ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಆರಂಭಿಕ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದ ದುತಿ ಚಂದ್

ದೋಹಾದಲ್ಲಿ ನಡೆಯುತ್ತಿರುವ 17 ನೇ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನ ಮಹಿಳೆಯರ 100 ಮೀಟರ್ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಹೊರಬಿದ್ದು ಭಾರತದ ಓಟಗಾರ್ತಿ ದುತಿ ಚಂದ್‌ಗೆ ನಿರಾಸೆ ಅನುಭವಿಸಿದರು.

Last Updated : Sep 29, 2019, 11:34 AM IST
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಆರಂಭಿಕ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದ ದುತಿ ಚಂದ್  title=
file photo

ನವದೆಹಲಿ: ದೋಹಾದಲ್ಲಿ ನಡೆಯುತ್ತಿರುವ 17 ನೇ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನ ಮಹಿಳೆಯರ 100 ಮೀಟರ್ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಹೊರಬಿದ್ದು ಭಾರತದ ಓಟಗಾರ್ತಿ ದುತಿ ಚಂದ್‌ಗೆ ನಿರಾಸೆ ಅನುಭವಿಸಿದರು.

ಜೈಪುರ ಮೂಲದ ಈ ಓಟಗಾರ್ತಿ ಈ  ಪ್ರತಿಷ್ಠಿತ ಪಂದ್ಯಾವಳಿಯ ಸೆಮಿಫೈನಲ್ ತಲುಪಲು ವಿಫಲವಾದರು. ಒಟ್ಟಾರೆ ಮಹಿಳೆಯರ 100 ಮೀ ಓಟದಲ್ಲಿ 47 ಸ್ಪರ್ಧಿಗಳಲ್ಲಿ 37 ನೇ ಸ್ಥಾನದಲ್ಲಿದ್ದರು.ಈ ಹಿನ್ನಲೆಯಲ್ಲಿ ಅವರು  2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದರು. ಒಲಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ನಿಗದಿ ಪಡಿಸಿದ್ದ ಸಮಯ 11.15 ಸೆಕೆಂಡುಗಳು, ಆದರೆ ದುತಿ ಚಂದ್ ಈ ಗುರಿಯನ್ನು ತಲುಪಲು ಸಹ ವಿಫಲರಾದರು.

ಜುಲೈನಲ್ಲಿ ನೇಪಲ್ಸ್‌ನಲ್ಲಿ ನಡೆದ  ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ 11.32 ಸೆಕೆಂಡುಗಳನ್ನು ಗಳಿಸಿದ ನಂತರ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಓಟಗಾರ ಎಂಬ ಹೆಗ್ಗಳಿಕೆಗೆ ಚಂದ್ ಪಾತ್ರರಾಗಿದ್ದರು. ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀ.ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದರು. 

Trending News