ಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?

Indian Cricket Team Gautam Gambhir:ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.ಕೊನೆಯ 3 ಕೋಚ್‌ಗಳು ಭಾರತೀಯರೇ ಆಗಿದ್ದಾರೆ.

Indian Cricket Team Gautam Gambhir:ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲಿದ್ದಾರೆ.ಅವರ ನೇಮಕ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.ಇದಕ್ಕಾಗಿ ಮೊದಲ ಸುತ್ತಿನ ಸಂದರ್ಶನವನ್ನೂ ಗಂಭೀರ್ ನೀಡಿದ್ದಾರೆ.ಇದೀಗ ಎರಡನೇ ಸುತ್ತಿನ ಸಂದರ್ಶನ ಬುಧವಾರ ನಡೆಯಲಿದೆ.ಗಂಭೀರ್ ಹೊರತುಪಡಿಸಿ,ಅನೇಕ ಅನುಭವಿಗಳು ಸಹ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಆದರೆ ಬಿಸಿಸಿಐ ಈ ಜವಾಬ್ದಾರಿಯನ್ನು ಗೌತಮ್ ಗಂಭೀರ್ ನೀಡಲಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

1 /6

ಗಂಭೀರ್ ಕೋಚ್ ಆಗುವುದಾದರೆ ಅದು ಅವರಿಗೆ ಸುಲಭದ ಮಾತಲ್ಲ.ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.ಕೊನೆಯ 3 ಕೋಚ್‌ಗಳು ಭಾರತೀಯರೇ ಆಗಿದ್ದಾರೆ.ಅನಿಲ್ ಕುಂಬ್ಳೆ, ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ತಂಡದ ಹೆಡ್ ಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಇದೀಗ ಈ ರೇಸ್ ನಲ್ಲಿ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ.   

2 /6

ದೆಹಲಿಯ ನಿವಾಸಿಯಾಗಿರುವ ಗಂಭೀರ್ 2003ರಲ್ಲಿ ಏಕದಿನ, 2004ರಲ್ಲಿ ಟೆಸ್ಟ್ ಹಾಗೂ 2007ರಲ್ಲಿ ಟಿ20 ಮಾದರಿಯಲ್ಲಿ ಪದಾರ್ಪಣೆ ಮಾಡಿದ್ದರು.2016 ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 4154 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 9 ಶತಕ ಮತ್ತು 22 ಅರ್ಧ ಶತಕಗಳನ್ನು ಗಳಿಸಿದರು. ODI ಬಗ್ಗೆ ಮಾತನಾಡುವುದಾದರೆ 147 ಪಂದ್ಯಗಳಲ್ಲಿ 39.7 ರ ಸರಾಸರಿಯಲ್ಲಿ 5238 ರನ್ ಗಳಿಸಿದ್ದಾರೆ.

3 /6

ಗೌತಮ್ ಗಂಭೀರ್ 2018ರಲ್ಲಿ ಕ್ರಿಕೆಟ್ ನಿಂದ ಸಂಪೂರ್ಣವಾಗಿ ದೂರ ಸರಿದು, ರಾಜಕೀಯ ಪ್ರವೇಶಿಸಿದರು.ಗೌತಮ್  2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಈ ಅವಧಿಯಲ್ಲಿ,ಅವರು ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿ ಉಳಿದು,  ಕಾಮೆಂಟರಿಯಲ್ಲಿ ತೊಡಗಿಸಿಕೊಂಡರು. 2024ರ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದರು.   

4 /6

2024ರ ಐಪಿಎಲ್‌ಗೂ ಮುನ್ನ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದರು.ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಅವರು ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಚಾಂಪಿಯನ್ ಆದರು.   

5 /6

ಭಾರತ ತಂಡದ ಕೋಚ್ ಆಗಿರುವುದು ಯಾವುದೇ ವ್ಯಕ್ತಿಗೆ ದೊಡ್ಡ ವಿಷಯ. ಅವರ ಸಂಬಳವೂ ಸಾಕಷ್ಟು ಹೆಚ್ಚು.ವರದಿಗಳ ಪ್ರಕಾರ ಗಂಭೀರ್ ಕೋಚ್ ಆದರೆ 12 ಕೋಟಿ ರೂ.ಗೂ ಹೆಚ್ಚು ಹಣ ಪಡೆಯಲಿದ್ದಾರೆ. ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ. ವರದಿಗಳ ಪ್ರಕಾರ ರವಿಶಾಸ್ತ್ರಿ ಕೋಚ್ ಆಗಿದ್ದಾಗ ವಾರ್ಷಿಕ 10 ಕೋಟಿ ರೂಪಾಯಿ ಪಡೆಯುತ್ತಿದ್ದರು. ರಾಹುಲ್ ದ್ರಾವಿಡ್ ಕಾಲದಲ್ಲಿ ಇದು ಸುಮಾರು 12 ಕೋಟಿ ರೂಪಾಯಿಗೆ ಏರಿಕೆಯಾಯಿತು. ಅಂದರೆ ಇದೀಗ ಗಂಭೀರ್ ಹೊಸ ಕೋಚ್ ಆಗಿ ಆಯ್ಕೆಯಾದರೆ ಹೆಚ್ಚಿನ ವೇತನ ಪಡೆಯಲಿದ್ದಾರೆ.

6 /6

ಬೇಡಿಕೆ ತುಂಬಾ ಹೆಚ್ಚಿರುವ ಮಾಜಿ ಭಾರತೀಯ ಆಟಗಾರರಲ್ಲಿ ಗಂಭೀರ್ ಕೂಡ ಸೇರಿದ್ದಾರೆ.ಅವರು ಕಾಮೆಂಟರಿ ಮತ್ತು ಜಾಹೀರಾತುಗಳಿಂದಲೂ ಹಣ ಗಳಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ ಗಂಭೀರ್ ಆಸ್ತಿ 205 ಕೋಟಿ ರೂ.