Cricket: ನೀರು ಎಂದು ತಪ್ಪಾಗಿ ಆಸಿಡ್ ಕುಡಿದ ಭಾರತದ ಸ್ಟಾರ್ ಓಪನರ್! ಆಸ್ಪತ್ರೆಗೆ ದಾಖಲು

Mayank Agarwal Health Update: ನೀರು ಎಂದು ತಪ್ಪಾಗಿ ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ಮಯಾಂಕ್ ಕುಡಿದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Written by - Bhavishya Shetty | Last Updated : Jan 31, 2024, 03:39 PM IST
    • ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆರೋಗ್ಯ
    • ಕರ್ನಾಟಕದ ಅನುಭವಿ ಓಪನರ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್
    • ನೀರು ಎಂದು ತಪ್ಪಾಗಿ ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ಕುಡಿದಿದ್ದಾರೆ
Cricket: ನೀರು ಎಂದು ತಪ್ಪಾಗಿ ಆಸಿಡ್ ಕುಡಿದ ಭಾರತದ ಸ್ಟಾರ್ ಓಪನರ್! ಆಸ್ಪತ್ರೆಗೆ ದಾಖಲು title=
Mayank Agarwal

Mayank Agarwal Health Update: ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆರೋಗ್ಯ ಸುಧಾರಿಸುತ್ತಿದೆ. ಆದರೆ, ಇನ್ನೂ ಸರಿಯಾಗಿ ಮಾತನಾಡಲು ಸಾಧ್ಯವಾಗದೆ ಮುಖ ಊದಿಕೊಂಡಿದೆ ಎಂದು ಹೊಸ ಹೆಲ್ತ್ ಬುಲೆಟಿನ್’ನಲ್ಲಿ ರಿವೀಲ್ ಆಗಿದೆ.

ಇದನ್ನೂ ಓದಿ: ಮಾಲ್‌ನಲ್ಲಿ ‘ಸೆಕ್ಯೂರಿಟಿ ಗಾರ್ಡ್’ ಆಗಿದ್ದವ ಗಬ್ಬಾದಲ್ಲಿ ವಿಂಡೀಸ್‌ಗೆ ಟೆಸ್ಟ್ ಪಂದ್ಯ ಗೆಲ್ಲಿಸಿದ!

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರ ಆರೋಗ್ಯ ಹದಗೆಟ್ಟಿದ್ದು, ತಕ್ಷಣವೇ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಲಾಯಿತು. ರಣಜಿ ಪಂದ್ಯ ಆಡಿದ ಅಗರ್ತಲಾದಿಂದ ಹಿಂತಿರುಗುತ್ತಿದ್ದ ವೇಳೆ, ವಿಮಾನದಲ್ಲಿ ಅನಾರೋಗ್ಯ ಕಾಡಿತ್ತು.

ಕರ್ನಾಟಕದ ಅನುಭವಿ ಓಪನರ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಸೋಮವಾರ ರಣಜಿ ಟ್ರೋಫಿ ಪಂದ್ಯವನ್ನಾಡಿ ಅಗರ್ತಲಾದಿಂದ ವಾಪಸಾಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿದ ತಕ್ಷಣ ಅವರ ಆರೋಗ್ಯ ಹದಗೆಟ್ಟಿತ್ತು. ಅವರ  ಬಾಯಿ ಮತ್ತು ಗಂಟಲಿನಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಅಗರ್ತಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಮಯಾಂಕ್ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ನೀರು ಎಂದು ತಪ್ಪಾಗಿ ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ಮಯಾಂಕ್ ಕುಡಿದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ವಾಸುದೇವ್ ಚಕ್ರವರ್ತಿ ಅವರು ಮಯಾಂಕ್ ಬಗ್ಗೆ ಮಾಹಿತಿ ನೀಡಿದ್ದಾರೆ. “ಮಯಾಂಕ್ ಅಗರ್ವಾಲ್ ಅವರನ್ನು ತುರ್ತುಸ್ಥಿತಿಗೆ ದಾಖಲಿಸಲಾಗಿದೆ ಎಂದು ನನಗೆ ಕರೆ ಬಂತು. ನೀರು ಎಂದು ತಪ್ಪಾಗಿ ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ಕುಡಿದಿದ್ದಾರೆ. ಇದಾದ ಬಳಿಕ ಬಾಯಿ ಮತ್ತು ಗಂಟಲು ಊದಿಕೊಂಡಿದೆ. ಆಸ್ಪತ್ರೆ ತಲುಪಿದಾಗ ಅವರ ಮುಖ ಊದಿಕೊಂಡಿದ್ದು, ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sania Mirza Latest News : ಸಾನಿಯಾ ಮಿರ್ಜಾ ವಿಚ್ಛೇದನ... ಸನಾ ಜಾವೇದ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಶೋಯೆಬ್ ಮಲಿಕ್!

ಈ ಘಟನೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಯಾಂಕ್ ಇತ್ತೀಚೆಗೆ ತ್ರಿಪುರಾ ವಿರುದ್ಧ ಅಗರ್ತಲಾದಲ್ಲಿ ಜನವರಿ 26 ರಿಂದ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಮಯಾಂಕ್ 51 ಮತ್ತು 17 ರನ್‌’ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದು, ಅವರ ತಂಡ ಕರ್ನಾಟಕ 29 ರನ್‌’ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News