಿಮ್ಮ ಜೀನ್ಸ್ ಹರಿದಿದ್ದರೆ ಮತ್ತು ಧರಿಸಲು ಇನ್ನು ಮುಂದೆ ಸೂಕ್ತವಾಗಿಲ್ಲದಿದ್ದರೆ, ಅವುಗಳನ್ನು ಈ ಸ್ಮಾರ್ಟ್ ವಿಧಾನಗಳಲ್ಲಿ ಮರುಬಳಕೆ ಮಾಡಿ ನೋಡಿ ಖಂಡಿತವಾಗಿಯೂ ಆಶ್ಚರ್ಯಗೊಳ್ಳುತ್ತಿರಿ. ಹಾಗಾದರೆ ಜೀನ್ಸ್ ಅನ್ನು ಮರುಬಳಕೆ ಮಾಡುವುದು ಹೇಗೆ ಎಂದು ಯೋಚಿಸುದ್ದೀರಾ..? ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.

ಹಳೆಯ ಜೀನ್ಸ್‌ಗಳಿಂದ ಹೊಚ್ಚ ಹೊಸ ವಸ್ತುಗಳು

> ಹಳೆಯ ಜೀನ್ಸ್‌ನಿಂದ ನೀವು ಸುಲಭವಾಗಿ ಆರ್ಕಷಕ ಕೈ ಚೀಲವನ್ನು ತಯಾರಿಸಬಹುದು. ಇದಕ್ಕಾಗಿ, ಜೀನ್‌ನ ಮೊಣಕಾಲುಗಳ ಕೆಳಗಿನ ಭಾಗವನ್ನು ಕತ್ತರಿಸಿ ತೆಗೆದುಹಾಕಿ. ನಂತರ ಜೀನ್ಸ್‌ನ ಉಳಿದ ಭಾಗವನ್ನು ಕತ್ತರಿಗಳಿಂದ ಕತ್ತರಿಸಿ ಅದನ್ನು ತೆಗೆದು ಚೀಲದ ಆಕಾರದಲ್ಲಿ ಹೊಲಿಯಿರಿ. ಇದಾದ ನಂತರ ಚೀಲದ ಪಟ್ಟಿಯನ್ನು ಮಾಡಲು ಜೀನ್ಸ್‌ನ ಉಳಿದ ಭಾಗವನ್ನು ಬಳಸಿಕೊಂಡು ಸುಂದರವಾದ ಕೈ ಚೀಲವನ್ನು ರೇಡಿ ಮಾಡಬಹುದು.

ಇದನ್ನೂ ಓದಿ:  50 ಸಾವಿರಕ್ಕೂ ಕಡಿಮೆ ಹೂಡಿಕೆಯಿಂದ ಈ ನಾಲ್ಕು ಟ್ರೆಂಡಿಂಗ್ ಬಿಸ್ನೆಸ್ ಆರಂಭಿಸಿ, ಸಿಬ್ಬಂದಿ ಅವಶ್ಯಕತೆ ಬೀಳುವುದಿಲ್ಲ!

> ಸಣ್ಣ ಗೃಹೋಪಯೋಗಿ ವಸ್ತುಗಳನ್ನು ಸುರಕ್ಷಿತವಾಗಿಡಲು  ಜೀನ್ಸ್‌ನ ಹಿಂದಿನ ಭಾಗವನ್ನು ಚೀಲವನ್ನಾಗಿ ಮಾಡಲು ಬಳಸಬಹುದು. ಹೇಗೆಂದರೆ, ಎರಡು ಪಾಕೆಟ್ ಭಾಗಗಳನ್ನು ಒಟ್ಟಿಗೆ ಹೊಲಿಯುವ ಮೂಲಕ ನೀವು ಚೀಲವನ್ನು ತಯಾರಿಸಬಹುದು.

> ನಿಮ್ಮ ನೆಚ್ಚಿನ ಹರಿದ ಜೀನ್ಸ್ ಅನ್ನು ಬಿಸಾಡಲು  ಇಷ್ಟವಾಗದಿದ್ದಲ್ಲಿ ಈ ರೀತಿಯಾಗಿ ಬಳಕೆ ಮಾಡಬಹುದು. ಜಿನ್ಸ್‌ ಅನ್ನು ಏಪನ್ ಮಾಡಿ. ಇದನ್ನು ಏಪ್ರೋನ್‌ ರೀತಿಯಲ್ಲಿ ಉಪಯೋಗಿಸಬಹುದು. ಇದು ತುಂಬಾ ಗಟ್ಟಿ ಬಟ್ಟೆಯಾದರಿಂದ  ದೀರ್ಘಕಾಲ ಉಳಿಯುತ್ತದೆ.  ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಇದನ್ನು ಬಳಸುವುದರಿಂದ ನಿಮ್ಮ ಬಟ್ಟೆ ಒದ್ದೆಯಾಗುವುದನ್ನು ಮತ್ತು ಹಾಳಾಗುವುದನ್ನು ಇದು ತಡೆಯುತ್ತದೆ.

ಇದನ್ನೂ ಓದಿ: ದೇಶದ ಸಾರ್ವಜನಿಕ ವಲಯದ ಈ ಬ್ಯಾಂಕ್ ಜೊತೆ ಕೈಜೋಡಿಸಿ ಕೈತುಂಬಾ ಸಂಪಾದನೆ ಮಾಡಿ!

> ನಿಮ್ಮ ಹಳೆಯ ಜೀನ್ಸ್‌ನಿಂದ ಸುಂದರವಾದ ಮತ್ತು ಆಕರ್ಷಕವಾದ ಹ್ಯಾಂಗಿಂಗ್ ವಾಲ್ ಆರ್ಟ್ ಅನ್ನು ಮಾಡಬಹುದು. ಅಲ್ಲದೇ, ಪ್ಯಾಚ್ ವರ್ಕ್, ಕಸೂತಿ ಮತ್ತು ಪೇಂಟಿಂಗ್ ಅನ್ನು ಸಹ ಹಳೆಯ ಜೀನ್ಸ್‌ಗಳಿಂದ ತಯಾರಿಸಬಹುದು. ನಿವು ಕಲಾಕೃತಿಯನ್ನು ರೂಪಿಸುವುದರೊಂದಿಗೆ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.

>  ಚಿಕ್ಕ ಪರ್ಸ್‌ಗಳನ್ನು ಬಳಸಲು ನೀವು ಬಯಸಿದರೆ, ಇದಕ್ಕಾಗಿ ನಿಮ್ಮ ಹಳೆಯ ಜೀನ್ಸ್‌ನ ಪಾಕೆಟ್‌ಗಳನ್ನು ಬಳಸಿಕೊಳ್ಳಬಹುದು. ಜೀನ್ಸ್‌ನ ಪಾಕೆಟ್ ಭಾಗವನ್ನು ಕತ್ತರಿಸಿ ಮೂರು ಕಡೆ ಹೊಲಿಯಿರಿ ಮತ್ತು ಮಧ್ಯದಲ್ಲಿ ಸಣ್ಣ ಗುಂಡಿಯನ್ನು ಇರಿಸಿ. ಬೇಕೆಂದರೆ ನಿಮ್ಮ ನೆಚ್ಚಿನ ಫ್ರೆಡೊಂದಿಗೆ ಮೇಲ್ಬಾಗದಲ್ಲಿ ಹ್ಯಾಂಡಲ್ ವರ್ಕ ಮಾಡಿ ಇದರೊಂದಿಗೆ ಪರ್ಸ್ ಸಿದ್ದವಾಗುತ್ತದೆ.

ಇದನ್ನೂ ಓದಿ: ಅತ್ಯಲ್ಪ ಹೂಡಿಕೆಯಲ್ಲಿ ಆರಂಭಗೊಳ್ಳುವ ಈ 4 ಬಿಸ್ನೆಸ್, ಕಡಿಮೆ ಅವಧಿಯಲ್ಲಿ ಜಬರ್ದಸ್ತ್ ಲಾಭ ನೀಡುತ್ತವೆ!

ನಮಗೆ ಉಪಯೋಗವಾಗುವುದಿಲ್ಲ ಎಂದು ಅನೇಕ ವಸ್ತುಗಳನ್ನು ನಾವು ಬಿಸಿಡಿಬಿಡುತ್ತೇವೆ. ಅದನ್ನು ಬಿಸಾಡ ಬದಲು  ಮರುಬಳಕೆಯ ಮೂಲಕ  ಅನೇಕ ವಿಧದ ಕ್ರಾಫ್ಟ್‌ಗಳನ್ನು ಮಾಡಬಹುದು. ಇದರಿಂದ ಮನೆಯ ಸೌಂದರ್ಯ ಹೆಚ್ಚುವುದರೊಂದಿಗೆ ನಮಗೆ ಹೊಸ ಐಡಿಯಾಗಳು ಬರುತ್ತವೆ. ಜೊತೆಗ ಅದನ್ನು ಮರು ಬಳಕೆ ಮಾಡಿದಂತಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News