ಆರ್ಟಿಕಲ್ 370 ರದ್ಧತಿ ಬಳಿಕ ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಭೇಟಿಯಾದ ಅವರ ತಾಯಿ, ಸಹೋದರಿ

ಶ್ರೀನಗರದ ಚಶ್ಮಾಶಾಹಿ ರೆಸಾರ್ಟ್‌ನಲ್ಲಿ ಮೆಹಬೂಬಾ ಮುಫ್ತಿಯವರನ್ನು ಗೃಹಬಂಧನದಲ್ಲಿರಿಸಲಾಗಿದೆ.

Last Updated : Aug 30, 2019, 11:17 AM IST
ಆರ್ಟಿಕಲ್ 370 ರದ್ಧತಿ ಬಳಿಕ ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಭೇಟಿಯಾದ ಅವರ ತಾಯಿ, ಸಹೋದರಿ title=
File Image

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ಭದ್ರತೆಯ ವಿಷಯದಿಂದಾಗಿ ಕೆಲವು ಕಾಶ್ಮೀರಿ ನಾಯಕರು ಇನ್ನೂ ಗೃಹಬಂಧನದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಇತರ ನಾಯಕರನ್ನು ಸಹ ಗೃಹಬಂಧನದಲ್ಲಿರಿಸಲಾಗಿದೆ. 

ಶ್ರೀನಗರದ ಚಶ್ಮಾಶಾಹಿ ರೆಸಾರ್ಟ್‌ನಲ್ಲಿ ಮೆಹಬೂಬಾ ಮುಫ್ತಿಯನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಅವರನ್ನು ಗುರುವಾರ ಸಂಜೆ ಅವರ ತಾಯಿ ಮತ್ತು ಸಹೋದರಿ ರುಬ್ಯಾ ಸಯೀದ್ ಮೆಹಬೂಬಾ ಭೇಟಿಯಾದರು. 

ಆಗಸ್ಟ್ 27 ರಂದು ಸಂಜೆ 5 ಗಂಟೆಗೆ ಡಿಸಿ ಕಚೇರಿಯಲ್ಲಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಸನಾ ಅವರು ಮೊದಲು ಮೆಹಬೂಬಾ ಮುಫ್ತಿ ಭೇಟಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮೆಹಬೂಬಾ ಮುಫ್ತಿ ಅವರ ಭೇಟಿಗೆ ಆಡಳಿತದಿಂದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ಹೇಳಲಾಗುತ್ತಿದೆ. 

ಮಾಹಿತಿಯ ಪ್ರಕಾರ, ಮೆಹಬೂಬಾ ಮುಫ್ತಿ ಅವರ ಸಹೋದರಿ ರುಬ್ಯಾ ಸಯೀದ್ ಗುರುವಾರ ಸಂಜೆ 4 ಗಂಟೆಗೆ ಶ್ರೀನಗರಕ್ಕೆ ತಲುಪಿ ಅವರನ್ನು ಭೇಟಿಯಾದರು. ಯಾವುದೇ ನಾಯಕನ ಕುಟುಂಬಗಳನ್ನು ಭೇಟಿ ಮಾಡಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದು ಹೇಳಲಾಗಿದೆ.

Trending News