147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಸೃಷ್ಟಿ: IPL ಆರಂಭದ ಬೆನ್ನಲ್ಲೇ ಅಬ್ಬರಿಸಿದ ಬ್ಯಾಟ್ಸ್’ಮನ್

Dhananjaya de Silva, Kamindu Mendis: ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌’ನಲ್ಲಿ ಕಾಮಿಂದು ಮೆಂಡಿಸ್ 164 ರನ್‌’ಗಳ ಇನ್ನಿಂಗ್ಸ್ ಆಡಿದರು. ಇವರಲ್ಲದೆ ನಾಯಕ ಧನಂಜಯ್ ಡಿ ಸಿಲ್ವಾ 108 ರನ್ ಗಳಿಸಿದರು. ಮೊದಲ ಇನಿಂಗ್ಸ್‌’ನಲ್ಲೂ ಈ ಇಬ್ಬರು ಆಟಗಾರರು ಲಂಕಾ ತಂಡದ ಪರ ಶತಕ ಸಿಡಿಸಿದ್ದರು.

Written by - Bhavishya Shetty | Last Updated : Mar 24, 2024, 06:21 PM IST
    • ಟೆಸ್ಟ್‌’ಗಳ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ
    • ಎರಡನೇ ಇನ್ನಿಂಗ್ಸ್‌’ನಲ್ಲಿ 510 ಕ್ಕೂ ಹೆಚ್ಚು ರನ್‌’ಗಳ ಮುನ್ನಡೆ ಸಾಧಿಸಿದೆ.
    • ಶ್ರೀಲಂಕಾ ಮೊದಲ ಇನಿಂಗ್ಸ್‌’ನಲ್ಲಿ 280 ರನ್ ಗಳಿಸಿತ್ತು
147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಸೃಷ್ಟಿ: IPL ಆರಂಭದ ಬೆನ್ನಲ್ಲೇ ಅಬ್ಬರಿಸಿದ ಬ್ಯಾಟ್ಸ್’ಮನ್ title=
kamindu mendis- dhananjay de silva

Dhananjaya de Silva, Kamindu Mendis: ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌’ಗಳ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಎರಡನೇ ಇನ್ನಿಂಗ್ಸ್‌’ನಲ್ಲಿ 510 ಕ್ಕೂ ಹೆಚ್ಚು ರನ್‌’ಗಳ ಮುನ್ನಡೆ ಸಾಧಿಸಿದೆ. ಶ್ರೀಲಂಕಾ ಮೊದಲ ಇನಿಂಗ್ಸ್‌’ನಲ್ಲಿ 280 ರನ್ ಗಳಿಸಿತ್ತು. ಆ ಬಳಿಕ ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌’ನಲ್ಲಿ 188 ರನ್‌’ಗಳಿಗೆ ಕುಸಿದಿತ್ತು. ಈ ಮೂಲಕ ಆತಿಥೇಯ ತಂಡ 92 ರನ್ ಗಳ ಮುನ್ನಡೆ ಪಡೆಯಿತು. ಪಂದ್ಯದ ಮೂರನೇ ದಿನವಾದ ಇಂದು ಲಂಕಾ ತಂಡ ಎರಡನೇ ಇನಿಂಗ್ಸ್ ನಲ್ಲಿ 418 ರನ್ ಗಳಿಸಿತ್ತು. ಈ ಮೂಲಕ 510 ರನ್ ಗಳ ಮುನ್ನಡೆ ಪಡೆದು ಬಾಂಗ್ಲಾದೇಶಕ್ಕೆ 511 ರನ್ ಗಳ ಗೆಲುವಿನ ಗುರಿ ನೀಡಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಪತ್ನಿ ಜೊತೆ ವಿರಾಟ್ ಡೇಟಿಂಗ್!? ಕ್ಯಾಮರಾ ನೋಡ್ತಿದ್ದಂತೆ ಕಾಗದದಿಂದ ಮುಖ ಮುಚ್ಚಿಕೊಂಡ ಸುಂದರಿ!

ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌’ನಲ್ಲಿ ಕಾಮಿಂದು ಮೆಂಡಿಸ್ 164 ರನ್‌’ಗಳ ಇನ್ನಿಂಗ್ಸ್ ಆಡಿದರು. ಇವರಲ್ಲದೆ ನಾಯಕ ಧನಂಜಯ್ ಡಿ ಸಿಲ್ವಾ 108 ರನ್ ಗಳಿಸಿದರು. ಮೊದಲ ಇನಿಂಗ್ಸ್‌’ನಲ್ಲೂ ಈ ಇಬ್ಬರು ಆಟಗಾರರು ಲಂಕಾ ತಂಡದ ಪರ ಶತಕ ಸಿಡಿಸಿದ್ದರು. ಕಾಮಿಂದು ಮತ್ತು ಧನಂಜಯ್ ಮೊದಲ ಇನಿಂಗ್ಸ್‌’ನಲ್ಲಿ 102-102 ರನ್‌’ಗಳ ಇನಿಂಗ್ಸ್‌ ಆಡಿದರು. ಅಂದಹಾಗೆ ಈ ಇಬ್ಬರೂ ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ.

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಏಳನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಎರಡೂ ಇನ್ನಿಂಗ್ಸ್‌’ಗಳಲ್ಲಿ ಶತಕ ಗಳಿಸಿದ್ದು ಇದೇ ಮೊದಲು. ಕಾಮಿಂದು ಮೊದಲ ಇನ್ನಿಂಗ್ಸ್‌’ನಲ್ಲಿ ಏಳನೇ ಕ್ರಮಾಂಕದಲ್ಲಿ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಒಂದೇ ಪಂದ್ಯದಲ್ಲಿ ಎರಡು ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಮನೆ ಅಂಗಳದಲ್ಲೇ ಸಿಗುವ ಈ ಹೂವು ನಿಮಿಷಗಳಲ್ಲಿ ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ!

ಐದನೇ ಅಥವಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಒಂದೇ ತಂಡದ ಇಬ್ಬರು ಆಟಗಾರರು ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದು ಟೆಸ್ಟ್ ಕ್ರಿಕೆಟ್‌’ನಲ್ಲಿ ಇದೇ ಮೊದಲು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News