ಚಿದಂಬರಂ ವಿರುದ್ಧ ಯಾವುದೇ ರಾಜಕೀಯ ದ್ವೇಷವಿಲ್ಲ, CBI, ED ಅನ್ನು ಗೃಹ ಸಚಿವಾಲಯ ನಿರ್ವಹಿಸುತ್ತಿಲ್ಲ: ಅಮಿತ್ ಶಾ

ಸಿಬಿಐ ಅಥವಾ ಇಡಿ ಸಂಸ್ಥೆಗಳು ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

Last Updated : Oct 16, 2019, 12:17 PM IST
ಚಿದಂಬರಂ ವಿರುದ್ಧ ಯಾವುದೇ ರಾಜಕೀಯ ದ್ವೇಷವಿಲ್ಲ, CBI, ED ಅನ್ನು ಗೃಹ ಸಚಿವಾಲಯ ನಿರ್ವಹಿಸುತ್ತಿಲ್ಲ: ಅಮಿತ್ ಶಾ title=

ನವದೆಹಲಿ: ರಾಜಕೀಯ ವಿಚಾರವಾಗಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಜೈಲಿಗೆ ಕಳುಹಿಸಿಲ್ಲ. ಅವರ ವಿರುದ್ಧ ಯಾವುದೇ ದ್ವೇಷದ ರಾಜಕಾರಣ ನಡೆಸುತ್ತಿಲ್ಲ. ಅಲ್ಲದೆ, ಸಿಬಿಐ ಅಥವಾ ಇಡಿ ಸಂಸ್ಥೆಗಳು ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವುದಿಲ್ಲ. ಯಾವುದೇ ಸಚಿವಾಲಯದ ಹಸ್ತಕ್ಷೇಪವಿಲ್ಲದೆ ಕ್ರಮ ತೆಗೆದುಕೊಳ್ಳಲು ಈ ಸಂಸ್ಥೆಗಳು ಮುಕ್ತವಾಗಿವೆ ಎಂದು ಜೀ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ.

"ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ, ಸಿಬಿಐ ಅವರ ಅಡಿಯಲ್ಲಿ ಇರಲಿಲ್ಲ. ಈಗ ನಾನು ಗೃಹ ಸಚಿವನಾಗಿದ್ದೇನೆ. ಈಗ ಅದು ನನ್ನ ಅಧೀನಕ್ಕೆ ಬರುವುದೇ? ಎಂದು ಪ್ರಶ್ನಿಸಿದ ಅಮಿತ್ ಶಾ, ಗೃಹ ಸಚಿವಾಲಯವು ಸಿಬಿಐ ಹಾಗೂ ಇಡಿ ಸಂಸ್ಥೆಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಒತ್ತಿ ಹೇಳಿದ್ದಾರೆ.

ಚಿದಂಬರಂ ವಿರುದ್ಧದ ಪ್ರಕರಣ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಈಗ ಐದು ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ಚಿದಂಬರಂ ವಿರುದ್ಧದ ಪ್ರಕರಣದ ತನಿಖೆ ಕೂಡ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ. ಚಿದಂಬರಂ ತಾನು ನಿರಪರಾಧಿ ಎಂದು ಭಾವಿಸಿದರೆ ಅದನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಬಹುದು ಎಂದು ಅಮಿತ್ ಶಾ ಹೇಳಿದರು.

Trending News