ನವದೆಹಲಿ: ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ ಏಸ್ ಪಿವಿ ಸಿಂಧು ದೇಶದ ಕೀರ್ತಿ ಪತಾಕೆ ಹಾರಿಸಿದರು. ಆ ಮೂಲಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ದೇಶದ ಮೊದಲ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಾದ ನಂತರ ಸಿಂಧುಗೆ ದೇಶದೆಲ್ಲೆಡೆಯಿಂದ ಮೆಚ್ಚುಗೆಯ ಸುರಿಮಳೆಗಳೆ ಬಂದವು. ಸ್ವತಃ ಪ್ರಧಾನಿ ಮೋದಿ ಸಿಂಧು ಭಾರತದ ಹೆಮ್ಮೆ ಎಂದು ಹೇಳಿದರು. ಈಗ ಅವರ ಈ ಸಾಧನೆಯ ಹಿನ್ನಲೆಯಲ್ಲಿ ಇನ್ನೊಂದು ಹೊಸ ಸಂಗತಿ ಹೊರಬಂದಿದೆ. ಅದೇನಪ್ಪಾ ಅಂದರೆ. ಈಗ ಅವರ ಜೀವನ ಚರಿತ್ರೆ ಈಗ ಹೊರಬರಲಿದೆ. ಈ ಈ ಚಿತ್ರವನ್ನು ನಟ ಸೋನು ಸೂದ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತಾಗಿ ಸಿಂಧು ಅವರನ್ನು ತಮ್ಮ ಪಾತ್ರಕ್ಕೆ ಸೂಕ್ತ ನಟಿ ಬಗ್ಗೆ ಕೇಳಿದಾಗ ಖಂಡಿತವಾಗಿಯೂ ದೀಪಿಕಾ ಪಡುಕೋಣೆ ಪಾತ್ರವನ್ನು ನಿರ್ವಹಿಸಬೇಕೆಂದು ಹೇಳುತ್ತೇನೆ. ಏಕೆಂದರೆ ಅವರು ಈ ಆಟವನ್ನು ಆಡಿದ್ದಾರೆ ಮತ್ತು ಉತ್ತಮ ನಟಿ ಕೂಡ. ಆದರೆ ಚಿತ್ರ ನಿರ್ಮಾಪಕರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುಲಿದ್ದಾರೆ, ಅವರ ನಿರ್ಧಾರವನ್ನು ತಾವು ನಂಬುವುದಾಗಿ ಹೇಳಿದ್ದಾರೆ.ಆದರೆ ಈ ಬಗ್ಗೆ ಚಿತ್ರ ನಿರ್ಮಾಪಕ ಆಯ್ಕೆ ಯಾವುದಾಗಿರುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.