ಕ್ಯಾರಿ ಬ್ಯಾಗ್‌ಗಾಗಿ 18 ರೂ. ವಿಧಿಸಿದ್ದಕ್ಕಾಗಿ ಬಿಗ್ ಬಜಾರ್ ಗೆ 23,000 ರೂ. ದಂಡ ...!

ಕ್ಯಾರಿ ಬ್ಯಾಗ್‌ಗಾಗಿ ಇಬ್ಬರು ಗ್ರಾಹಕರಿಂದ 18 ರೂ.ಗಳನ್ನು ವಿಧಿಸಿದ್ದಕ್ಕಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 23,000 ರೂಗಳನ್ನು ಪಾವತಿಸಲು ಚಂಡೀಗಡ ಗ್ರಾಹಕ ವೇದಿಕೆ ಕೈಗಾರಿಕಾ ಪ್ರದೇಶ, ಹಂತ 1 ರಲ್ಲಿರುವ ಬಿಗ್ ಬಜಾರ್ ಅಂಗಡಿಗೆ ನಿರ್ದೇಶಿಸಿದೆ.

Last Updated : Oct 19, 2019, 09:00 PM IST
ಕ್ಯಾರಿ ಬ್ಯಾಗ್‌ಗಾಗಿ 18 ರೂ. ವಿಧಿಸಿದ್ದಕ್ಕಾಗಿ ಬಿಗ್ ಬಜಾರ್ ಗೆ 23,000 ರೂ. ದಂಡ ...! title=
ಸಾಂದರ್ಭಿಕ ಚಿತ್ರ

ನವದೆಹಲಿ: ಕ್ಯಾರಿ ಬ್ಯಾಗ್‌ಗಾಗಿ ಇಬ್ಬರು ಗ್ರಾಹಕರಿಂದ 18 ರೂ.ಗಳನ್ನು ವಿಧಿಸಿದ್ದಕ್ಕಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 23,000 ರೂಗಳನ್ನು ಪಾವತಿಸಲು ಚಂಡೀಗಡ ಗ್ರಾಹಕ ವೇದಿಕೆ ಕೈಗಾರಿಕಾ ಪ್ರದೇಶ, ಹಂತ 1 ರಲ್ಲಿರುವ ಬಿಗ್ ಬಜಾರ್ ಅಂಗಡಿಗೆ ನಿರ್ದೇಶಿಸಿದೆ.

ಬಿಗ್ ಬಜಾರ್ ಇಬ್ಬರು ದೂರುದಾರರಿಗೆ ತಲಾ 1500 ರೂ. ಪಾವತಿಸಬೇಕು ಮತ್ತು 20,000 ರೂಗಳನ್ನು ಗ್ರಾಹಕ ಕಾನೂನು ನೆರವು ಖಾತೆಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿದೆ. 

ಮಾರ್ಚ್ 20, 2019 ರಂದು ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಿರುವುದಾಗಿ ಪಂಚಕುಲ ನಿವಾಸಿ ಬಲದೇವ್ ರಾಜ್ ಹೇಳಿದ ನಂತರ ಈ ದೂರು ಬಂದಿದೆ. ಚೆಕ್ ಔಟ್ ಕೌಂಟರ್‌ನಲ್ಲಿ, ಖರೀದಿಸಿದ ವಸ್ತುಗಳುನ್ನು ಒಯ್ಯಲು ಖಜಾಂಚಿ ರಾಜ್‌ಗೆ ಬಟ್ಟೆ ಚೀಲಕ್ಕೆ 18 ರೂ.ಗಳನ್ನು ವಿಧಿಸಲಾಗುವುದು ಎಂದು ಹೇಳಿದ್ದರು. ಇದೇ ರೀತಿಯ ಇನ್ನೊಂದು ದೂರಿನಲ್ಲಿ, ಪಂಚಕುಲ ನಿವಾಸಿ ಸಂತೋಷ್ ಕುಮಾರಿ, ಕ್ಯಾರಿ ಬ್ಯಾಗ್‌ಗೆ 18 ರೂ.ಪಾವತಿಸಿದ್ದರು. 

ಬಿಗ್ ಬಜಾರ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಟ್ಟೆ ಚೀಲಕ್ಕೆ ವಿಧಿಸಿರುವ ಮೊತ್ತವನ್ನು ಸರಿ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಗ್ರಾಹಕರು ಒಪ್ಪಿಗೆ ಕೊಟ್ಟ ನಂತರವಷ್ಟೇ ಮೊತ್ತವನ್ನು ಸೇರಿಸಲಾಗಿದೆ ಎಂದು ಬಿಗ್ ಬಜಾರ್ ಹೇಳಿದೆ. ಆದರೆ, ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ ಎಂದು ಅಂಗಡಿಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಹೀಗಾಗಿ, ಅವರು ಏಪ್ರಿಲ್ 4, 2019 ರಂದು ಗ್ರಾಹಕ ವೇದಿಕೆಯಲ್ಲಿ ಔಪಚಾರಿಕ ದೂರನ್ನು ದಾಖಲಿಸಿದರು. 

ಈ ವಾದಗಳನ್ನು ಆಲಿಸಿದ ನಂತರ ಗ್ರಾಹಕರ ವೇದಿಕೆಯು 'ದೂರುದಾರನು ಹೊಸ ವಸ್ತುಗಳನ್ನು ಕೈಯಲ್ಲಿ ಕ್ಯಾರಿ ಬ್ಯಾಗ್ ಇಲ್ಲದೆ ಕೊಂಡೊಯ್ಯುವುದು ತುಂಬಾ ವಿಚಿತ್ರ ಮತ್ತು ಅನಾನುಕೂಲ. ಈ ಹಿನ್ನೆಲೆಯಲ್ಲಿ, ಅಂತಹ ವಸ್ತುಗಳ ಮೇಲೆ (ಬಟ್ಟೆ ಚೀಲಗಳು) ಪ್ರತ್ಯೇಕವಾಗಿ ಗ್ರಾಹಕರ ಅಧಿಕ ಶುಲ್ಕ ವಿಧಿಸುವುದು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದೆ. ಈ ರೀತಿಯಾಗಿ ಗ್ರಾಹಕರ ಮೇಲೆ ಅಧಿಕ ಶುಲ್ಕವನ್ನು ವಿಧಿಸುವ ಮೂಲಕ ದೇಶಾದ್ಯಂತ ಹಲವು ಮಳಿಗೆಗಳನ್ನು ಹೊಂದಿರುವ ಬಿಗ್ ಬಜಾರ್ ತಪ್ಪು ವ್ಯಾಪಾರ ಮಾರ್ಗಕ್ಕೆ ಅಂಟಿಕೊಂಡಿದೆ ಎಂದು ಹೇಳಿದೆ.
 

Trending News