ಅಯೋಧ್ಯೆ ಪ್ರಕರಣ: ಸಂಧಾನ ಪ್ರಸ್ತಾಪ ಖಚಿತಪಡಿಸಿದ ಸುನ್ನಿ ವಕ್ಫ್ ಮಂಡಳಿ ವಕೀಲ

ರಾಮ್‌ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಂ ಪಕ್ಷಗಳಲ್ಲಿ ಒಂದಾದ ಸುನ್ನಿ ವಕ್ಫ್ ಮಂಡಳಿಯ ವಕೀಲರು ಗುರುವಾರ (ಅಕ್ಟೋಬರ್ 17) ದಂದು ಸುಪ್ರೀಂಕೋರ್ಟ್ ನೇಮಕ ಮಾಡಿದ ಸಂಧಾನ ಸಮಿತಿಯ ಮೂಲಕ ಹಿಂದೂ ಪಕ್ಷಗಳಿಗೆ ರಾಜಿ ಪ್ರಸ್ತಾಪವನ್ನು ನೀಡಲಾಗಿದೆ ಎಂದು ಧೃಡಪಡಿಸಿದ್ದಾರೆ. 

Last Updated : Oct 17, 2019, 08:04 PM IST
ಅಯೋಧ್ಯೆ ಪ್ರಕರಣ: ಸಂಧಾನ ಪ್ರಸ್ತಾಪ ಖಚಿತಪಡಿಸಿದ ಸುನ್ನಿ ವಕ್ಫ್ ಮಂಡಳಿ ವಕೀಲ title=

ನವದೆಹಲಿ: ರಾಮ್‌ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಂ ಪಕ್ಷಗಳಲ್ಲಿ ಒಂದಾದ ಸುನ್ನಿ ವಕ್ಫ್ ಮಂಡಳಿಯ ವಕೀಲರು ಗುರುವಾರ (ಅಕ್ಟೋಬರ್ 17) ದಂದು ಸುಪ್ರೀಂಕೋರ್ಟ್ ನೇಮಕ ಮಾಡಿದ ಸಂಧಾನ ಸಮಿತಿಯ ಮೂಲಕ ಹಿಂದೂ ಪಕ್ಷಗಳಿಗೆ ರಾಜಿ ಪ್ರಸ್ತಾಪವನ್ನು ನೀಡಲಾಗಿದೆ ಎಂದು ಧೃಡಪಡಿಸಿದ್ದಾರೆ. 

ಜೀ ನ್ಯೂಸ್ ಜೊತೆ ಮಾತನಾಡಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ಶಾಹಿದ್ ರಿಜ್ವಿ, ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಗೆ ಈ ಪ್ರಸ್ತಾಪವನ್ನು ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ನೀಡಿದ್ದಾರೆ ಎಂದು ಹೇಳಿದರು. ಸುನ್ನಿ ವಕ್ಫ್ ಮಂಡಳಿಯು ಪ್ರಸ್ತಾವನೆಯಲ್ಲಿ ಕೆಲವು ಷರತ್ತುಗಳನ್ನು ಹಾಕಿದೆ ಮತ್ತು ಷರತ್ತುಗಳನ್ನು ಒಪ್ಪಿಕೊಂಡರೆ ವಿವಾದಿತ ಆಸ್ತಿಯ ಮೇಲಿನ ಹಕ್ಕನ್ನು ತ್ಯಜಿಸಲು ಸಿದ್ಧವಾಗಿದೆ ಎಂದು ರಿಜ್ವಿ ಹೇಳಿದರು. ಸುನ್ನಿ ವಕ್ಫ್ ಮಂಡಳಿಯ ಪ್ರಸ್ತಾವನೆಯನ್ನು ಮಧ್ಯಸ್ಥಿಕೆ ಸಮಿತಿಗೆ ಸಲ್ಲಿಸಿದೆ . ಮಧ್ಯಸ್ಥಿಕೆ ಸಮಿತಿ ಮತ್ತು ಜಾಫರ್ ಫಾರೂಕಿ ನಡುವಿನ ಸಭೆಯಲ್ಲಿ ತಾವು ಹಾಜರಿದ್ದಿರುವುದಾಗಿ ರಿಜ್ವಿ ತಿಳಿಸಿದ್ದಾರೆ. 

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಎಸ್‌ಸಿಯ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಬುಧವಾರ ಅಯೋಧ್ಯೆ ಪ್ರಕರಣದ ವಾದಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿ ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸುಪ್ರೀಂಕೋರ್ಟ್ ಪೀಠವು 40 ದಿನಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಭೂ ವಿವಾದ ಪ್ರಕರಣವು ಸಿವಿಲ್ ವಿಚಾರವಾಗಿದೆ, ಇದು ಕ್ರಿಮಿನಲ್ ವಿಷಯವಲ್ಲ ಮತ್ತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಮೊದಲು ಇತ್ಯರ್ಥಪಡಿಸಬಹುದು ಎಂದು ಗಮನಿಸಬೇಕು. ಈ ಪ್ರಕರಣದ ತೀರ್ಪು ಸಿಜೆಐ ಗೊಗೊಯ್ ನಿವೃತ್ತಿ ಹೊಂದುವ ಮೊದಲೇ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Trending News