ನವದೆಹಲಿ: ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲಾಗುತ್ತಿದ್ದು, ಇದು ಅಲ್ಲಿನ ಜೀವನವನ್ನು ಸಾಮಾನ್ಯವಾಗಿಸುತ್ತಿದೆ. ಪ್ರಸ್ತುತ, ಜಮ್ಮು ಪ್ರದೇಶದ ಐದು ಜಿಲ್ಲೆಗಳಲ್ಲಿ ಮತ್ತೆ ಮೊಬೈಲ್ ಫೋನ್ ಸೇವೆಯನ್ನು ಪ್ರಾರಂಭಿಸಲಾಗಿದೆ - ದೋಡಾ, ಕಿಶ್ತ್ವಾರ, ರಾಂಬನ್, ರಾಜೌರಿ ಮತ್ತು ಪೂಂಚ್. ಆಗಸ್ಟ್ 5 ರಿಂದ ಈ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಕುಪ್ವಾರಾ ಮತ್ತು ಹಂಡ್ವಾರಾ ಜಿಲ್ಲೆಗಳಲ್ಲಿ ಸರ್ಕಾರವು ಮೊಬೈಲ್ ಫೋನ್ ಸಂಪರ್ಕವನ್ನು ತೆರೆಯಲು ನಿರ್ಧರಿಸಿದೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬುಧವಾರ ಪ್ರಕಟಿಸಿದರು. ಇದಲ್ಲದೆ, ಫೋನ್ ಮತ್ತು ಇಂಟರ್ನೆಟ್ ಬಳಕೆಯನ್ನು ಜನರು ಕಡಿಮೆ ಬಳಸುತ್ತಾರೆ ಎಂದಿರುವ ಅವರು, ಈ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಭಯೋತ್ಪಾದಕರು ಬಳಸುತ್ತಾರೆ ಎಂದಿದ್ದಾರೆ.
"ಫೋನ್ ಮತ್ತು ಇಂಟರ್ನೆಟ್ ಭಯೋತ್ಪಾದಕರು ನಮ್ಮ ವಿರುದ್ಧ ಬಳಸಲಾಗುವ ಒಂದು ರೀತಿಯ ಆಯುಧ, ಆದ್ದರಿಂದ ನಾವು ಅದನ್ನು ಸ್ಥಗಿತಗೊಳಿಸಿದ್ದೇವೆ. ಕ್ರಮೇಣ ಸೇವೆಗಳನ್ನು ಪುನರಾರಂಭಿಸಲಾಗುವುದು" ಎಂದು ಅವರು ಹೇಳಿದರು.