IMPS Rule Change: ಫೆಬ್ರುವರಿ 1 ರಿಂದ ಬದಲಾಗಲಿದೆ ಹಣ ವರ್ಗಾವಣೆ ವಿಧಾನದ ಈ ನಿಯಮ, ನೀವು ತಿಳಿದುಕೊಳ್ಳಿ!

IMPS Rule Change: ಈ ಹೊಸ ಬದಲಾವಣೆಯ ಬಳಿಕ, ಬಳಕೆದಾರರು ಕೇವಲ ಸ್ವೀಕರಿಸುವವರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಹೆಸರನ್ನು ಸೇರಿಸುವ ಮೂಲಕ ಐಎಂಪಿಎಸ್ ಮೂಲಕ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ. (Business News In Kannada)  

Written by - Nitin Tabib | Last Updated : Jan 30, 2024, 05:45 PM IST
  • ಎನ್ಪಿಸಿಐ ಸುತ್ತೋಲೆಯ ಪ್ರಕಾರ, ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬಹು ಖಾತೆಗಳಿಗೆ,
  • ಫಲಾನುಭವಿಗೆ ಡೀಫಾಲ್ಟ್ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಡೀಫಾಲ್ಟ್ ಖಾತೆಯನ್ನು ಗ್ರಾಹಕರ ಅನುಮತಿಯ ಮೂಲಕ ಗುರುತಿಸಲಾಗುತ್ತದೆ.
  • ಗ್ರಾಹಕರ ಅನುಮತಿ ಪಡೆಯದಿದ್ದರೆ ಬ್ಯಾಂಕ್ ವಹಿವಾಟು ರದ್ದಾಗುತ್ತದೆ.
IMPS Rule Change: ಫೆಬ್ರುವರಿ 1 ರಿಂದ ಬದಲಾಗಲಿದೆ ಹಣ ವರ್ಗಾವಣೆ ವಿಧಾನದ ಈ ನಿಯಮ, ನೀವು ತಿಳಿದುಕೊಳ್ಳಿ! title=

IMPS Rule Change: ಬದಲಾಗುತ್ತಿರುವ ಕಾಲ ಮತ್ತು ತಂತ್ರಜ್ಞಾನಕ್ಕೆ ತಕ್ಕಂತೆ ಇದೆಗ ಬ್ಯಾಂಕಿಂಗ್ ಸೌಲಭ್ಯಗಳು ಹೆಚ್ಚು ಸುಲಭವಾಗಿದೆ. ಈ ಹಿಂದೆ ಬ್ಯಾಂಕ್ ಗ್ರಾಹಕರು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಹಣವನ್ನು ಕಳುಹಿಸಲು ತಮ್ಮ ಬ್ಯಾಂಕ್‌ಗೆ ಹೋಗಬೇಕಾಗಿತ್ತು. ಇದೀಗ ಎಲ್ಲವೂ ಆನ್‌ಲೈನ್ ಮೋಡ್‌ನಲ್ಲಿ ಕೆಲಸ ನಡೆಯುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಇದರಿಂದಾಗಿ ಹಣ ವರ್ಗಾವಣೆ ತುಂಬಾ ಸುಲಭವಾಗಿದೆ. ಇದೀಗ, ಈ ಹಣ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು  ಸುಲಭಗೊಳಿಸಲು, ಅದರ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ, ಈ ಬದಲಾವಣೆಗಳು ಫೆಬ್ರವರಿ 1, 2024 ರಿಂದ ಜಾರಿಗೆ ಬರಲಿವೆ.

ನಿಯಮಗಳ ಬದಲಾವಣೆಯ ನಂತರ, ಬಳಕೆದಾರರು ಕೇವಲ ಸ್ವೀಕರಿಸುವವರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಹೆಸರನ್ನು ಸೇರಿಸುವ ಮೂಲಕ ಐಎಂಪಿಎಸ್ ಮೂಲಕ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಪ್ರಕಾರ, ಈಗ ಫಲಾನುಭವಿ ಮತ್ತು ಐಎಫ್ಎಸ್ಸಿ ಕೋಡ್ ನಮೂದಿಸುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ಕಳೆದ ವರ್ಷ ಅಕ್ಟೋಬರ್ 31 ರ ಎನ್ಪಿಸಿಐ ಸುತ್ತೋಲೆಯಲ್ಲಿ, "ಎಲ್ಲಾ ಸದಸ್ಯರು ಈ ಕೆಳಗಿನವುಗಳನ್ನು ಗಮನಿಸಲು ವಿನಂತಿಸಲಾಗಿದೆ. ಮುಂದಿನ ವರ್ಷ ಜನವರಿ 31 ರೊಳಗೆ ಎಲ್ಲಾ ಐಎಂಪಿಎಸ್ ಚಾನಲ್‌ಗಳಲ್ಲಿ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರಿನ ಮೂಲಕ ಹಣ ವರ್ಗಾವಣೆಯನ್ನು ಪ್ರಾರಂಭಿಸುವುದು ಮತ್ತು ಸ್ವೀಕರಿಸುವುದು ಆಂಭಗೊಳ್ಳಲಿದೆ" ಎನ್ನಲಾಗಿದೆ 

ಡೀಫಾಲ್ಟ್ ಎಂಎಂಐಡಿಯೊಂದಿಗೆ ಸದಸ್ಯ ಬ್ಯಾಂಕ್ ಹೆಸರುಗಳ ಮ್ಯಾಪಿಂಗ್ ಅನ್ನು ನಿರ್ವಹಿಸಲು ಕಳುಹಿಸುವ ಬ್ಯಾಂಕ್‌ಗಳಿಗೆ ನಿರ್ದೇಶಿಸಲಾಗಿದೆ ಮತ್ತು ಮೊಬೈಲ್ ಸಂಖ್ಯೆ + ಬ್ಯಾಂಕ್ ಹೆಸರನ್ನು ಬಳಸಿಕೊಂಡು ಫಲಾನುಭವಿಗಳ ಪರಿಶೀಲನೆ ಮತ್ತು ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸಲು ಅಗತ್ಯ ಯುಐ/ಯುಎಕ್ಸ್ ವರ್ಧನೆಗಳನ್ನು ಮಾಡಲು ನಿರ್ದೇಶಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ. ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಚಾನೆಲ್‌ಗಳಲ್ಲಿ ಪಾವತಿದಾರ/ಫಲಾನುಭವಿಯಾಗಿ ಮಾನ್ಯವಾದ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರನ್ನು ಸೇರಿಸುವ ಆಯ್ಕೆಯನ್ನು ಬ್ಯಾಂಕ್‌ಗಳು ಒದಗಿಸುತ್ತವೆ ಎಂದು ಅದು ಹೇಳಿದೆ.

ತ್ವರಿತ ಪಾವತಿ ಸೇವೆ
ತ್ವರಿತ ಪಾವತಿ ಸೇವೆ (ಐಎಂಪಿಎಸ್) ಹಣವನ್ನು ವರ್ಗಾಯಿಸಲು ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಒಂದಾಗಿದೆ. ಇದು ಬಹಳ ಮುಖ್ಯವಾದ ಪಾವತಿ ವ್ಯವಸ್ಥೆಯಾಗಿದ್ದು, ಇದು 24x7 ತ್ವರಿತ ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್, ಬ್ಯಾಂಕ್ ಶಾಖೆಗಳು, ಎಟಿಎಂ, ಎಸ್‌ಎಂಎಸ್ ಮತ್ತು ಐವಿಆರ್‌ಎಸ್‌ನಂತಹ ವಿವಿಧ ಚಾನಲ್‌ಗಳ ಮೂಲಕ ಇದನ್ನು ಪ್ರವೇಶಿಸಬಹುದು.

ಐಎಂಪಿಎಸ್ ವಹಿವಾಟು ಪ್ರಕ್ರಿಯೆ
ಪ್ರಸ್ತುತ ಐಎಂಪಿಎಸ್ ಪಿ2ಎ (ಖಾತೆ + IFSC) ಅಥವಾ ಪಿ2ಪಿ (ಮೊಬೈಲ್ ಸಂಖ್ಯೆ + ಎಂಎಂಐಏ) ವರ್ಗಾವಣೆ ಮೋಡ್ ಮೂಲಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಆದರೆ ನಿಯಮಗಳ ಬದಲಾವಣೆಯ ನಂತರ, ಈಗ ಈ ಪ್ರಕ್ರಿಯೆಯನ್ನು ಕೆಲ್ವಲ ಮೊಬೈಲ್ ಸಂಖ್ಯೆ + ಬ್ಯಾಂಕ್ ಹೆಸರನ್ನು ಬಳಸುವ ಮೂಲಕ ಮಾಡಬಹುದು.

ಐಎಂಪಿಎಸ್ ಮೂಲಕ ವಹಿವಾಟು ಮಿತಿ
ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಫಲಾನುಭವಿಯನ್ನು ಸೇರಿಸದೆಯೇ ಐಎಂಪಿಎಸ್ ಮೂಲಕ 5 ಲಕ್ಷದವರೆಗೆ ವರ್ಗಾಯಿಸಬಹುದು.

ಇದನ್ನೂ ಓದಿ-Union Budget 2024: ನೌಕರ ವರ್ಗದ ಜನರಿಗೆ ಒಂದು ಭಾರಿ ಸಂತಸದ ಸುದ್ದಿ!

ಒಂದು ಮೊಬೈಲ್ ಸಂಖ್ಯೆಯಿಂದ ಬಹು ಖಾತೆಗಳು
ಎನ್ಪಿಸಿಐ ಸುತ್ತೋಲೆಯ ಪ್ರಕಾರ, ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬಹು ಖಾತೆಗಳಿಗೆ, ಫಲಾನುಭವಿಗೆ ಡೀಫಾಲ್ಟ್ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಡೀಫಾಲ್ಟ್ ಖಾತೆಯನ್ನು ಗ್ರಾಹಕರ ಅನುಮತಿಯ ಮೂಲಕ ಗುರುತಿಸಲಾಗುತ್ತದೆ. ಗ್ರಾಹಕರ ಅನುಮತಿ ಪಡೆಯದಿದ್ದರೆ ಬ್ಯಾಂಕ್ ವಹಿವಾಟು ರದ್ದಾಗುತ್ತದೆ.

ಇದನ್ನೂ ಓದಿ-Union Budget 2024: ದೇಶಾದ್ಯಂತದ ಈ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ವಾರ್ಷಿಕ ₹12000 ಸಿಗುವ ನಿರೀಕ್ಷೆ!

IMPS ಮೂಲಕ ಹಣ ವರ್ಗಾವಣೆ ಮಾಡುವುದು ಹೇಗೆ?
1. ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ.
2. ಮುಖಪುಟದಲ್ಲಿ 'ಫಂಡ್ ಟ್ರಾನ್ಸಫರ್' ಆಯ್ಕೆಯನ್ನು ಕ್ಲಿಕ್ ಮಾಡಿ.
3. ಹಣವನ್ನು ವರ್ಗಾವಣೆ ಮಾಡುವ ವಿಧಾನವಾಗಿ 'ಐಎಂಪಿಎಸ್' ಅನ್ನು ಆಯ್ಕೆಮಾಡಿ.
4. ಫಲಾನುಭವಿಯ ಎಂಎಂಐಡಿ (ಮೊಬೈಲ್ ಮನಿ ಐಡೆಂಟಿಫೈಯರ್) ಮತ್ತು ನಿಮ್ಮ ಎಂಪಿನ್ (ಮೊಬೈಲ್ ವೈಯಕ್ತಿಕ ಗುರುತಿನ ಸಂಖ್ಯೆ) ನಮೂದಿಸಿ.
5. ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.
6. ವಿವರಗಳನ್ನು ನಮೂದಿಸಿದ ನಂತರ, ಮುಂದುವರೆಯಲು 'ಕನ್ಫರ್ಮ್' ಕ್ಲಿಕ್ ಮಾಡಿ.
7. ವಹಿವಾಟಿನ ದೃಢೀಕರಣಕ್ಕಾಗಿ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಓಟಿಪಿ (ಒಂದು-ಬಾರಿಯ ಪಾಸ್‌ವರ್ಡ್) ಅನ್ನು ಸ್ವೀಕರಿಸಬಹುದು.
8. ಓಟಿಪಿ ಅನ್ನು ನಮೂದಿಸುವ ಮೂಲಕ ನಿಮ್ಮ ವಹಿವಾಟನ್ನು ಪೂರ್ಣಗೊಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News