Viral Cricket News, ಕೆಲವೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಕೆಲವು ಅದ್ಭುತ ಕಾಕತಾಳೀಯಗಳು ಸಂಭವಿಸುತ್ತವೆ, ಅವುಗಳನ್ನು ನೋಡಿದರೆ, ನಮ್ಮ ಕಣ್ಣುಗಳ ಮೇಲೆ ನಮಗೆ ನಂಬಿಕೆ ಹೊರಟು ಹೋಗುತ್ತದೆ. ಪಂದ್ಯವೊಂದರ ವೇಳೆ ಅಂತಹುದ್ದೇ ಒಂದು ಘಟನೆ ಸಂಭವಿಸಿದ್ದು, ಇದರಲ್ಲಿ ಬೌಲರ್ ತನ್ನ ಬೌಲಿಂಗ್ ನಿಂದ ಮಧ್ಯದ ಸ್ಟಿಕ್ ಹಾರಿಸಿದ್ದಾನೆ. ಆದರೆ, ವಿಚಿತ್ರ ಕಾಕತಾಳೀಯ ಎಂಬಂತೆ ಬೆಲ್ಸ್ ಗಳು ಮಾತ್ರ ಉಳಿದೆರಡು ಸ್ಟಂಪ್ ಗಳ ಮೇಲೆ ಹಾಗೆಯೇ ಇವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನೋಡಿ ಇದೀಗ ಎಲ್ಲರೂ ಆಶ್ಚರ್ಯಪಡುತ್ತಿದ್ದಾರೆ. ಈ ಫೋಟೋ ಆಸ್ಟ್ರೇಲಿಯಾದ ಮೂರನೇ ದರ್ಜೆಯ ಕ್ರಿಕೆಟ್ ಟೂರ್ನಮೆಂಟ್ ACT ಪ್ರೀಮಿಯರ್‌ನದ್ದಾಗಿದ್ದು, ಇದು ICC ನಿಯಮಗಳಿಗೂ ಸವಾಲಾಗಿದೆ. ಏಕೆಂದರೆ ಬ್ಯಾಟ್ಸ್‌ಮನ್‌ಗೆ ಔಟ್ ನೀಡುವುದು ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗುತ್ತದೆ ಮತ್ತು ನಾಟೌಟ್ ನೀಡಿದರೆ ಬೌಲರ್‌ಗೆ ಅನ್ಯಾಯವಾಗುತ್ತದೆ. ಸಂಪೂರ್ಣ ವಿಷಯ ಏನು ಮತ್ತು ಅಂಪೈರ್ ಯಾವ ನಿರ್ಧಾರ ಪ್ರಕಟಿಸಿದ್ದಾರೆ ತಿಳಿದುಕೊಳ್ಳೋಣ ಬನ್ನಿ,
ವಾಸ್ತವದಲ್ಲಿ ಆಸ್ಟ್ರೇಲಿಯಾದ ಮೂರನೇ ದರ್ಜೆಯ ACT ಪ್ರೀಮಿಯರ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ವೆಸ್ಟ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ಮತ್ತು ಗಿನ್ನಿಂದ್ರಾ ಕ್ರಿಕೆಟ್ ಕ್ಲಬ್ ನಡುವೆ ಪಂದ್ಯ ನಡೆಯುತ್ತಿತ್ತು. ಕ್ಯಾನ್‌ಬೆರಾ ಟೈಮ್ಸ್ ವರದಿಯ ಪ್ರಕಾರ, ವೆಸ್ಟ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಬೊಸುಸ್ಟೊ ಅವರನ್ನು ಗಿನ್ನಿಂಡರ್ರಾ ಬೌಲರ್ ಆಂಡಿ ರೆನಾಲ್ಡ್ಸ್ ಮಿಡಲ್ ಸ್ಟಿಕ್ ಹಾರಿಸಿ ಔಟ್ ಮಾಡಿ ವಿಕೆಟ್ ಸಂಭ್ರಮಾಚರಿಸಿದ್ದಾರೆ,
ಇದನ್ನೂ ಓದಿ- KKR vs PBKS: KKR ತಂಡ ಪಂದ್ಯ ಸೋಲುತ್ತಲೇ Sharukh Khan ಅವರನ್ನು ಚುಡಾಯಿಸಿದ Shashank Singh, ವಿಡಿಯೋ ನೋಡಿ
ಅಂಪೈರ್ ಯಾವ ನಿರ್ಧಾರ ಕೈಗೊಂಡರು
ಮಿಡಲ್ ಸ್ಟಂಪ್ ಕಿತ್ತುಹೋದ ತಕ್ಷಣ ಬ್ಯಾಟ್ಸ್ ಮನ್ ಮ್ಯಾಥ್ಯೂ ಕೂಡ ಪೆವಿಲಿಯನ್ ಗೆ ಮರಳಲು ಆರಂಭಿಸಿದರು. ಈ ವೇಳೆ ಮೈದಾನದಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರೂ ಫೀಲ್ಡ್ ಅಂಪೈರ್‌ಗಳು ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ, ಸುದೀರ್ಘ ಚರ್ಚೆಯ ನಂತರ ಮ್ಯಾಥ್ಯೂ ಅವರನ್ನು ನಾಟೌಟ್ ಎಂದು ಘೋಷಿಸಿದ್ದಾರೆ. MCC ಯ ನಿಯಮ 29 ರ ಅಡಿಯಲ್ಲಿ, ಬೆಲ್ಸ್ ಗಳು ಸಂಪೂರ್ಣವಾಗಿ ತಮ್ಮ ಜಾಗವನ್ನು ಬಿಟ್ಟಾಗ ಅಥವಾ ಒಂದು ಅಥವಾ ಎರಡು ಸ್ಟಂಪ್ ಗಳು ನೆಲದಿಂದ ಸಂಪೂರ್ಣವಾಗಿ ಕಿತ್ತು ಹೋದಾಗ ಮಾತ್ರ ಬ್ಯಾಟ್ಸ್‌ಮನ್ ಬೌಲ್ಡ್ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಆ ಎರಡೂ ಘಟನೆಗಳು ನಡೆದಿಲ್ಲ.
ಇದನ್ನೂ ಓದಿ-Lok Sabha Elections 2024: ಜನ ಸಾಮಾನ್ಯರಂತೆ ಲೈನ್ ನಲ್ಲಿ ನಿಂತು ಮತ ಚಲಾಯಿಸಿದ ದ್ರಾವಿಡ್ Watch Video
ಭೌತಶಾಸ್ತ್ರ... ಚೂಯಿಂಗ್ ಗಮ್... ಅಥವಾ ಬೆಲ್ಸ್ ಮಳೆಯಲ್ಲಿ ನೆನೆದ ಕಾರಣ
ಕ್ರಿಕೆಟ್ ಎಸಿಟಿಯು ಮಧ್ಯದ ಸ್ಟಂಪ್ ಕಿತ್ತು ಹೋದ ಹಾಗೂ ಬೆಲ್ಸ್ ಗಳು ತನ್ನ ಜಾಗದಿಂದ ಕದಲದ ಫೋಟೋ ವನ್ನು ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದೆ ಮತ್ತು ನೀವು ಪ್ರತಿದಿನ ನೋಡದ ಇಂತಹ ಸಂಗತಿಯನ್ನು ನಮಗೆ ವಿವರಿಸಿ ಕ್ರಿಕೆಟ್ ಅಭಿಮಾನಿಗಳೆ ಎಂದು ಬರೆದುಕೊಂಡಿದೆ. ಗಿನ್ನಿಂದ್ರರ ವಿರುದ್ಧದ ವೆಸ್ಟ್ ಪಂದ್ಯದಲ್ಲಿ ನಡೆದ ಈ ಘಟನೆ ನಡೆಯಲು ಹೇಗೆ ಸಾಧ್ಯ? ಭೌತಶಾಸ್ತ್ರವೇ? ಚೂಯಿಂಗ್ ಗಮ್? ಅಥವಾ ಮಳೆಯಲ್ಲಿ ಬೆಲ್ಸ್ ಗಳು ನೆನೆದ ಕಾರಣವೇ? ಎಂದು ಪ್ರಶ್ನಿಸಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.