ಭಾರಿ ಅಪಾಯಕಾರಿ ಎಂದು ಹೇಳಲಾಗಿರುವ ದೊಡ್ಡ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ವೇಗದಿಂದ ಮುನ್ನುಗ್ಗುತ್ತಿದೆ. ಮುಂದಿನ ವಾರ 216258 (2006 WH1) ಎಂದೇ ಹೆಸರಿಸಲಾಗಿರುವ ಈ ಕ್ಷುದ್ರಗ್ರಹ ಭೂಮಿಯೊಂದಿಗೆ ನೇರವಾಗಿ ಅಪಾಯಕಾರಿ ಮಟ್ಟದಲ್ಲಿ ಮುಖಾಮುಖಿಯಾಗಲಿದೆ. ನಾಸಾದ ಸೆಂಟರ್ ಫಾರ್ ನಿಯರ್-ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (ಸಿಎನ್‌ಇಒಎಸ್) ಪ್ರಕಾರ, 2006 ರಲ್ಲಿ ಲಾ ಸಾಗ್ರಾ ಅಬ್ಸರ್ವೇಟರಿ ಮೂಲಕ ಮೊದಲ ಬಾರಿಗೆ ಗುರುತಿಸಲ್ಪಟ್ಟ ಈ ಕ್ಷುದ್ರಗ್ರಹವು ಡಿಸೆಂಬರ್ 20 ರಂದು ಭಾರತೀಯ ಸಮಯಾನುಸಾರ ಬೆಳಗ್ಗೆ 10:17ಕ್ಕೆ ಮೂಲಕ ಭೂಮಿಯ ಪಕ್ಕದಿಂದ ಅಪಾಯಕಾರಿ ಅಂತರದಲ್ಲಿ ಹಾಯ್ದುಹೋಗಲಿದೆ ಎನ್ನಲಾಗಿದೆ. ತುಂಬಾ ಅಪಾಯಕಾರಿ ಎಂದೇ ವರ್ಗೀಕರಿಸಲಾದ ಈ ಕ್ಷುದ್ರಗ್ರಹವು (ಪಿಎಚ್‌ಎ) ಭೂಮಿಯನ್ನು ಸಮೀಪಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ನಾಸಾದ CNEOS ಪ್ರಕಾರ 216258 (2006 WH1) ಕ್ಷುದ್ರಗ್ರಹ ನೇರವಾಗಿ ಭೂಮಿಯನ್ನು ಛೆದಿಸುವ ಕಕ್ಷೆಯನ್ನು ಅನುಸರಿಸುತ್ತದೆ ಎನ್ನಲಾಗಿದೆ. ಸದ್ಯ ಇದು ಗಂಟೆಗೆ 26,000 ಮೈಲುಗಳಷ್ಟು ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ ಮತ್ತು ಇದು ಚಿಕಾಗೋದ ವಿಲ್ಲೀಸ್ ಟವರ್ ಅಥವಾ ನ್ಯೂಯಾರ್ಕ್ನ ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಗಾತ್ರದಲ್ಲಿ ಎತ್ತರವಾಗಿದೆ. ಈ ಕ್ಷುದ್ರಗ್ರಹವು 1,772 ಅಡಿ ವ್ಯಾಸವನ್ನು ಹೊಂದಿದೆ ಎಂದು ಐಬಿಟೈಮ್ಸ್ ವರದಿ ಮಾಡಿದೆ. ಇದರ ವಿಶಾಲ ಗಾತ್ರ ಹಾಗೂ ಇದು ಭೂಮಿಯನ್ನು ಛೆದಿಸುವ ಕಕ್ಷೆಯ ಜೊತೆ ನೇರವಾಗಿರುವುದರಿಂದ ಇದನ್ನು ಅಪಾಯಕಾರಿ ಕ್ಷುದ್ರಗ್ರಹದ ಪಟ್ಟಿಗೆ ಸೇರಿಸಲಾಗಿದೆ. ಇದು ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಹಲವಾರು ನಗರಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಈ ವರ್ಷ ಈ ಕ್ಷುದ್ರಗ್ರಹ ಭೂಮಿಯಿಂದ ಸುಮಾರು 0.03904 ಆಸ್ಟ್ರೋನೋಮಿಕಲ್ ಯೂನಿಟ್ಸ ಹತ್ತಿರದಿಂದ ಅಥವಾ ಭೂಮಿಯ ಮಧ್ಯಭಾಗದಿಂದ ಸುಮಾರು 3.6ಮಿಲಿಯನ್ ಮೈಲ್ಸ್ ಗಳಷ್ಟು ಅಂತರದಿಂದ ಹಾಯ್ದುಹೋಗಲಿದೆ ಎಂದು CNEOS ಬಹಿರಂಗಪಡಿಸಿದೆ.
ಈ ಕುರಿತು ತನ್ನ PHA ಪುಟದಲ್ಲಿ ಬರೆದುಕೊಂಡಿರುವ ನಾಸಾ, “ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹಗಗಳನ್ನು (ಪಿಎಚ್‌ಎಗಳು) ಸದ್ಯ ನಿಯತಾಂಕಗಳನ್ನು ಆಧರಿಸಿ ವ್ಯಾಖ್ಯಾನಿಸಲಾಗಿದೆ, ಈ ಕ್ಷುದ್ರಗ್ರಹ ಭೂಮಿಯ ಮೂಲಕ ಹಾಯ್ದುಹೋಗುವಾಗ ಅಪಾಯಕಾರಿ ಅಂತರ ಹೊಂದಿರಲಿದೆ. ನಿಖರವಾಹಿ ಹೇಳುವುದಾದರೆ 0.05 or ಅಥವಾ ಅದಕ್ಕಿಂತ ಕಡಿಮೆ ಕಕ್ಷೆಯ ಛೆದಕ ಅಂತರವನ್ನು (MOID) ಹೊಂದಿರುವ ಎಲ್ಲಾ ಕ್ಷುದ್ರಗ್ರಹಗಳು ಮತ್ತು 22.0 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ನಿರ್ಧಿಷ್ಟ ಪರಿಮಾಣಗಳನ್ನು ಹೊಂದಿರುವ ಕ್ಷುದ್ರಗ್ರಹಗಳನ್ನು ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತದೆ. ”
216258 (2006 ಡಬ್ಲ್ಯುಹೆಚ್ 1) ಕ್ಷುದ್ರಗ್ರಹವು ಬಹಳ ವಿಶಾಲವಾದ ಕಕ್ಷೆಯನ್ನು ಹೊಂದಿದ್ದು, ಶುಕ್ರ, ಬುಧ ಮತ್ತು ಸೂರ್ಯನಂತೆ ಅನೇಕ ಕಾಸ್ಮಿಕ್ ಬಾಡಿಗಳನ್ನು ಒಳಗೊಂಡಿದೆ. ಇದು ಕ್ಷುದ್ರಗ್ರಹಗಳ ಅಪೊಲೊಸ್ ಕುಟುಂಬಕ್ಕೆ ಸೇರುತ್ತದೆ.