Derek Underwood Dies: ಇಂಡಿಯನ್ ಪ್ರಿಮಿಯರ್ ಲೀಗ್ -ಐಪಿಎಲ್ 2024ರ ನಡುವೆ ಕ್ರಿಕೆಟ್ ಪ್ರೇಮಿಗಳಿಗೆ ದುಃಖದ ಸುದ್ದಿಯೊಂದಿದೆ. ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಮಾಜಿ ಸ್ಪಿನ್ನರ್ ಡೆರೆಕ್ ಅಂಡರ್‌ವುಡ್ ಸೋಮವಾರ (ಏಪ್ರಿಲ್ 15, 2024) ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (England Cricket Board)ಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಡೆರೆಕ್ ಅಂಡರ್‌ವುಡ್‌ಗೆ ಗೌರವ ಸಲ್ಲಿಸಿದೆ. ಡೆರೆಕ್ ಅಂಡರ್‌ವುಡ್ ನಮ್ಮ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು ಮತ್ತು ಆಟದ ನಿಜವಾದ ದಂತಕಥೆ ಇಂದು ಇಂಗ್ಲೆಂಡ್ ಕ್ರಿಕೆಟ್ ತನ್ನ ಪೋಸ್ಟ್ ನಲ್ಲಿ ಉಲ್ಲೇಖಿಸಿದೆ.
One of our greatest-ever spinners and a true legend of the game.
Rest in peace, Derek ❤️ #EnglandCricket pic.twitter.com/NABVE8w8P4
— England Cricket (@englandcricket) April 15, 2024
ಅಂಡರ್‌ವುಡ್, ಚೆಂಡಿನೊಂದಿಗಿನ ಅವರ ಅತ್ಯಂತ ನಿಖರತೆಯಿಂದಾಗಿ ಅವರ ಸಮಕಾಲೀನ ಬೌಲರ್‌ಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಡೆರೆಕ್ ಅಂಡರ್‌ವುಡ್ (Derek Underwood) 86 ಟೆಸ್ಟ್‌ಗಳಲ್ಲಿ 297 ವಿಕೆಟ್‌ಗಳನ್ನು ಪಡೆದಿದ್ದರು. ಇದು ಇಂಗ್ಲೆಂಡ್‌ನಲ್ಲಿ ಯಾವುದೇ ಸ್ಪಿನ್ನರ್‌ನ ಅತಿ ಹೆಚ್ಚು ವಿಕೆಟ್‌ಗಳನ್ನು ಹೊಂದಿರುವ ದಾಖಲೆಯಾಗಿದೆ.
ಡೆರೆಕ್ ಅಂಡರ್‌ವುಡ್ ಪ್ರಥಮ ದರ್ಜೆ (2465), ಲಿಸ್ಟ್-ಎ (572), ಟೆಸ್ಟ್ (297) ಮತ್ತು ODI (32) ಪಂದ್ಯಗಳಲ್ಲಿಪಡೆದ ವಿಕೆಟ್‌ಗಳನ್ನು ಸೇರಿಸಿದರೆ, ಅವರು 3000 ಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ 60 ಮತ್ತು 70 ರ ದಶಕದಲ್ಲಿ ಪಿಚ್‌ಗಳಲ್ಲಿಅಂಡರ್‌ವುಡ್ ಅವರೊಂದಿಗೆ ಆಡುವುದು ಅಪಾಯಕಾರಿ ಆಗಿತ್ತು ಎಂದು ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ (India's great batsman Sunil Gavaskar) ಅವರು ಒಮ್ಮೆ ಹೇಳಿದ್ದರು.
ಇದನ್ನೂ ಓದಿ- IPL 2024: ಬೆಂಗಳೂರಿನಲ್ಲಿ ರನ್ ಗಳ ಸುರಿಮಳೆ, ವಿಶ್ವದಾಖಲೆಗೆ ಸಾಕ್ಷಿಯಾದ ಐಪಿಎಲ್ ಪಂದ್ಯ..!
ಯಾವುದೇ ಪರಿಸ್ಥಿತಿಯಲ್ಲಿ ಅಂಡರ್‌ವುಡ್‌ನನ್ನು ಎದುರಿಸುವುದು ತುಂಬಾ ಕಷ್ಟಕರವಾಗಿತ್ತು. ಅವರು ತುಂಬಾ ನಿಖರವಾಗಿ ಬೌಲ್ ಮಾಡುತ್ತಿದ್ದರು ಮತ್ತು ಚೆಂಡನ್ನು ಸ್ಟಂಪ್‌ನಲ್ಲಿ ಮಾತ್ರ ಎಸೆಯುತ್ತಿದ್ದರು. ಅವರು ಬಯಸಿದಾಗಲೆಲ್ಲಾ ಅವರು ಚೆಂಡನ್ನು ವೇಗವಾಗಿ ಬೌಲ್ ಮಾಡುತ್ತಿದ್ದರು, ಇದರಿಂದಾಗಿ ಅವರ ಶಾಟ್ ಅನ್ನು ಆಡಲು ಹೆಚ್ಚು ಮುಂಚಿತವಾಗಿಯೇ ತಯಾರಿರಬೇಕಾಗಿತ್ತು. ಅವರು ಮತ್ತು ಆಂಡಿ ರಾಬರ್ಟ್ಸ್ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳು ಎಂದು ಸುನಿಲ್ ಗವಾಸ್ಕರ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.