ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !

How To Flush Out Uric Acid : ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ. 
 

How To Flush Out Uric Acid :ಪ್ಯೂರಿನ್‌ಗಳ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ. ಹೀಗೆ ದೇಹದಲ್ಲಿ ಸಂಗ್ರಹವಾದ ಯೂರಿಕ್ ಆಸಿಡ್ ಮೂತ್ರಪಿಂಡಗಳಿಂದ ಫಿಲ್ಟರ್ ಆಗಿ ದೇಹದಿಂದ ಹೊರ ಹೋಗುತ್ತದೆ. ಆದರೆ ಮೂತ್ರಪಿಂಡಗಳು ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಯೂರಿಕ್ ಆಸಿಡ್ ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಮೂತ್ರಪಿಂಡಗಳು ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಅದು ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತವೆ.ಆಗ ವಿಪರೀತ ನೋವು ಕೂಡಾ ಕಾಣಿಸಿಕೊಳ್ಳುತ್ತವೆ. 

2 /7

ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜೀರಿಗೆ ಹೆಚ್ಚಿನ ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಜೀರಿಗೆ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುವ ಮಸಾಲೆಯಾಗಿದೆ.

3 /7

ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ.  

4 /7

ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಜೀರಿಗೆ ಸೇರಿಸಿ ಮತ್ತು ರಾತ್ರಿಯಿಡೀ ನೆನೆಸಿಡಿ.ಮರುದಿನ ಬೆಳಿಗ್ಗೆ ಆ ನೀರನ್ನು ಬಿಸಿ ಮಾಡಿದ ನಂತರ ಅದಕ್ಕೆ ಒಂದೆರಡು  ಚಿಟಕಿ ಅರಶಿನ ಸೇರಿಸಿ ಕುಡಿಯಬೇಕು.   

5 /7

ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಯೂರಿಕ್ ಆಸಿಡ್ ಹರಳುಗಳನ್ನು ಪುಡಿ ಮಾಡುತ್ತದೆ.ಯೂರಿಕ್ ಆಸಿಡ್ ಹರಳುಗಳು ಕೀಲುಗಳು ಮತ್ತು ಬೆರಳುಗಳಲ್ಲಿ ಸಂಗ್ರಹವಾದಾಗ,ಊತ ಸಂಭವಿಸುತ್ತದೆ.ಅರಿಶಿನದ ಗುಣಲಕ್ಷಣಗಳು ಈ ಊತವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.   

6 /7

ಅಲ್ಲದೆ, ಜೀರಿಗೆ ಮೂತ್ರ ವರ್ಧಕವಾಗಿದ್ದು, ಈ ನೀರನ್ನು ಕುಡಿಯುವುದರಿಂದ ಮೂತ್ರದ ಹರಿವು ಹೆಚ್ಚಾಗುವುದರಿಂದ ಮೂತ್ರ ಪಿಂಡದಿಂದ ಕಿಡ್ನಿ ಸ್ಟೋನ್ ಜಾರಿ ಬರುತ್ತದೆ.

7 /7

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.