ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವ ಸರ್ಕಾರದಲ್ಲಿ ಅನರ್ಹರಾಗಿದ್ದ ಶಾಸಕರ ಕ್ಷೇತ್ರಗಳಿಗೆ ಈಗ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದಲ್ಲಿ ಉಪ ಚುನಾವಣೆಯು ಆಕ್ಟೋಬರ್ 21ರಂದು 15 ಕ್ಷೇತ್ರಗಳಿಗೆ ನಡೆಯಲಿದೆ. ಅಕ್ಟೋಬರ್ 24 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
CEC: By-elections to 64 constituencies across Arunachal Pradesh, Bihar, Chhattisgarh, Assam, Gujarat, Himachal Pradesh, Karnataka, Kerala, MP, Meghalaya, Odisha, Puducherry, Punjab, Rajasthan, Sikkim, Tamil Nadu, Telangana &Uttar Pradesh, to be held on Oct 21 ;counting on Oct 24 pic.twitter.com/qs1EXsEVbV
— ANI (@ANI) September 21, 2019
ಮಸ್ಕಿ ಮತ್ತು ರಾಜರಾಜೇಶ್ವರಿ ನಗರಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಒಟ್ಟು 17 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳು:
1) ಗೋಕಾಕ್
2) ಅಥಣಿ
3) ರಾಣೆಬೆನ್ನೂರು
4) ಕಾಗವಾಡ
5) ಹಿರೇಕೆರೂರು
6) ಯಲ್ಲಾಪುರ
7) ಯಶವಂತಪುರ
8) ವಿಜಯನಗರ
9) ಶಿವಾಜಿ ನಗರ
10 ಹೊಸಕೋಟೆ
11) ಹುಣಸೂರು
12) ಕೃಷ್ಣರಾಜ್ ಪೇಟೆ
13) ಮಹಾಲಕ್ಷಿ ಲೇ ಔಟ್
14) ಕೆ.ಆರ್.ಪುರ
15 ಚಿಕ್ಕಬಳ್ಳಾಪುರ