Parenting Tips: ಪ್ರತಿಯೊಂದಕ್ಕೂ ಎದುರುತ್ತರ ಕೊಡುವ ಅಭ್ಯಾಸ ನಿಮ್ಮ ಮಗುವಿಗೂ ಇದೆಯೇ? ಅವರನ್ನು ಬೈಯುವ ಬದಲು ಈ ಟಿಪ್ಸ್ ಟ್ರೈ ಮಾಡಿ!

Parenting Tips: ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ಆದರೆ, ಅವರ ನಡವಳಿಕೆಯನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ವರ್ತನೆಯೂ ಸಕಾರಾತ್ಮಕವಾಗಿರುವುದು ತುಂಬಾ ಅಗತ್ಯ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮಕ್ಕಳ ಬಗ್ಗೆ ಪೋಷಕರ ದೂರು:  ನಮ್ಮಲ್ಲಿ ಕೆಲವು ಪೋಷಕರು ನಮ್ಮ ಮಕ್ಕಳು ನಮ್ಮ ಯಾವುದೇ ಮಾತನ್ನು ಕೇಳುವುದಿಲ್ಲ. ಎಲ್ಲಾದಕ್ಕೂ ಉಲ್ಟಾ ಉತ್ತರ ಕೊಡುತ್ತಾರೆ. ಎಲ್ಲರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂಬಿತ್ಯಾದಿ ದೂರುಗಳನ್ನು ಹೇಳುವುದನ್ನು ನೀವು ಕೇಳಿರಬಹುದು. 

2 /8

ಮಕ್ಕಳ ಎದುರುತ್ತರ ಕೊಡುವ ಸ್ವಭಾವ:  ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬರುವುದು ಸಹಜ.  ಬೆಳೆಯುತ್ತಿರುವ ಮಕ್ಕಳಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಲವು ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳಲ್ಲಿ ಮಕ್ಕಳು ಎದುರುತ್ತರ ಕೊಡುವ ಸ್ವಭಾವವೂ ಒಂದು. ಮೊದಲಿಗೆ ಮಕ್ಕಳ ಈ ಎದುರುಟ್ಟುರ ಕೊಡುವ ಸ್ವಭಾವ ಸ್ವಾಭಾವಿಕ ಎಂದೆನಿಸಿದರೂ ಬರುಬರುತ್ತಾ ಇದು ಪೋಷಕರ ಕೋಪವನ್ನು ಹೆಚ್ಚಿಸಬಹುದು. 

3 /8

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ:  ಮಕ್ಕಳ ಈ ಸ್ವಭಾವವನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲಿಗೆ ಅವರ ಸ್ವಭಾವವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲು ಈ ಕೆಳಗೆ ನೀಡಲಾಗಿರುವ ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

4 /8

ಸಮಾಧಾನದಿಂದ ಮಾತನಾಡಿಸಿ:  ಮಕ್ಕಳು ಹೇಳಿದ್ದಕ್ಕೆಲ್ಲಾ ಎದುರುತ್ತರ ಕೊಡುವಾಗ ಪೋಷಕರು ತಾಳ್ಮೆ ಕಳೆದುಕೊಳ್ಳುವುದು ಸಹಜವೇ. ಆದರೆ, ಇದು ಮಕ್ಕಳನ್ನು ಇನ್ನಷ್ಟು ಟ್ರಿಗರ್ ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ ಮಕ್ಕಳೊಂದಿಗೆ ಸಮಾಧಾನದಿಂದ ಮಾತನಾಡಿ. ಅವರಿಗೆ, ಒಳ್ಳೆಯದು ಕೆಟ್ಟದ್ದರ ಬಗ್ಗೆ ವಿವರಿಸಿ.  

5 /8

ಪ್ರೋತ್ಸಾಹ:  ನಾವು ಮಕ್ಕಳು ತಪ್ಪು ಮಾಡಿದಾಗ ಅವರನ್ನು ದಂಡಿಸುವಷ್ಟು ಸುಲಭವಾಗಿ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸುವುದಿಲ್ಲ. ಆದರೆ, ಪೋಷಕರು ಮೊದಲು ನಿಮ್ಮ ಈ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು.  ಮಕ್ಕಳು ಒಂದು ಸಣ್ಣ ಕೆಲಸವನ್ನು ಸರಿಯಾಗಿ ಮಾಡಿದರೂ ಅವರನ್ನು ಪ್ರಶಂಸಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ಅವರ ನೈತಿಕತೆಯನ್ನು ಕೂಡ ಹೆಚ್ಚಿಸುತ್ತದೆ. 

6 /8

ಸೃಜನಾತ್ಮಕ ಕೆಲಸ:  ನಿಮ್ಮ ಮಗು ಸುಮ್ಮನೆ ಬೇಸರದಿಂದ ಕುಳಿತಿದ್ದರೆ, ಇಲ್ಲವೇ ಹೆಚ್ಚಾಗಿ ಟಿವಿ- ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದರೆ ಅವರ ಈ ಅಭ್ಯಾಸವನ್ನು ತಪ್ಪಿಸಲು  ಅವರನ್ನು ಬೈಯುವ ಬದಲಿಗೆ ಸೃಜನಶೀಲ ಕೆಲಸವನ್ನು ಮಾಡಲು ಪ್ರೇರೇಪಿಸಬೇಕು. ಅವರ ಮನಸ್ಸು ಸಕಾರಾತ್ಮಕವಾಗಿದ್ದರೆ, ಅವರು ನೀವು ಹೇಳುವುದನ್ನು ಕೇಳುತ್ತಾರೆ. 

7 /8

ಮಕ್ಕಳಿಗಾಗಿ ಸಮಯ ಮೀಸಲಿಡಿ:  ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಈ ವೇಗದ ಜೀವನಶೈಲಿಯಲ್ಲಿ ಪೋಷಕರಿಗೆ ಮಕ್ಕಳೊಂದಿಗೆ ಕುಳಿತು ಆಟವಾಡಲು, ಅವರ ಮಾತುಗಳನ್ನು ಕೇಳಲು ಸಮಯವೇ ಇರುವುದಿಲ್ಲ. ಆದರೆ, ನಿಮ್ಮ ಮಕ್ಕಳು ಒಳ್ಳೆಯ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ನೀವು ಬಯಸಿದರೆ, ನಿತ್ಯ ಸ್ವಲ್ಪ ಸಮಯವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಡಿ. ಅವರೊಂದಿಗೆ ಒಂದೆರಡು ಪ್ರೀತಿಯ ಮಾತುಗಳನ್ನು ಆಡಿ.  ಇದು ಅವರ ತಪ್ಪುಗಳನ್ನು ತಿದ್ದಲು ಸಹಾಯಕವಾಗುವುದರ ಜೊತೆಗೆ ಪೋಷಕರು ನಮ್ಮೊಂದಿಗೆ ಇದ್ದಾರೆ ಎಂಬ ಆತ್ಮಸ್ಥೈರ್ಯವನ್ನು ಕೂಡ ಹೆಚ್ಚಿಸುತ್ತದೆ. 

8 /8

ಹೋಲಿಕೆ:  ನಮ್ಮಲ್ಲಿ ಹೆಚ್ಚಿನ ಪೋಷಕರು ಮಾಡುವ ಸಾಮಾನ್ಯವಾದ ತಪ್ಪು  ಅವರ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಲಿಸುವುದು. ಆದರೆ, ನೆನಪಿಡಿ ನಿಮ್ಮ ಮಕ್ಕಳನ್ನು ಯಾವತ್ತೂ ಬೇರೆ ಮಕ್ಕಳೊಂದಿಗೆ ಹೋಲಿಸಬಾರದು. ಮಕ್ಕಳನ್ನು ಇತರರೊಂದಿಗೆ ಹೋಲಿಸಿದಾಗ, ಅವರು ತುಂಬಾ ಕೆರಳಲು ಪ್ರಾರಂಭಿಸುತ್ತಾರೆ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.