Tax Saving Scheme : ಇಂದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿ ! ಒಂದು ರೂಪಾಯಿಯೂ ತೆರಿಗೆ ಕಡಿತವಾಗುವುದಿಲ್ಲ!

Tax Savings FD:ಅದರಲ್ಲೂ ಹಿರಿಯ ನಾಗರಿಕರಿಗೆ ತೆರಿಗೆ ಉಳಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿರುತ್ತದೆ. ಹಿರಿಯ ನಾಗರಿಕರು ಯಾವ ರೀತಿ ತೆರಿಗೆ ಉಳಿಸಬಹುದು ಎನ್ನುವ ಬೆಸ್ಟ್ ಆಯ್ಕೆಯನ್ನು ನಾವಿಲ್ಲಿ ಹೇಳುತ್ತಿದ್ದೇವೆ.

Written by - Ranjitha R K | Last Updated : Feb 19, 2024, 01:20 PM IST
  • ತೆರಿಗೆ ಉಳಿತಾಯ ಮಾಡುವುದು ಹೇಗೆ ಎನ್ನುವ ಹಾದಿಯನ್ನು ಹುಡುಕುತ್ತಿರುತ್ತಾರೆ
  • ತೆರಿಗೆ ಉಳಿಸುವ ಬಗೆ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ
  • ಯಾವ ರೀತಿ ತೆರಿಗೆ ಉಳಿಸಬಹುದು ಎನ್ನುವ ಬೆಸ್ಟ್ ಆಯ್ಕೆಯನ್ನು ನಾವಿಲ್ಲಿ ಹೇಳುತ್ತಿದ್ದೇವೆ.
Tax Saving Scheme : ಇಂದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿ ! ಒಂದು ರೂಪಾಯಿಯೂ ತೆರಿಗೆ ಕಡಿತವಾಗುವುದಿಲ್ಲ!  title=

Tax Savings FD : ನಾವು ಕಷ್ಟ ಪಟ್ಟು ಮಾಡುವ ಹೂಡಿಕೆ ಮೇಲೆಯೂ ತೆರಿಗೆ ಪಾವತಿಸಬೇಕು ಎಂದಾದದಾಗ ಸ್ವಲ್ಪ ಇರಿಸು ಮುರುಸಾಗುತ್ತದೆ. ಹಾಗಾಗಿ ಎಲ್ಲರೂ ತೆರಿಗೆ ಉಳಿತಾಯ ಮಾಡುವುದು ಹೇಗೆ ಎನ್ನುವ ಹಾದಿಯನ್ನು ಹುಡುಕುತ್ತಿರುತ್ತಾರೆ. ಹೂಡಿಕೆ ಮೇಲೆ ತೆರಿಗೆ ಉಳಿತಾಯ ಮಾಡಬೇಕು ಎಂದಾದರೆ ತೆರಿಗೆ ಉಳಿಸುವ ಬಗೆ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಹಿರಿಯ ನಾಗರಿಕರಿಗೆ ತೆರಿಗೆ ಉಳಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿರುತ್ತದೆ. ಹಿರಿಯ ನಾಗರಿಕರು ಯಾವ ರೀತಿ ತೆರಿಗೆ ಉಳಿಸಬಹುದು ಎನ್ನುವ ಬೆಸ್ಟ್ ಆಯ್ಕೆಯನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80C ಅಡಿಯಲ್ಲಿ, Tax-saving fixed deposits  ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಈ ವಿಭಾಗದ ಅಡಿಯಲ್ಲಿ  1.5 ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡಬಹುದು. ಇದಕ್ಕಾಗಿ, ಹಿರಿಯ ನಾಗರಿಕರು  tax ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. 

ಇದನ್ನೂ ಓದಿ : Gold Rate: ಭಾರತದಲ್ಲಿ ಚಿನ್ನದ ದರ ಹೆಚ್ಚಳ: ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸಿ!

60 ವರ್ಷ ಮೇಲ್ಪಟ್ಟವರಿಗೆ ಈ ಪ್ರಯೋಜನ : 
ಹಿರಿಯ ನಾಗರಿಕರು ಅಥವಾ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗಿನ ಹೂಡಿಕೆ ಮೇಲೆ ತೆರಿಗೆ ಉಳಿಸಬಹುದು.ಇದರೊಂದಿಗೆ, ಪ್ರತಿ ಹಣಕಾಸು ವರ್ಷದಲ್ಲಿ 50,000 ರೂ.ವರೆಗೆ  ಡಿಡೆಕ್ಷನ್  ಕ್ಲೈಂ ಮಾಡಬಹುದು. ಈ ತೆರಿಗೆ ಕಡಿತವು FD ಯಲ್ಲಿ ಪಡೆದ ಬಡ್ಡಿಗೂ ಅನ್ವಯಿಸುತ್ತದೆ. 

ಪ್ರತಿ ವರ್ಷ ಎಷ್ಟು ಹೂಡಿಕೆ ಮಾಡಬೇಕು? :
Tax-saving fixed depositsನಲ್ಲಿ 1.5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದು.  ಹೀಗಿರುವಾಗ ಎಲ್ಲಾ ಹಣವನ್ನು ಒಂದೇ ಖಾತೆಯಲ್ಲಿ ಹಾಕುವ ಬದಲು, ಅದನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ ತೆರಿಗೆ ಉಳಿಸುವ FD ಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದರಿಂದ ತೆರಿಗೆ ಪಾವತಿ ಮೇಲೆ ಸಂಪೂರ್ಣ ವಿನಾಯಿತಿ ಸಿಗುತ್ತದೆ. 

ಇದನ್ನೂ ಓದಿ :  ದೇಶದ ಪ್ರಪ್ರಥಮ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ: ಸಚಿವ ಎಂ ಬಿ ಪಾಟೀಲ

FD 5 ವರ್ಷಗಳವರೆಗೆ ಇರುತ್ತದೆ : 
ತೆರಿಗೆ ಉಳಿತಾಯ FDಯ ಅವಧಿಯು 5 ವರ್ಷಗಳು. ಈ FDಗಳು ಪ್ರತಿ 5 ವರ್ಷಗಳ ನಂತರ  ಮೆಚ್ಯೂರ್ ಆಗುತ್ತವೆ. ಇದು ಒಂದು ರೀತಿಯ ಸಂಚಿತ ಸ್ಥಿರ ಠೇವಣಿ. ಇದರಲ್ಲಿ 5 ವರ್ಷಗಳ ನಂತರ ಮೆಚ್ಯೂರಿಟಿ ವೇಳೆ ನಿಮಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಲಾಕ್-ಇನ್ ಅವಧಿಯಲ್ಲಿ FD ಹೊಂದಿರುವವರು ಮರಣಹೊಂದಿದರೆ, ಮೆಚ್ಯೂರಿಟಿ ಆಗುವ ಮುನ್ನವೇ ಹಣವನ್ನು ಹಿಂಪಡೆಯಲು ನಾಮಿನಿಗೆ  ಅವಕಾಶವಿರುತ್ತದೆ. 

ಟಿಡಿಎಸ್ ಕಡಿತವಾಗುವುದೇ? :  
 tax ಸೇವಿಂಗ್ ಎಫ್‌ಡಿಯಲ್ಲಿ ಪ್ರತಿ ವರ್ಷ 40,000 ರೂ.ಗಿಂತ  ಹೆಚ್ಚಿನ ಬಡ್ಡಿಯನ್ನು ಪಡೆದರೆ, ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರ ವಿಷಯದಲ್ಲಿ,  50,000 ರೂ. ವರೆಗೆ ರಿಯಾಯಿತಿ ಇದೆ. ಮೆಚ್ಯುರಿಟಿ ಬಳಿಕ ಟಿಡಿಎಸ್ ಕಡಿತಗೊಳಿಸಿದ ನಂತರ ಬ್ಯಾಂಕ್ ಗ್ರಾಹಕರಿಗೆ ಉಳಿದ ಮೊತ್ತವನ್ನು ಪಾವತಿಸಲಾಗುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News