/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಶೇ.26 ರಷ್ಟು ಎಫ್‌ಡಿಐಗೆ ಕೇಂದ್ರದ ಅನುಮೋದನೆ

ಸರ್ಕಾರದ ಅನುಮೋದನೆಯೊಂದಿಗೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 26% ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Last Updated : Aug 28, 2019, 09:02 PM IST
ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಶೇ.26 ರಷ್ಟು ಎಫ್‌ಡಿಐಗೆ ಕೇಂದ್ರದ ಅನುಮೋದನೆ  title=
file photo

ನವದೆಹಲಿ: ಸರ್ಕಾರದ ಅನುಮೋದನೆಯೊಂದಿಗೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 26% ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ 26% ಎಫ್‌ಡಿಐಗೆ ಅವಕಾಶವಿದೆ ಮತ್ತು ವಿಷಯ ಸೇವೆಗಳನ್ನು ಪ್ರಸಾರ ಮಾಡಲು 49% ಎಫ್‌ಡಿಐಗೆ ಅನುಮತಿ ಇದೆ ಎಂದು ಸರ್ಕಾರ ತಿಳಿಸಿದೆ.

ಅಸ್ತಿತ್ವದಲ್ಲಿರುವ ಎಫ್‌ಡಿಐ ನೀತಿಯು ಪ್ರಸ್ತುತ 'ನ್ಯೂಸ್ & ಕರೆಂಟ್ ಅಫೇರ್ಸ್' ಟಿವಿ ಚಾನೆಲ್‌ಗಳ ಅಪ್-ಲಿಂಕ್‌ನಲ್ಲಿ ಅನುಮೋದನೆ ಮಾರ್ಗದಲ್ಲಿ ಶೇ 49 ರಷ್ಟು ಎಫ್‌ಡಿಐಗೆ ಅವಕಾಶ ನೀಡುತ್ತದೆ. ಈಗ ಮುದ್ರಣ ಮಾಧ್ಯಮದ ಮಾರ್ಗದಲ್ಲಿ ಡಿಜಿಟಲ್ ಮೀಡಿಯಾ ಮೂಲಕ ಸುದ್ದಿ ಮತ್ತು ಕರೆಂಟ್ ಅಫೇರ್ಸ್ ನ್ನು ಅಪ್ಲೋಡ್ / ಸ್ಟ್ರೀಮಿಂಗ್ ಮಾಡಲು ಸರ್ಕಾರಿ ಮಾರ್ಗದಲ್ಲಿ ಶೇ 26% ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ.

ಸದ್ಯ ಭಾರತದಲ್ಲಿ ಡಿಜಿಟಲ್ ಮೀಡಿಯಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಈ ವಲಯವು 2019 ರಲ್ಲಿ ಚಲನಚಿತ್ರ ಮನರಂಜನೆಯನ್ನು ಹಾಗೂ 2021ರ ವೇಳೆಗೆ ಮುದ್ರಣ ಮಾಧ್ಯಮವನ್ನು ಹಿಂದಿಕ್ಕುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.