ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ರೂ. 85 ಕೋಟಿ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಪಾಲಿಕೆ

ಬ್ಯಾಟರಾಯನಪುರ ವಿಭಾಗದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಾಗದಲ್ಲಿ ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ಶೆಡ್‌’ಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು.

Written by - Bhavya Sunil Bangera | Last Updated : Feb 13, 2024, 06:10 PM IST
    • ಯಲಹಂಕ ವಲಯ ಬ್ಯಾಟರಾಯನಪುರ ವಿಭಾಗದ ಕೊಡಿಗೆಹಳ್ಳಿ ವಾರ್ಡ್
    • ಸರ್ವೆ ಸಂಖ್ಯೆ 52ರಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 85 ಕೋಟಿ ರೂ. ಮೌಲ್ಯದ ಆಸ್ತಿ
    • ಒತ್ತುವರಿ ಆಸ್ತಿ ವಶಪಡಿಸಿಕೊಂಡ ಬೆಂಗಳೂರು ಮಹಾನಗರ ಪಾಲಿಕೆ
ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ರೂ. 85 ಕೋಟಿ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಪಾಲಿಕೆ title=
Bruhat Bengaluru Mahanagar Palike

ನಗರದ ಯಲಹಂಕ ವಲಯ ಬ್ಯಾಟರಾಯನಪುರ ವಿಭಾಗದ ಕೊಡಿಗೆಹಳ್ಳಿ ವಾರ್ಡ್ ವ್ಯಾಪ್ತಿಯ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸುಮಾರು 85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪಾಲಿಕೆ ವಶಪಡಿಸಿಕೊಂಡಿದೆ.

ಬ್ಯಾಟರಾಯನಪುರ ವಿಭಾಗದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಾಗದಲ್ಲಿ ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ಶೆಡ್‌’ಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು.

ಇದನ್ನೂ ಓದಿ: ಈ ಸ್ಟಾರ್ ನಟನ ಆಸ್ತಿ ರೂ.1,000 ಕೋಟಿಗೂ ಹೆಚ್ಚು.. ಆದರೂ ಈತ ಬಳಸುತ್ತಿರುವುದು ಸೆಕೆಂಡ್ ಹ್ಯಾಂಡ್ ಕಾರು!

ಅದರಂತೆ, ದಿನಾಂಕ 13-02-2024 ರಂದು ಬಿಬಿಎಂಪಿಯ ಯಲಹಂಕ ವಲಯ ವಲಯದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ 4 ಜೆ.ಸಿ.ಬಿ. 6 ಟಿಪ್ಪರ್‌ಗಳು, 12 ಟ್ರಾಕ್ಟರ್‌ಗಳು, 140 ಪೊಲೀಸ್ ಸಿಬ್ಬಂದಿ, 70 ಜನ ಕಾರ್ಮಿಕರು ಮತ್ತು ಗ್ಯಾಂಗ್‌ಮನ್‌ಗಳ ಸಹಾಯದೊಂದಿಗೆ ಸುಮಾರು 2.755 ಎಕರೆ (120000.00 ಚದರ ಅಡಿಗಳ ಆಸ್ತಿ) ಜಾಗದ ಆಸ್ತಿ ಮೌಲ್ಯ ಸುಮಾರು 85 ಕೋಟಿ ರೂ.ಗಳ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿರುತ್ತದೆ.

ಇದನ್ನೂ ಓದಿ: ಸಪ್ತಭಾಷೆಯಲ್ಲಿ ನಿರ್ಮಾಣವಾಗುತ್ತಿದೆ ರಾಧಿಕಾ ಕುಮಾರಸ್ವಾಮಿ ಅಭಿನಯದ "ಅಜಾಗ್ರತ" : ನೂರು ದಿನಗಳ ಚಿತ್ರೀಕರಣ ಪೂರ್ಣ 

ಪಾಲಿಕೆ ವಶಕ್ಕೆ ಪಡೆದ ನಂತರ ಸಂಪೂರ್ಣ ಜಾಗಕ್ಕೆ ಚೈನ್‌ ಲಿಂಕ್ ಫೆನ್ಸಿಂಗ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಫೆನ್ಸಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News