Sharukh On South Industry: ಶಾರುಕ್ ಖಾನ್ ಅಂದರೆ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್, ಪ್ರೀತಿಯಿಂದ ಅಭಿಮಾನಿಗಳು ಅವರನ್ನು ಕಿಂಗ್ ಖಾನ್ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಬಾದಶಾಹ್, ಪಠಾಣ್, ಜವಾನ್ ಇತ್ಯಾದಿ ಹಸರುಗಳಿಂದಲೂ ಕೂಡ ಶಾರುಕ್ ಅವರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಶಾರುಕ್ ಅಂದರೆ ಅಭಿಮಾನಿಗಳಿಗೆ ಅಪಾರ ಗೌರವ, ಆದರೆ, ಅವರು ಮಾತನಾಡುವ ಒಂದು ಮಾತು ಜನರ ಅಪಾರ ಮನಸ್ಸು ನೋಯಿಸುತ್ತದೆ. ಶಾರುಕ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಹಲವರು ಅವರನ್ನು ತಮ್ಮ ರೋಲ್ ಮಾಡೆಲ್ ಎಂದೂ ಕೂಡ ಭಾವಿಸುತ್ತಾರೆ. ಹೀಗಿರುವಾಗ ಅವರು ಮಾತನಾಡುವ ಒಂದೊಂದು ಮಾತು ಜನರ ಮನಸ್ಸಿನ ಮೇಲೆ ಆಘಾಡ ಪರಿಣಾಮ ಬೀರುತ್ತದೆ. ಹೀಗಿರುವಾಗ ಅವರು ತಮಾಷೆ ಕೂಡ ಸಾಕಷ್ಟು ಪ್ರಜ್ಞೆಯಿಂದ ಮಾಡಬೇಕಾಗುತ್ತದೆ.(South Is Not Just Idli Vada)
ಪ್ರಸ್ತುತ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹದ ಪಾರ್ಟಿ ಬಳಿಕ ಶಾರುಖ್ ಖಾನ್ ಅಭಿಮಾನಿಗಳು ಅವರ ಮೇಲೆ ಕೋಪಗೊಂಡಿದ್ದಾರೆ. ರಾಮ್ ಚರಣ್ ಅವರನ್ನು ‘ಇಡ್ಲಿ ವಡಾ’ ಎಂದು ಗೇಲಿ ಎಂದು ಕರೆದಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ. ಇದು ನಿಜಕ್ಕೂ ತೀರಾ ನೋವನ್ನುಂಟು ಮಾಡುತ್ತದೆ. ಒಂದೆಡೆ ಶಾರುಖ್ ಹಾಸ್ಯಪ್ರಜ್ಞೆ ತುಂಬಾ ಅದ್ಭುತವಾಗಿದೆ ಎಂದು ಒಪ್ಪಿಕೊಂಡರೂ ಕೂಡ, ಈ ಬಾರಿ ಅದು ಅವರ ಬಳಿಯೇ ಹಿಂದಿರುಗುತ್ತಿದೆ. ಏಕೆಂದರೆ ದಕ್ಷಿಣ ಚಿತ್ರರಂಗದ ಮೇರು ನಟ ರಾಮ್ ಚರಣ್ ಕುರಿತು ಶಾರುಕ್ ಮಾಡಿದ ತಮಾಷೆ, ರಾಮ್ ಚರಣ್ ಬಿಡಿ, ಶಾರುಕ್ ಅಭಿಮಾನಿಗಳಿಗೆಯೇ ಇರುಸುಮುರುಸು ಉಂಟು ಮಾಡಿದೆ
ರಾಮ್ ಚರಣ್ ಮೇಕಪ್ ಆರ್ಟಿಸ್ಟ್ ಗೂ ಅದು ಅಷ್ಟೊಂದು ಹಿಡಿಸಿಲ್ಲ (Shah Rukh Khan Calling Ram Charan Tej Idli Vada )
ಈ ಕುರಿತು ರಾಮ್ ಚರಣ್ ಅವರ ಮೇಕಪ್ ಆರ್ಟಿಸ್ಟ್ ಝೆಬಾ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ಅಭಿಮಾನಿಗಳಂತೆ ತಾನೂ ಒರ್ವ ಶಾರುಖ್ ಅಭಿಮಾನಿ ಎಂದು ಹೇಳಿಕೊಂಡ ಝೆಬಾ, ಶಾರುಖ್ ತಮಾಷೆಗೆ ಪ್ರತಿಕ್ರಿಯಿಸಿದ್ದಾಳೆ. 'ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಆದರೆ ಅವರು ರಾಮ್ ಚರಣ್ ಅವರನ್ನು ವೇದಿಕೆಗೆ ಕರೆದ ರೀತಿ ನನಗೆ ಇಷ್ಟವಾಗಿಲ್ಲ ಎಂದಿದ್ದಾರೆ. ನಂತರ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಇನ್ಸ್ಟಾ ಕಥೆ ಬರೆದುಕೊಂಡ ಝೆಬಾ, 'ಇಡ್ಲಿ ವಡಾ ಸಂಭಾರ್ ರಾಮ್ ಚರಣ್, ನೀವು ಎಲ್ಲಿದ್ದೀರಿ? ಇದನ್ನು ಕೇಳಿ ನಾನು ಪಾರ್ಟಿ ಹಾಲ್‌ನಿಂದ ಹೊರಗೆ ಬಂದೆ. ಇದು ರಾಮ್ ಚರಣ್ ಗೆ ಇದು ತುಂಬಾ ಅವಮಾನ' ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಭಾರತೀಯ ಗರ್ವಪಡುತ್ತಾನೆ
ರಾಮ್ ಚರಣ್. ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕಳೆದ ವರ್ಷ, ಅವರು ಮತ್ತು ಅವರ ತಂಡದ ಕಾರಣ, ಪ್ರತಿಯೊಬ್ಬ ಭಾರತೀಯ 'ನಾಟು ನಾಟು' ಹಾಡುತ್ತಿದ್ದನು. ಇದು ಆಸ್ಕರ್ ಮತ್ತು ಗೋಲ್ಡನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈಗ ಪಾರ್ಟಿಯಲ್ಲಿ ರಾಮ್ ಚರಣ್ ಗೆ ಇಂತಹ ಪದಗಳನ್ನು ಬಳಸುವುದು ಸಂಪೂರ್ಣ ತಪ್ಪು. ಒಬ್ಬ ಸೂಪರ್‌ಸ್ಟಾರ್ ಇನ್ನೊಬ್ಬ ಸೂಪರ್‌ಸ್ಟಾರ್ ಬಗ್ಗೆ ಇಂತಹ ತಮಾಷೆ ಮಾಡಲು ಹೇಗೆ ಸಾಧ್ಯ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Shah Rukh Khan calls Ram Charan "Idli". Can i Call Shah Rukh Khan "Pani Puri" !
— Adv Siddharth Samant (@SidSamant) March 5, 2024
ದಕ್ಷಿಣ ಎಂದರೆ ಕೇವಲ ಇಡ್ಲಿ-ವಡೆ ಅಲ್ಲ
ಮೊದಮೊದಲು ಶಾರುಖ್ ಖಾನ್ ಹಾಗೂ ಬಾಲಿವುಡ್ ನ ಎಲ್ಲಾ ಜನ ದಕ್ಷಿಣ ಅಂದರೆ ಕೇವಲ ಸಾಂಬಾರ್ ವಡೆ, ಇಡ್ಲಿ ಅಷ್ಟಕ್ಕೇ ಸೀಮಿತವಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ದಕ್ಷಿಣ ಭಾರತ ದೇಶದ ಹೆಮ್ಮೆ. ಇದು ದೇಶದ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇದು ಭಾರತೀಯ ಚಲನಚಿತ್ರೋದ್ಯಮದ ವಿಶೇಷ ಭಾಗವಾಗಿದೆ. ರಾಮ್ ಚರಣ್, ಪ್ರಭಾಸ್, ಅಲ್ಲು ಅರ್ಜುನ್, ರಜನಿಕಾಂತ್, ಮಹೇಶ್ ಬಾಬು, ವಿಜೇಂದ್ರ ಪ್ರಸಾದ್, ಟೊವಿನೋ ಥಾಮಸ್, ಮೋಹನ್ ಲಾಲ್, ಮಣಿರತ್ನಂ, ಎಆರ್ ರೆಹಮಾನ್, ಚಿರಂಜೀವಿ, ನಾಗಾರ್ಜುನ, ಎಸ್ ಎಸ್ ರಾಜಮೌಳಿ ಸೇರಿದಂತೆ ಹಲವು ಸೂಪರ್ ಸ್ಟಾರ್ ಗಳು ದಕ್ಷಿಣ ಚಿತ್ರರಂಗದಿಂದ ಬರುತ್ತಾರೆ.
all these while i thought it was rohith shetty who made fun of south indians with chennai express. after shah rukh khan addressed ram charan as idli vada sambar at the ambani wedding, i learnt that he is also responsible.
— suhail (@kaypakka) March 5, 2024
ಈ ತಮಾಷೆ ನಡೆದಿದ್ದಾದರು ಎಲ್ಲಿ?
ಆದರೆ ದಕ್ಷಿಣದ ಕುರಿತು ಇಂತಹ ತಮಾಷೆ ನಡೆದಿದ್ದು ಇದೆ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಈ ಹಿಂದೆಯೂ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಬಗ್ಗೆ ನಾನಾ ತರಹದ ತಮಾಷೆಯ ಮಾತುಗಳನ್ನು ಆಡಲಾಗಿದೆ. 'ಪಡೋಸನ್', 'ರಾ.ಒನ್' ನಿಂದ ಹಿಡಿದು 'ಚೆನ್ನೈ ಎಕ್ಸ್‌ಪ್ರೆಸ್' ನಂತಹ ಅನೇಕ ಚಿತ್ರಗಳಲ್ಲಿ ದಕ್ಷಿಣವನ್ನು ತಮಾಷೆ ಮಾಡಲು ಬಳಸಲಾಗುತ್ತದೆ. ಕೆಲವೊಮ್ಮೆ ತಮಿಳು ಪಾತ್ರವನ್ನು ಬಿಂಬಿಸಲು (ರಾ.ಒನ್‌ನಲ್ಲಿ ಶಾರುಖ್ ಖಾನ್ ಪಾತ್ರ) ನೂಡಲ್ಸ್ ಜೊತೆಗೆ ಮ್ಯಾಗಿ ತಿನ್ನುವುದನ್ನು ತೋರಿಸಲಾಯಿತು ಮತ್ತು ಕೆಲವೊಮ್ಮೆ 'ಐಯೋ', 'ಮೈಂಡ್ ಇಟ್' ಮತ್ತು 'ಅನ್ನಾ ರಾಸ್ಕಲ್' ಮುಂತಾದ ಡೈಲಾಗ್‌ಗಳನ್ನು ಸೇರಿಸಲಾಯಿತು. 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಚಿತ್ರದ 'ಲುಂಗಿ ಡ್ಯಾನ್ಸ್' ಬಗ್ಗೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು.
Deal with it: Shah Rukh Khan is a man who lacks gravitas, uses his stardom to address everyone with insulting tongue-in-cheek humor & thinks it's cool. He treats all as buyable commodity
Fights with stadium staff, humiliated Sehwag with tu tu & now this
— Rohan Dua (@rohanduaT02) March 5, 2024
ಇಯನ್ನೂ ಓದಿ-Viral Video: 'ನನಗೆ ಮದುವೆ ಮಾಡಿಸು'...' ತಂದೆ ಬೇಡ ಅಂದರೂ ಹಟಕ್ಕೆ ಬಿದ್ದ ಕ್ಯೂಟ್ ಪುಟಾಣಿ
ಬಾಲಿವುಡ್‌ನಲ್ಲಿ ಇದು ತಮಾಷೆಯೇ?
ಕೆಲ ಸಮಯದ ಹಿಂದೆ ಮತ್ತೊರ್ವ ದಿಗ್ಗಜ ನಟ ನಾಸಿರುದ್ದೀನ್ ಶಾಹ್ ಕೂಡ ಈ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. . ಸಿಖ್, ಕ್ರಿಶ್ಚಿಯನ್ ಮತ್ತು ಪಾರ್ಸಿ ಧರ್ಮದ ಜನರನ್ನು ಹಿಂದಿ ಚಿತ್ರಗಳಲ್ಲಿ ಯಾವಾಗಲೂ ತಮಾಷೆಯಾಗಿ ಬಳಸಲಾಗುತ್ತದೆ ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ ಇತರರ ದುಃಖಕ್ಕೆ ನಗುವುದು ಬಾಲಿವುಡ್ ನಲ್ಲಿ ರೂಢಿಯಾಗಿಬಿಟ್ಟಿದೆ. 100 ವರ್ಷಗಳಿಂದ, ಇಲ್ಲಿ ತಮಾಷೆ ಮಾಡಲಾಗುತ್ತಿದೆ. ದಕ್ಷಿಣದ ಚಿತ್ರಗಳು ಹೆಚ್ಚು ಸಾಪೇಕ್ಷವಾಗಿವೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ-Viral Video: ಮೊದಲು ಮುತ್ತು, ನಂತರ ಕಣ್ಸನ್ನೆ, ಭಾವೀ ವರನ ಜೊತೆಗೆ ವಧುವಿನ ರೊಮ್ಯಾಂಟಿಕ್ ವಿಡಿಯೋ ವೈರಲ್!
ಶಾರುಖ್ ಖಾನ್‌ಗೆ ದಕ್ಷಿಣದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ
ಶಾರುಖ್ ಖಾನ್ ಬಗ್ಗೆ ಹೇಳುವುದಾದರೆ, ದಕ್ಷಿಣದಲ್ಲಿಯೂ ಕೂಡ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಜನ ಅವರನ್ನು ಸಾಕಷ್ಟು ಪ್ರೀತಿಸುತ್ತಾರೆ. 1998 ರಲ್ಲಿ ಶಾರುಖ್ ಖಾನ್ ಮಣಿರತ್ನಂ ಅವರ 'ದಿಲ್ ಸೇ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರವು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅವರು ಪದ್ಮಭೂಷಣ ಪುರಸ್ಕೃತ ನಟ ಕಮಲ್ ಹಾಸನ್ ಅವರೊಂದಿಗೆ 'ಹೇ ರಾಮ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. 2009 ರಲ್ಲಿ ಬಿಡುಗಡೆಯಾದ ಶಾರುಖ್ ಅವರ 'ಬಿಲ್ಲು ಬಾರ್ಬರ್' ಅನ್ನು ದಕ್ಷಿಣದ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಶಾರುಖ್ ಖಾನ್ ನಿಸ್ಸಂದೇಹವಾಗಿ 'ಪಠಾಣ್' ಚಿತ್ರದ ಮೂಲಕ ಯಶಸ್ವಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ, ಆದರೆ ಅವರ 'ಜವಾನ್' ನ ಬ್ಲಾಕ್ಬಸ್ಟರ್ ಯಶಸ್ಸು ಯಾರಿಂದಲೂ ಮರೆಮಾಚುವುದಕ್ಕೆ ಆಗುವುದಿಲ್ಲ. ಈ ಯಶಸ್ಸಿನಲ್ಲಿ ನಿರ್ದೇಶಕ ಅಟ್ಲಿ ಅವರ ಕೊಡುಗೆ ಪ್ರಮುಖವಾಗಿದೆ. ಒಟ್ಟಾರೆಯಾಗಿ, ಸೌತ್ ಇಂಡಸ್ಟ್ರಿ ಶಾರುಖ್ ಖಾನ್ಗೆ ಅಪಾರ ಪ್ರೀತಿ ಅಷ್ಟೇ ಅಲ್ಲ ಅಪಾರ ಯಶಸ್ಸನ್ನೂ ನೀಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ