ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್.. ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕ

Sunny Deol Next Movie: ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ. 

Written by - YASHODHA POOJARI | Last Updated : Jun 22, 2024, 11:46 AM IST
    • ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್
    • ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕ ಗೋಪಿಚಂದ್ ಮಲಿನೇನಿ
    • ಸನ್ನಿ ಡಿಯೋಲ್ ಗೆ ಚಿತ್ರ ನಿರ್ಮಾಣ ಮಾಡ್ತಿದೆ ಮೈತ್ರಿ ಮೂವೀ ಮೇಕರ್ಸ್
ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್.. ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕ  title=

Sunny Deol Next Movie: ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಸನ್ನಿ ಡಿಯೋಲ್ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕೈ ಜೋಡಿಸಿದ್ದಾರೆ. ಈ ಇಬ್ಬರ ಹೊಸ ಸಿನಿಮಾಗೆ #SDGM ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. 

ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಹಾಗೂ ವೈ ರವಿ ಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಗೋಪಿಚಂದ್ ಬಾಲಿವುಡ್ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಡುತ್ತಿದ್ದಾರೆ. 

ಇದನ್ನೂ ಓದಿ : ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿ

ಕ್ರ್ಯಾಕ್ ಮತ್ತು ವೀರ ಸಿಂಹ ರೆಡ್ಡಿ ಸತತ ಎರಡು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು #SDGM ಚಿತ್ರದ ಮೂಲಕ ಆಕ್ಷನ್ ಎಂಟರ್‌ಟೈನರ್ ಕಥೆ ಹೇಳಲಿದ್ದಾರೆ. ಗೋಪಿಚಂದ್ ಹೇಳಿದ ಕಥೆಗೆ ಸನ್ನಿ ಡಿಯೋಲ್ ಕೂಡ ಥ್ರಿಲ್ ಆಗಿದ್ದಾರೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಮೂಡಿ ಬರಲಿದ್ದು, ಇದೇ ತಿಂಗಳ 22ರಿಂದ ಚಿತ್ರೀಕರಣ ಶುರುವಾಗಲಿದೆ. 

ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ, ತಮನ್ ಎಸ್ ಸಂಗೀತ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ : 4 ಕೋಟಿ ಬಂಗಲೆ, ದುಬಾರಿ ಕಾರುಗಳು.. ಕೆಜಿಎಫ್ ಸ್ಟಾರ್ ಯಶ್ ಆಸ್ತಿ ಒಟ್ಟು ಎಷ್ಟು ಕೋಟಿ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News