ಭೋಪಾಲ್‌ನಲ್ಲಿ ಗಣೇಶ್ ವಿಸರ್ಜನೆ ವೇಳೆ ದೋಣಿ ಅಪಘಾತ, 11 ಮಂದಿ ಮೃತ

ಗಣೇಶ ವಿಜರ್ಸನೆ ಸಮಯದಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಅಪಘಾತ ಸಂಭವಿಸಿದೆ.

Last Updated : Sep 13, 2019, 08:28 AM IST
ಭೋಪಾಲ್‌ನಲ್ಲಿ ಗಣೇಶ್ ವಿಸರ್ಜನೆ ವೇಳೆ ದೋಣಿ ಅಪಘಾತ, 11 ಮಂದಿ ಮೃತ title=

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಖಟ್ಲಾಪುರ ಘಾಟ್‌ನಲ್ಲಿ ಶುಕ್ರವಾರ ಮುಂಜಾನೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ದೋಣಿ ಪಲ್ಟಿ ಆದ ಪರಿಣಾಮ ನದಿಯಲ್ಲಿ ಮುಳುಗಿ 11 ಜನರು ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ, 5 ಜನರು ಈಜಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ. ಇನ್ನೂ ಕೆಲವು ಜನರು ಕಾಣೆಯಾಗಿರಬಹುದೆಂಬ ಆತಂಕವಿದ್ದು, ಡೈವರ್‌ಗಳ ತಂಡವು ರಕ್ಷಣೆ ಕಾರ್ಯದಲ್ಲಿ ತೊಡಗಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸಮಾರಂಭ ನಡೆಯುವುದರೊಂದಿಗೆ ದೊಡ್ಡ ಗಣೇಶ ವಿಗ್ರಹವನ್ನು ಮುಳುಗಿಸಲು ಪಿಪಲಾನಿ ಪ್ರದೇಶದ ಜನರು ಖಟ್ಲಾಪುರ ಘಾಟ್ ತಲುಪಿದ್ದರು. ಅಲ್ಲಿ ವಿಗ್ರಹವನ್ನು ಕ್ರೇನ್ ಸಹಾಯದಿಂದ ಕೊಳದಲ್ಲಿ ಮುಳುಗಿಸಲಾಯಿತು. ಈ ಸಂದರ್ಭದಲ್ಲಿ ದೋಣಿ ಪಲ್ಟಿಯಾಗಿದೆ, ಇದರಲ್ಲಿ 18 ಜನರು ಮುಳುಗಿಹೋದರು, ಅದರಲ್ಲಿ 6 ಜನರು ಕೊಳದಿಂದ ಪಿಯರ್‌ಗೆ ಈಜಿದರು ಮತ್ತು 12 ಜನರಿಗೆ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ.

ಮಾಹಿತಿ ಬಂದ ಕೂಡಲೇ ಪೊಲೀಸ್ ಆಡಳಿತ, ಮುನ್ಸಿಪಲ್ ಕಾರ್ಪೊರೇಷನ್, ಹೋಮ್ ಗಾರ್ಡ್, ಎಸ್‌ಡಿಇಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸದ್ಯ11 ಶವಗಳನ್ನು ತೆಗೆಯಲಾಗಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.

"ಇದು ಅತ್ಯಂತ ದುರದೃಷ್ಟಕರ ಘಟನೆ" ಎಂದು ಸಾರ್ವಜನಿಕ ಸಂಪರ್ಕ ಸಚಿವ ಪಿಸಿ ಶರ್ಮಾ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಘೋಷಿಸಿರುವ ಅವರು, ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

Trending News