ನಶಾ ಜಗತ್ತಿನ ಝಲಕ್ಕುಗಳೊಂದಿಗೆ ಝಗಮಗಿಸಿತು `ಕೈಲಾಸ ಕಾಸಿದ್ರೆ ’ ಟ್ರೈಲರ್!

 ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಟ್ರೈಲರ್ ನಲ್ಲಿ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರವಿಲ್ಲಿ ಪ್ರಧಾನವಾಗಿಯೇ ಸೆಳೆದಿದೆ.  

Written by - Ranjitha R K | Last Updated : Feb 28, 2024, 01:18 PM IST
  • ಕೈಲಾಸ ಕಾಸಿದ್ರೆ’ಸಿನಿಮಾದ ಟ್ರೈಲರ್ ಬಿಡುಗಡೆ
  • ಲವರ್ ಬಾಯ್ ಲುಕ್ಕಿನಲ್ಲಿ ನಾಯಕ ರವಿ
  • ನಗೆಗಡಲಲ್ಲಿ ತೇಲಿಸಲಿದ್ದಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್
ನಶಾ ಜಗತ್ತಿನ ಝಲಕ್ಕುಗಳೊಂದಿಗೆ ಝಗಮಗಿಸಿತು `ಕೈಲಾಸ ಕಾಸಿದ್ರೆ ’ ಟ್ರೈಲರ್! title=

ಬೆಂಗಳೂರು : ಈ ಹಿಂದೆ ಬಿಡುಗಡೆಯಾಗಿದ್ದ ಟ್ರಾನ್ಸ್ ಸಾಂಗ್ ಮೂಲಕ ವ್ಯಾಪಕ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕೈಲಾಸ ಕಾಸಿದ್ರೆ’. ಹಾಡುಗಳ ಮೂಲಕ ಹಂತ ಹಂತವಾಗಿ ಜನ ಮನ ಸೆಳೆಯುತ್ತಾ ಸಾಗಿ ಬಂದಿರುವ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಚಿತ್ರದ ಹಾಡುಗಳಂತೆ ಇದರ ಟ್ರೈಲರ್ ಕೂಡಾ   ವೀಕ್ಷಕರ ಮನಸೂರೆ ಗೊಂಡಿದೆ. 

ಈ ಹಿಂದೆ ತಾರಕಾಸುರ ಚಿತ್ರದ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಟ್ರೈಲರ್ ನಲ್ಲಿ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ.   ವಯಸ್ಸಿನ ತುಮುಲಗಳಿಗೆ ವಶವಾಗಿ, ನಶೆಯ ಜಗತ್ತಿನೊಳಗೆ ಪ್ರವೇಶಿಸುವ ಯುವಕನೋರ್ವನ ಕಥಾ ಸಾರಾಂಶವನ್ನು ಧ್ವನಿಸುವಂತಿರುವ ಈ ಟ್ರೈಲರ್ ಅನ್ನು ನಾಗ್ ವೆಂಕಟ್ ಪರಿಣಾಮಕಾರಿಯಾಗಿ  ಹೊರ ತಂದಿದ್ದಾರೆ. 

ಇದನ್ನೂ ಓದಿ : ʻಲಕ್ಷ್ಮೀ ನಿವಾಸʼ ಸಿದ್ಧೇ ಗೌಡ ಪಾತ್ರದಲ್ಲಿ ಮಿಂಚುತ್ತಿರುವ ಈ ನಟ ಯಾರು ಗೊತ್ತೇ!

ನಾಯಕ ರವಿ ಸೇರಿದಂತೆ ಒಂದಷ್ಟು ಪಾತ್ರಗಳ ಮಜಲುಗಳು ಈ ಮೂಲಕ ಪ್ರೇಕ್ಷಕರೆದುರು ತೆರೆದುಕೊಂಡಿವೆ. ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರವಿಲ್ಲಿ ಪ್ರಧಾನವಾಗಿಯೇ ಸೆಳೆದಿದೆ.ನಾಯಕನಿಗೆ ಸರಿ ಸಮನಾಗಿರುವ ಆ ಪಾತ್ರ ಕೂಡಾ ಈ ಟ್ರೈಲರ್ ನ ಹೈಲೈಟ್ ಗಳಲ್ಲೊಂದು. ಇನ್ನುಳಿದಂತೆ ಒಂದು ಪಾತ್ರದ ಸುತ್ತಲೇ ನಿರೀಕ್ಷೆ ಮೊಳೆತುಕೊಳ್ಳುವಂಥಾ ಅಪರೂಪದ ಸೆಳೆತವೊಂದು ಈ ಟ್ರೈಲರ್ ನಲ್ಲಿ ಕಾಣಿಸುತ್ತದೆ. ಅದರ ಜೊತೆಜೊತೆಗೇ ದೃಷ್ಯ ಶ್ರೀಮಂತಿಕೆಯೂ ಸ್ಪಷ್ಟವಾಗಿ ಗೋಚರಿಸುವಂತಿದೆ. ಮಾಸ್ ಮಾತ್ರವಲ್ಲದೇ ಭರಪೂರ ನಗುವಿಗೂ ಕೊರತೆಯೇನಿಲ್ಲ ಎಂಬ ನಿಖರ ಸಂದೇಶವೊಂದು ಈ ಟ್ರೈಲರ್ ಮೂಲಕವೇ ರವಾನಿಸಲಾಗಿದೆ. 

ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು.ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.

ಇದನ್ನೂ ಓದಿ : ಲಾಪತಾ ಲೇಡಿಸ್ ಸಿನಿಮಾ ಸ್ಕ್ರೀನಿಂಗ್ ನಲ್ಲಿ 3 ಈಡಿಯಟ್ಸ್ ಪುನರ್ಮಿಲನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News