PSI ಹಗರಣದ ಕಿಂಗ್‌ಪಿನ್‌ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಭರ್ಜರಿ ಭೋಜನ!

Lok Sabha Elections 2024: ಅಘಜಲಪುರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ RD ಪಾಟೀಲ್ ಅನ್ನು ಉಮೇಶ್ ಜಾಧವ್ ತನ್ನ ಚುನಾವಣೆಯಲ್ಲಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ.

Written by - Puttaraj K Alur | Last Updated : Apr 17, 2024, 10:54 PM IST
  • PSI ಹಗರಣದ ಕಿಂಗ್‌ಪಿನ್ RD ಪಾಟೀಲ್ ಮನೆಗೆ ಬಿಜೆಪಿ ಸಂಸದ ಉಮೇಶ್ ಜಾಧವ್ ಭೇಟಿ
  • ರಾಜ್ಯದ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟವನ ಸಹಕಾರ ಕೇಳಿದ ಬಿಜೆಪಿ ಸಂಸದನ ವಿರುದ್ಧ ಆಕ್ರೋಶ
  • ಉಮೇಶ್ ಜಾಧವ್ ವಿರುದ್ಧ ತಿರುಗಿ ಬಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಜನತೆ
PSI ಹಗರಣದ ಕಿಂಗ್‌ಪಿನ್‌ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಭರ್ಜರಿ ಭೋಜನ! title=
ಬಿಜೆಪಿ ಸಂಸದನ ವಿರುದ್ಧ ಆಕ್ರೋಶ!

ಕಲಬುರಗಿ: ಇಡೀ ರಾಜ್ಯದ ಯುವಕರ ಭವಿಷ್ಯವನ್ನೇ ಹಾಳು ಮಾಡಿದ್ದ ಕಿಡಿಗೇಡಿ ಬಿಜೆಪಿ ಸರ್ಕಾರದ ಕೃಪಾಪೋಷಿತ PSI ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿ ಭರ್ಜರಿ ಭೋಜನ ಮಾಡಿದ್ದು, ಕಲಬುರಗಿಯಲ್ಲಿ ಆಕ್ರೋಶದ ಕಟ್ಟೆಯನ್ನೇ ಒಡೆಸಿದೆ. 58,000ಕ್ಕೂ ಹೆಚ್ಚು ಯುವಕರ ಭವಿಷ್ಯದ ಪಾಲಿಗೆ ಶಾಪವಾಗಿ ಪರಿಣಮಿಸಿ, PSI ನೇಮಕಾತಿಯಲ್ಲಿ ಹಗರಣ ನಡೆಸಿ, ಪರೀಕ್ಷೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಈಗ ಜೈಲುಪಾಲಾಗಿರುವ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೇ ತಿರುಗುಬಾಣವಾಗಿದೆ.

ಇತ್ತೀಚಿಗೆ ನಡೆದಿದ್ದ PSI ಮರುಪರೀಕ್ಷೆ ವೇಳೆ ಕೂಡ ಅಕ್ರಮ ಮಾಡಲು ಯತ್ನಿಸಿ ಸಿಕ್ಕಿಬಿದ್ದು ಜೈಲುಗಂಬಿ ಎಣಿಸುತ್ತಿರುವ RD ಪಾಟೀಲ್ ಮನೆಗೆ ಉಮೇಶ್ ಜಾಧವ್ ಭೇಟಿಯಾರುವುದನ್ನು ಸಮರ್ಥಸಿಕೊಳ್ಳುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಭೇಟಿ ಮೂಲಕ ಜನರಿಗೆ ಯಾವ ರೀತಿಯ ಸಂದೇಶ ನೀಡಲು ಬಿಜೆಪಿ ಸಂಸದ ಮುಂದಾಗಿದ್ದಾರೆ? ಎಂಬ ಪ್ರಶ್ನೆಗೆ ಜಿಲ್ಲೆಯ ಯಾವುದೇ ಬಿಜೆಪಿ ನಾಯಕರ ಬಳಿಯೂ ಉತ್ತರವಿಲ್ಲದಾಗಿದೆ. 

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನ

ಅಘಜಲಪುರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ RD ಪಾಟೀಲ್ ಅನ್ನು ಉಮೇಶ್ ಜಾಧವ್ ತನ್ನ ಚುನಾವಣೆಯಲ್ಲಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಬಿಜೆಪಿ ಕುರಿತು ಈಗಾಗಲೇ ಮೂಡಿದ್ದ ತಿರಸ್ಕಾರ ಮನೋಭಾವವನ್ನು ದುಪ್ಪಟ್ಟು ಮಾಡಿದೆ.

ಬಿಜೆಪಿಯವರೇ ಆರ್.ಡಿ ಪಾಟೀಲ್ ಬ್ಯಾಕ್‌ಬೋನ್!‌

PSI ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭೇಟಿ ನೀಡಿರುವುದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ʼPSI ಹಗರಣ ಹಾಗೂ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಭರ್ಜರಿ ಭೋಜನ! ಡಿಯರ್‌ ಬಿಜೆಪಿ, ನೀವೇ ಆರ್.ಡಿ.ಪಾಟೀಲ್‌ನ ರಕ್ಷಕರು, ನೀವೇ ಆತನ ಬ್ಯಾಕ್‌ಬೋನ್ ಎನ್ನುವುದು ಮತ್ತೊಮ್ಮೆ ಬಯಲಾಗಿದೆʼ ಎಂದು ಟೀಕಿಸಿದೆ.

ಇದನ್ನೂ ಓದಿ: Lok Sabha Election 2024: "ಕ್ರಿಮಿನಲ್ ಪಕ್ಷದ ಜೊತೆ ಸೇರಿರುವ ಜೆಡಿಎಸ್ ಸೆಕ್ಯುಲರ್ ಎಂಬ ಪದಕ್ಕೆ ಅವಮಾನ ಮಾಡುತ್ತಿದೆ"-ಸಿ.ಎಂ ಸಿದ್ದರಾಮಯ್ಯ

ʼಕರ್ನಾಟಕ ಕಂಡ ಪ್ರಮುಖ ಹಗರಣದ ರೂವಾರಿಯೊಂದಿಗೆ ಬಿಜೆಪಿಯವರ ಅಕ್ರಮ ಸಂಬಂಧವು ಸಕ್ರಮ ಸಂಬಂಧವಾಗಿ ಬದಲಾಗಿದೆ! ಬಿ.ವೈ.ವಿಜಯೇಂದ್ರ ಅವರೇ ಪರೀಕ್ಷಾ ಅಕ್ರಮವಾದಾಗ ಆರ್.ಡಿ.ಪಾಟೀಲ್ ತಲೆಮರೆಸಿಕೊಳ್ಳಲು ಸಹಕರಿಸಿದ್ದು ಯಾರು? ಕೇಶವಕೃಪವೊ? ಜಗನ್ನಾಥ ಭವನವೋ? ಅಕ್ರಮ ದಂಧೆಕೋರನೊಬ್ಬನೊಂದಿಗೆ ಕುಚಿಕು ಕುಚಿಕು ಸಂಬಂಧ ಹೊಂದಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪಿಸಿದ್ದಕ್ಕೆ ಇಂದು ಉತ್ತರ ಸಿಕ್ಕಿದೆಯಲ್ಲವೇ?ʼ ಎಂದು ಪ್ರಶ್ನಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News