IPL 2024 DC Rishabh Pant: 2024ರ ಇಂಡಿಯನ್ ಪ್ರೀಮಿಯರ್ ಲೀಗ್ಸ್ (Indian Premier Leagues) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಸೋಲು ಕಂಡಿದೆ. ನಿಧಾನಗತಿಯ ಓವರ್ ರೇಟ್ ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ (Rishabh Pant is the captain of Delhi Capitals) ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ದಂಡ ವಿಧಿಸಿದೆ. ಮಾತ್ರವಲ್ಲ, ನಿಷೇಧದ ಭೀತಿಯೂ ಕಾಡುತ್ತಿದೆ.
ಏಪ್ರಿಲ್ 03ರಂದು ವೈಜಾಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ಬಿಸಿಸಿಐ ರಿಷಬ್ ಪಂತ್ ಅವರಿಗೆ 24 ಲಕ್ಷರೂ. ದಂಡ ವಿಧಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕ ರಿಷಬ್ ಪಂತ್ ನಿಧಾನಗತಿಯ ಓವರ್ ರೇಟ್ ಅನುಸರಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ. ರಿಷಭ್ ಪಂತ್ ಜೊತೆಗೆ ಇತರ ಆಟಗಾರರಿಗೂ 6 ಲಕ್ಷ ರೂಪಾಯಿ ಅಥವಾ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ (ಯಾವುದು ಕಡಿಮೆಯೋ ಅದು) ವಿಧಿಸಲಾಗಿದೆ.
ಇದನ್ನೂ ಓದಿ- ಡೆಲ್ಲಿ ಕ್ಯಾಪಿಟಲ್ಸ್ ಇಶಾಂತ್ ಶರ್ಮಾ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ ಕೆಕೆಆರ್ ಆಂಡ್ರೆ ರಸೆಲ್: ವಿಡಿಯೋ ವೈರಲ್
ನಿಷೇಧದ ಭೀತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್!
ಏಪ್ರಿಲ್ 7 ರಂದು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ (DC) ಯ ಮುಂದಿನ ಪಂದ್ಯದಲ್ಲಿಯೂ ಒಂದೊಮ್ಮೆ ರಿಷಬ್ ಪಂತ್ (Rishabh Pant) ನಿಧಾನವಾದ ಓವರ್ ರೇಟ್ ಅನ್ನು ನಿರ್ವಹಿಸಿದರೆ, ಅವರು ಮ್ಯಾಚ್ ರೆಫರಿಯನ್ನು ಅವಲಂಬಿಸಿ 100 ಪ್ರತಿಶತ ದಂಡ ಅಥವಾ ಒಂದು ಪಂದ್ಯದ ನಿಷೇಧವನ್ನು ಎದುರಿಸಬೇಕಾಗುತ್ತದೆ ಎಂಬುದು ಗಮನಾರ್ಹ ವಿಷಯವಾಗಿದೆ.
ಇದನ್ನೂ ಓದಿ- IPL 2024: ಕೊಲ್ಕತ್ತಾ ನೈಟ್ ರೈಡರ್ಸ್ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್
ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ಅಪರಾಧವಾಗಿದೆ. ನಿಗದಿತ ಅವಧಿಯೊಳಗೆ 20 ಓವರ್ಗಳನ್ನು ಪೂರ್ಣಗೊಳಿಸದಿದ್ದರೆ, ಮೊದಲ ಬಾರಿಗೆ 12 ಲಕ್ಷ ರೂಪಾಯಿ ದಂಡ ಮತ್ತು ಅದೇ ಸೀಸನ್ನಲ್ಲಿ ಇದು ಎರಡನೇ ಬಾರಿಗೆ ಮರುಕಳಿಸಿದರೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಜೊತೆಗೆ ಇರ್ತರ ಆಟಗಾರರಿಗೂ 6 ಲಕ್ಷ ರೂಪಾಯಿ ಅಥವಾ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ (ಇವೆರಡರಲ್ಲಿ ಯಾವುದು ಕಡಿಮೆಯೋ ಅದು) ವಿಧಿಸಲಾಗುತ್ತದೆ. ಒಂದೊಮ್ಮೆ ಒಂದೇ ಋತುವಿನಲ್ಲಿ ಮೂರನೇ ಬಾರಿಯೂ ಇದೇ ತಪ್ಪು ಮರುಕಳಿಸಿದರೆ ಆ ತಂಡದ ನಾಯಕನಿಗೆ 30 ಲಕ್ಷ ರೂ.ವರೆಗೆ ದಂಡ ವಿಧಿಸುವ ನಿಯಮವೂ ಇದೆ. ತಂಡದ ಉಳಿದ ಆಟಗಾರರಿಗೆ ತಲಾ 12 ಲಕ್ಷ ರೂಪಾಯಿ ಅಥವಾ ಅವರ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.