Pawan Kalyan : ಆಂಧ್ರದಲ್ಲಿ ʼಪವನ್ʼ ಸುನಾಮಿ.. 70 ಸಾವಿರ ಬಹುಮತದೊಂದಿಗೆ ʼಜನಸೇನಾನಿʼ ಭರ್ಜರಿ ಗೆಲುವು..!

AP assembly election results 2024 : ಆಂಧ್ರ ಪ್ರದೇಶದಲ್ಲಿ ಜನಸೇನಾನಿ ಪವನ್‌ ಕಲ್ಯಾಣ್‌ ಸುನಾಮಿ ಎದ್ದಿದೆ. ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಪವರ್‌ ಸ್ಟಾರ್‌ ಮೊಟ್ಟ ಮೊದಲ ಬಾರಿಗೆ ಜಯ ಗಳಿಸಿದ್ದಾರೆ. 

Written by - Krishna N K | Last Updated : Jun 4, 2024, 03:26 PM IST
    • ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ
    • ಪಿಠಾಪುರಂ ಕ್ಷೇತ್ರದಲ್ಲಿ ವೈಎಸ್‌ಆರ್‌ಪಿ ಅಭ್ಯರ್ಥಿ ವಂಗ ಗೀತಾ ವಿರುದ್ಧ ಪಿಕೆ ರೋಚಕ ಗೆಲುವು
    • ಮೊದಲ ಬಾರಿಗೆ ಎಪಿ ವಿಧಾನಸಭೆಗೆ ಕಾಲಿಡಲಿದ್ದಾರೆ ಟಾಲಿವುಡ್‌ ಪವರ್‌ ಸ್ಟಾರ್‌
Pawan Kalyan : ಆಂಧ್ರದಲ್ಲಿ ʼಪವನ್ʼ ಸುನಾಮಿ.. 70 ಸಾವಿರ ಬಹುಮತದೊಂದಿಗೆ ʼಜನಸೇನಾನಿʼ ಭರ್ಜರಿ ಗೆಲುವು..! title=

Pawan Kalyan : ಸುಧೀರ್ಘ ಹೋರಾಟದ ನಂತರ ಟಾಲಿವುಡ್‌ ಪವರ್‌ ಸ್ಟಾರ್‌, ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪಿಠಾಪುರಂ ಕ್ಷೇತ್ರದಲ್ಲಿ ವೈಎಸ್‌ಆರ್‌ಪಿ ಅಭ್ಯರ್ಥಿ ವಂಗ ಗೀತಾ ವಿರುದ್ಧ ಪಿಕೆ ರೋಚಕ ಗೆಲುವು ಸಾಧಿಸಿರುವ ಮೂಲಕ ಮೊದಲ ಬಾರಿಗೆ ಎಪಿ ವಿಧಾನಸಭೆಗೆ ಕಾಲಿಡಲಿದ್ದಾರೆ.

ಹೌದು.. ಈ ಬಾರಿ ಆಂಧ್ರ ಪ್ರದೇಶದಲ್ಲಿ ಜನಸೇನಾನಿ ಪವನ್‌ ಕಲ್ಯಾಣ್‌ ಸುನಾಮಿ ಎದ್ದಿದೆ. ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಪವರ್‌ ಸ್ಟಾರ್‌ ಮೊಟ್ಟ ಮೊದಲ ಬಾರಿಗೆ ಜಯ ಗಳಿಸಿದ್ದಾರೆ. ಈ ಮೂಲಕ ಆಡಳಿತ ಪಕ್ಷ ವೈಎಸ್‌ಆರ್‌ಪಿ ಅಭ್ಯರ್ಥಿ ವಂಗಾ ಗೀತಾ ಹೀನಾಯ ಸೋಲು ಕಂಡಿದ್ದಾರೆ.

ಇದನ್ನೂ ಓದಿ:ಸೋಲು ಸಮೀಪಿಸುತ್ತಿದ್ದಂತೆ ಸಚಿವೆ, ನಟಿ ರೋಜಾ ಟ್ವೀಟ್‌ ವೈರಲ್‌..!

ಪಿಠಾಪುರಂ ಕ್ಷೇತ್ರದಲ್ಲಿ ಜನಸೇನಾ ಸುನಾಮಿಗೆ ವೈಎಸ್‌ಆರ್‌ಪಿ ಕೊಚ್ಚಿ ಹೋಗಿದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ವೈಸಿಪಿ ಅಭ್ಯರ್ಥಿ ವಂಗ ಗೀತಾ ವಿರುದ್ಧ 70,354 ಮತಗಳ ಅಭೂತಪೂರ್ವ ಬಹುಮತದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 

ಇನ್ನು ಪವನ್ ಕಲ್ಯಾಣ್ ಗೆದ್ದಿದ್ದಾರೆ ಎಂದು ತಿಳಿದ ಮೆಗಾ ಕುಟುಂಬ ಭಾವುಕವಾಗಿದೆ. ಟಿವಿ ಪರದೆಯ ಮೇಲೆ ಪವನ್ ಅವರ ಯಶಸ್ಸನ್ನು ಕಂಡು ಅವರ ಸಹೋದರಿ ಸಂತಸ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಗೆಲುವನ್ನು ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News