Skincare Tips: ನಿಮ್ಮ ಮುಖದ ಮೇಲೆ ಸುಕ್ಕು ಮತ್ತು ಕಪ್ಪು ಕಲೆಗಳಿವೆಯೇ ! ಚಿಂತಿಸಬೇಡಿ, ಈ ಫೇಸ್ ಪ್ಯಾಕ್ ಟ್ರೈ ಮಾಡಿ

Beauty Tips: ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಬೇವಿನ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಈ ಉಪಯುಕ್ತ ಫೇಸ್ ಪ್ಯಾಕ್ ಬಗ್ಗೆ ತಿಳಿಯೋಣ.

Written by - Zee Kannada News Desk | Last Updated : Feb 19, 2024, 02:39 PM IST
  • ನೀವು ಸುಕ್ಕು-ಮುಕ್ತ, ಸ್ಪಷ್ಟ, ಕಲೆಗಳಿಲ್ಲದ ಚರ್ಮವನ್ನು ಬಯಸುತ್ತಿದ್ದರೆ, ಅದಕ್ಕೆ ಬೇವಿನ ಎಲೆಗಳಿಂದ ಮಾಡಿದ ಫೇಸ್‌ ಪ್ಯಾಕ್ ಬಳಸುವುದು ಸೂಕ್ತ.
  • ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಮೊಡವೆಗಳನ್ನು ಕಡಿಮೆಯಾಗುತ್ತದೆ.
  • ಪೇಸ್ಟ್‌ನಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿವುದರಿಂದ ಉತ್ತಮ ಫಲಿತಾಂಶ ಪಡೆಯುವಿರಿ.
Skincare Tips: ನಿಮ್ಮ ಮುಖದ ಮೇಲೆ ಸುಕ್ಕು ಮತ್ತು ಕಪ್ಪು ಕಲೆಗಳಿವೆಯೇ ! ಚಿಂತಿಸಬೇಡಿ, ಈ ಫೇಸ್ ಪ್ಯಾಕ್ ಟ್ರೈ ಮಾಡಿ title=

Neem Face Pack: ನಿಮ್ಮ ಸುಂದರ ಮುಖದ ಮೇಲೆ ಕಪ್ಪು ಕಲೆಗಳು ಮತ್ತು ಸುಕ್ಕುಗಳಿವೆಯೇ? ಮುಖದ ಮೇಲಿನ ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಮರೆಮಾಚಲು ಸಾಕಷ್ಟು ಕ್ಲೆನ್ಸರ್ ಮತ್ತು ಫೌಂಡೇಶನ್ ಬಳಸಬೇಕಾದ ಪರಿಸ್ಥಿತಿಯಲ್ಲಿ ಇದ್ದೀರಾ...? ಹಾಗಾದರೆ ಚಿಂತಿಸಬೇಡಿ.  ನಾವು ಹೇಳುವ ಈ ಫೇಸ್ ಪ್ಯಾಕ್ ಟ್ರೈ ಮಾಡಿ.  ಇದು ನಿಮ್ಮ ಚರ್ಮವನ್ನು ಯಂಗ್ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. 

ಹೆಚ್ಚಾಗಿ ಈ ಸಮಸ್ಯೆಯು ದೀರ್ಘಕಾಲದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಮೊಡವೆಗಳು, ಹಾರ್ಮೋನ್ ಬದಲಾವಣೆಗಳು, ಗಾಯ ಅಥವಾ  ವಿವಿಧ ಕಾರಣಗಳನ್ನು ಹೊಂದಿರಬಹುದು. ಈಗಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯೂ ಕೂಡ ಇದಕ್ಕೆ ಒಂದು ಕಾರಣವಾಗಿರಬಹುದು. ಮುಖದ ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಯಾವ ಫೇಸ್ ಪ್ಯಾಕ್ಅನ್ನು ಬಳಸಿದರೆ ಸೂಕ್ತ ಎಂದು ಇಲ್ಲಿ ತಿಳಿಸಲಿದ್ದೇವೆ.

ಇದನ್ನೂ ಓದಿ: Cleaning tricks:ಹೆಚ್ಚು ಶ್ರಮವಿಲ್ಲದೆ ಮನೆಯನ್ನು ಕನ್ನಡಿಯಂತೆ ಹೊಳೆಯುವಂತೆ ಮಾಡುವ ಸೂಪರ್ ಹ್ಯಾಕ್ಸ್ !

ನೀವು ಸುಕ್ಕು-ಮುಕ್ತ, ಸ್ಪಷ್ಟ, ಕಲೆಗಳಿಲ್ಲದ ಚರ್ಮವನ್ನು ಬಯಸುತ್ತಿದ್ದರೆ, ಅದಕ್ಕೆ ಬೇವಿನ ಎಲೆಗಳಿಂದ ಮಾಡಿದ ಫೇಸ್‌ ಪ್ಯಾಕ್ ಬಳಸುವುದು ಸೂಕ್ತ. ಅಲ್ಲದೇ ಆಯುರ್ವೇದದಲ್ಲಿ ಬೇವಿಗೆ ವಿಶೇಷ ಮಹತ್ವವಿದೆ. ಇದು ಶಕ್ತಿಯುತವಾದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಆಗುವುದರ ಜೊತೆಗೆ ಚರ್ಮದ ಸೋಂಕನ್ನು ಸೇರಿ ಹಲವಾರು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಬೇವಿನ ಫೇಸ್ ಪ್ಯಾಕ್‌ಗಳನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕೆಲವೇ ವಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣುವಿರಿ. ಹಾಗಾದರೆ ಬನ್ನಿ ಈ ವಿಶೇಷ ಫೇಸ್ ಪ್ಯಾಕ್ ಮಾಡುವುದು ಹೇಗೆ ಎಂದು ನೋಡೋಣ..

ಬೇವಿನ ಫೇಸ್‌ ಪ್ಯಾಕ್‌ಗೆ ಬೇಕಾಗಿರುವ ವಸ್ತುಗಳು

ಬೇವಿನ ಎಲೆಗಳು - ½ ಕಪ್
ನೀರು - 1 ರಿಂದ 2 ಟೀಸ್ಪೂನ್ ಅಥವಾ ಅಗತ್ಯವಿರುವಷ್ಟು
ಅರಿಶಿನ ಪುಡಿ - ½ ಟೀಸ್ಪೂನ್

ಇದನ್ನೂ ಓದಿ: ಈಗ ವಾಲ್ನಟ್ ಸ್ಕ್ರಬ್ ನ್ನು ಮನೆಯಲ್ಲಿಯೇ ಮಾಡಬಹುದು...ವಿಧಾನವಂತೂ ತುಂಬಾ ಸುಲಭ..!

ಬೇವಿನ ಫೇಸ್ ಪ್ಯಾಕ್ ಅನ್ನು ತಯಾರಿಸುವ ವಿಧಾನ

- ಬೇವಿನ ಸೊಪ್ಪು ಮತ್ತು ನೀರು ಸೇರಿಸಿ ರುಬ್ಬಿಕೊಳ್ಳಿ.

-  ಈ ಸಿದ್ಧಪಡಿಸಿದ ಪೇಸ್ಟ್‌ನಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.

ಇದನ್ನೂ ಓದಿ: ಮಕ್ಕಳು ಯಾವುದೇ ಒತ್ತಡಕ್ಕೆ ಸಿಲುಕದೆ ಪರೀಕ್ಷೆ ಬರಿಬೇಕೆ? ಹಾಗಾದರೆ ಪೋಷಕರು ತಪ್ಪದೇ ಈ ಕೆಲಸ ಮಾಡಬೇಕು..!

- ಸುಮಾರು 20 ರಿಂದ 25 ನಿಮಿಷಗಳ ಕಾಲ ಒಣಗಲು ಬಿಡಿ.

- ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಚರ್ಮದ ಸಮಸ್ಯೆಗಳು ಮಾಯವಾಗುತ್ತವೆ

ಈ ಪರಿಣಾಮಕಾರಿ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಅನ್ವಯಿಸುವುದರಿಂದ ನಿಮ್ಮ ಎಲ್ಲಾ ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮುಖದ ಕಪ್ಪು ಕಲೆಗಳು ಮತ್ತು ಸುಕ್ಕುಗಳ ಸಮಸ್ಯೆಯನ್ನು ಕೂಡ ಕಡಿಮೆ ಮಾಡಲು ನೀವು ಈ ವಿಧಾನವನ್ನು ಪ್ರಯತ್ನಿಸಬಹುದು. ಮುಖ್ಯವಾಗಿ ನೆನಪಿನಲ್ಲಿಡಿ ಬೇವಿನಿಂದ ನಿಮಗೆ ಯಾವುದೇ ಅಲರ್ಜಿ ಇದ್ದಲ್ಲಿ ಇದರಿಂದ ದೂರವಿರುವುದು ಒಳ್ಳೆಯದು. ಈ ಪರಿಸ್ಥಿತಿಯಲ್ಲಿ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News