ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ಕಳೆದ 4 ದಿನಗಳಲ್ಲಿ ಮೂರು ಮನೆಗೆ ಕನ್ನ ಹಾಕಿದ್ದಾರೆ. ಕನ್ನ ಹಾಕಲು ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಜನರೇ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆಯೂ ನಡೆದಿದ್ದು ಕಳ್ಳರ ಕೃತ್ಯಕ್ಕೆ ಯಾಕೋ ಬ್ರೇಕ್ ಬೀಳುತ್ತಿಲ್ಲ.
Couple involved in theft : ಲವ್ ಮ್ಯಾರೇಜ್ ಮಾಡಿಕೊಂಡ ಮೇಲೆ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಕಳ್ಳತನದ ಬಗ್ಗೆ ದೂರು ಪಡೆಯುತ್ತಿದ್ದಂತೆ ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್ ಟೀಂ ಸಮೇತ ದೂರುದಾರರಾದ ಅಂಬಿಕಾ ಮನೆಗೆ ಬಂದಿದ್ದಾರೆ. ಪೊಲೀಸರು ಚಿನ್ನಾಭರಣಕ್ಕಾಗಿ ತಲಾಶ್ ಮಾಡುತ್ತಿದ್ದಂತೆ ಮತ್ತದೆ ನೆರೆ ಮನೆಯವರು ಸಾರ್ ಇಲ್ಲೊಂದು ಗಂಟು ಬಿದ್ದಿದೆ ನೋಡಿ ಎಂದು ಚಿನ್ನದ ಗಂಟು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂದೀಪಗೌಡ ಮೂಲತಃ ಬೆಂಗಳೂರ ನಿವಾಸಿ. ಹುಬ್ಬಳ್ಳಿಯ ಮನೋಜ್ ಪಾರ್ಕ್ ಬಳಿ ಇರೋ ಜಿಯೋ ಮಾರ್ಟ್ ನಲ್ಲಿ ಕೆಲಸಕ್ಕೆ ಸೇರಿದ್ದ. ತಾನು ಕೆಲಸ ಮಾಡುವ ಜಿಯೋ ಮಾರ್ಟ್ ನಲ್ಲಿಯೇ 6 ಲಕ್ಷ ಕಳ್ಳತನ ಮಾಡಿದ್ದ. ಕಳ್ಳತನ ಮಾಡೋ ಉದ್ದೇಶದಿಂದಲೇ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.
ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ರಾತ್ರಿ ವೇಳೆ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದು ಈ ವ್ಯಕ್ತಿ ಕಳ್ಳತನಕ್ಕೆ ಇಳಿದಿದ್ದ. ಇದೀಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು, ಜೈಲುವಾಸ ಅನುಭವಿಸುತ್ತಿದ್ದಾನೆ.
ನೀವು ನಿಮ್ಮ ಮನೆಯಲ್ಲಿರುವ ಚಿನ್ನವನ್ನು(Gold) ಬ್ಯಾಂಕ್ ಲಾಕರ್ ನಲ್ಲಿಟ್ಟು ಜಾಣತನದ ಕೆಲಸ ಮಾಡಿರುವುದಾಗಿ ಅಂದುಕೊಳ್ಳುತ್ತಿದ್ದರೆ ಮತ್ತು ನಿಮ್ಮ ಚಿನ್ನ ಸಂಪೂರ್ಣ ಸುರಕ್ಷಿತವಾಗಿದೆ ಎಂದು ನೀವು ಭಾವಿಸುತ್ತಿದ್ದರೆ , ನಿಮ್ಮ ಈ ಭ್ರಮೆಯನ್ನು ದೂರಗೊಳಿಸಿ.
ಗುತ್ತಿಗೆದಾರ ಅಜಯ್ ಕುಮಾರ್ ಸಿಂಗ್ ಅವರು ಕೆನರಾ ಬ್ಯಾಂಕಿನಿಂದ 10 ಲಕ್ಷ ರೂ. ಡ್ರಾ ಮಾಡಿಕೊಂಡು ಆಗಷ್ಟೇ ಹೊರಬಂದಿದ್ದರು. ಅದೇ ಸಮಯದಲ್ಲಿ, ಅಪರಿಚಿತ ಯುವಕ ಗುತ್ತಿಗೆದಾರನ ವಾಹನದಿಂದ 10 ಲಕ್ಷ ರೂ. ತುಂಬಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ.