Bengaluru - Coimbatore Vande Bharat Express train : ಬೆಂಗಳೂರು ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯ ಮಾರ್ಚ್ 11 ರಿಂದ ಬದಲಾವಣೆಯಾಗಿದೆ ಎಂದು ನೈಋತ್ಯ ರೈಲ್ವೆ (SWR) ಪ್ರಕಟಣೆಯಲ್ಲಿ ತಿಳಿಸಿದೆ. ರೈಲ್ವೇ ಮಂಡಳಿಯು ರೈಲಿನ ಹೊಸ ಸಮಯವನ್ನು ಅನುಮೋದಿಸಿದ್ದು, ಪ್ರಯಾಣಿಕರು ಇದನ್ನು ಗಮನಿಸುವಂತೆ ಮನವಿ ಮಾಡಿದೆ.
ಬೆಂಗಳೂರಿನಿಂದ ರೈಲು ಬೆಳಗ್ಗೆ 11.30ಕ್ಕೆ ಬದಲಾಗಿ ಮಧ್ಯಾಹ್ನ 2.20ಕ್ಕೆ ಮತ್ತೆ ಆರಂಭವಾಗಲಿದೆ. ರಾತ್ರಿ 8.45 ಗಂಟೆಗೆ ಕೊಯಮತ್ತೂರು ತಲುಪಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಮಿಳುನಾಡಿನ ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಬದಲಾಗಿ 7.25 ಕ್ಕೆ ಹೊರಡಲಿದೆ. ಬೆಳಗ್ಗೆ 11.30 ರ ಬದಲಿಗೆ ಮಧ್ಯಾಹ್ನ 1.50 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿ : ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರಾಂಡ್ ಅಂಬಾಸಿಡರ್ ʼಡಾಲಿʼ ಆಯ್ಕೆ
ಡಿಸೆಂಬರ್ 30, 2023 ರಿಂದ ಕೊಯಮತ್ತೂರು - ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಒದಗಿಸುತ್ತಿದೆ. ಬೆಳಗ್ಗೆ 5 ಗಂಟೆಗೆ ರೈಲು ಹೊರಡುವುದರಿಮದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಯಾಣಿಕರು ದುರು ನೀಡುತ್ತಿದ್ದರು.ಪ್ರಯಾಣಿಕರ ಸಂಘಗಳು ಮತ್ತು ಜನಪ್ರತಿನಿಧಿಗಳು ರೈಲ್ವೆ ಸಚಿವಾಲಯಕ್ಕೆ ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈಲ್ವೇ ನಿರ್ಗಮನ ಸಮಯವನ್ನು 5 ಗಂಟೆಯ ಬದಲು ಬೆಳಗ್ಗೆ 7.25 ಗಂಟೆಗೆ ಬದಲಾಯಿಸಲಾಗಿದೆ.
ರೈಲ್ವೇ ಸಮಯ ಬದಲಾವಣೆ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ನಿರ್ದೇಶನ ನೀಡಿದೆ. ಡಿಸೆಂಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆರು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಉದ್ಘಾಟಿಸಿದ ನಂತರ ರಾಜ್ಯಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲು ಪ್ರಾರಂಭಿಸಿತ್ತು.ಇನ್ನು, ವಂದೇ ಭಾರತ್ ರೈಲು ಸಮಯ ಬದಲಾವಣೆ ಬಗ್ಗೆ ಬೆಂಗಳೂರು ಮತ್ತು ಕೊಯಮತ್ತೂರು ನಡುವಿನ ನಿಲುಗಡೆ ನಿಲ್ದಾಣಗಳಲ್ಲಿಯೂ ಸಮಯದ ಬದಲಾವಣೆ ಬಗ್ಗೆ ಸೂಚನೆ ನೀಡಲಾಗುತ್ತದೆ. ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಗೆ ಬರೆದ ಪತ್ರದಲ್ಲಿ, ರೈಲ್ವೆ ಮಂಡಳಿಯು (20641/20642) ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯವನ್ನು ಪರಿಷ್ಕರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದಿಸಿದೆ ಎಂದು ಹೇಳಿದೆ.
ಇದನ್ನು ಓದಿ : Namratha Gowda : ಪುಸ್ತಕ ಹಿಡಿದು ಫೋಟೋಶೂಟ್ ಮಾಡಿಸಿದ ನಾಗಿಣಿ : ಫೋಟೋಸ್ ಇಲ್ಲಿದೆ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ, 380-ಕಿಲೋಮೀಟರ್ ದೂರವನ್ನು ಸರಿಸುಮಾರು ಆರು ಗಂಟೆಗಳಲ್ಲಿ ಕ್ರಮಿಸಬಹುದು. ಈ ರೈಲು ಹೊಸೂರು, ಧರ್ಮಪುರಿ, ಸೇಲಂ, ಈರೋಡ್ ಮತ್ತು ತಿರುಪ್ಪೂರ್‌ನಲ್ಲಿ ನಿಲುಗಡೆ ನೀಡುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಚೆನ್ನೈ, ಮೈಸೂರು, ಹೈದರಾಬಾದ್ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ್ ರೈಲುಗಳು ಹೋಗಲಿವೆ .ಬೆಂಗಳೂರು-ಕೊಯಮತ್ತೂರು ಮತ್ತು ಮಂಗಳೂರು-ಮಡ್ಗಾಂವ್ ನಡುವೆ ವಂದೇ ಭಾರತ್ ರೈಲುಗಳು ಓಡಾಡುತ್ತಿದ್ದು, ರಾಜ್ಯದಲ್ಲಿ ಐದು ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿದೆ. ಬೆಂಗಳೂರು ಮತ್ತು ಕೊಯಮತ್ತೂರು ನಡುವಿನ ವಂದೇ ಭಾರತ್ ರೈಲು ಬಹಳಷ್ಟು ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ಪ್ರಯೋಜನ ನೀಡುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ