Vivo Y200i Price & Specifications: ವಿವೋದ Y200i ಸ್ಮಾರ್ಟ್‌ಫೋನ್‌ನ 8GB + 256GB ಮಾದರಿಗೆ 1,599 ಯುವಾನ್ (18,800 ರೂ.), 12GB + 256GBಗೆ 1,799 ಯುವಾನ್ (21,155 ರೂ.) ಮತ್ತು 12GB+512GBಗೆ 1,999 ಯುವಾನ್ (23,500 ರೂ.) ಇದೆ.
Vivo New Smartphone Launch: ದೇಶದಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಬಹು ಬೇಡಿಕೆಯಿದೆ. ಈ ಕಂಪನಿಯು ಹೊಸ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಲಾಂಚ್ ಆದ ದಿನದಿಂದಲೂ ವಿವೋ ಸ್ಮಾರ್ಟ್‌ಫೋನ್‌ಗಳು ಬಿಸಿದೋಸೆಯಂತೆ ಮಾರಾಟವಾಗುತ್ತವೆ. ಕಾಲಕಾಲಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ವಿವೋ ಬಿಡುಗಡೆ ಮಾಡುತ್ತಿರುತ್ತದೆ. ಅದರಂತೆ ವಿವೋ ಇದೀಗ ಹೊಸ Y200i ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಇದು ವಿವೋ Y100iನ Updated ಸ್ಮಾರ್ಟ್‌ಫೋನ್ ಆಗಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಿವೋ Y200i ಸ್ಮಾರ್ಟ್‌ಫೋನ್ 6.72 ಇಂಚಿನ (2408×1080 ಪಿಕ್ಸೆಲ್ ) FULL D+ LCD ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲ ಮತ್ತು 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ Octa core Snapdragon 4 gen 2 4nm ಪ್ರೊಸೆಸರ್ ಬಲ ಪಡೆದಿದ್ದು, (2.2 GHz x 2 A78-ಆಧಾರಿತ +2GHz x 6 A55-ಆಧಾರಿತ Kryo CPUಗಳು) ಇದರೊಂದಿಗೆ ಅಡ್ರಿನೋ 613 JPಯು ಬಲ ಹೊಂದಿದೆ. ಇದರ ಜೊತೆಗೆ 8GB/12GB LPDDR4x RAM, 256GB/512GB (UFS 2.2) ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ.
ವಿವೋ Y200i ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಹೊಂದಿದ್ದು, f/2.05 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸೆನ್ಸರ್ LED ಪ್ಲ್ಯಾಶ್ ಆಯ್ಕೆಯೊಂದಿಗೆ ಆಕರ್ಷಕ ಫೀಚರ್ಸ್ ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಧೂಳು ಮತ್ತು ನೀರು ನಿರೋಧಕ (IP64), 3.5MM ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್, 5G SA/NSA, ಡ್ಯುಯಲ್ 4G VoLTE, WiFi 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, GPS/GLONASS/Beidou, USB ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.
ವಿವೋ Y200i ಸ್ಮಾರ್ಟ್‌ಫೋನ್ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇದನ್ನು ಈಗ ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ 8GB + 256GB ಮಾದರಿಗೆ 1,599 ಯುವಾನ್(18,800 ರೂ.), 12GB + 256GBಗೆ 1,799 ಯುವಾನ್(21,155 ರೂ.) ಮತ್ತು 12GB+512GBಗೆ 1,999 ಯುವಾನ್(23,500 ರೂ.) ಇದೆ.