Isha Koppikar on casting couch : ಸಿನಿಮಾ ಒಂದು ಬಣ್ಣದ ಲೋಕ. ನಟರಾಗಿ ಹೆಸರು ಮಾಡಬೇಕು ಅಂತ ಹಲವು ಕನಸುಗಳೊಂದಿಗೆ ಇಂಡಸ್ಟ್ರಿಗೆ ಬರುತ್ತಾರೆ. ಅನೇಕ ತೊಂದರೆಗಳನ್ನು ಮತ್ತು ಅಡೆತಡೆಗಳನ್ನು ಎದುರಿಸಿದವರು ಕೊನೆಗೆ ಸ್ಟಾರ್ಡಮ್ ಗಳಿಸುತ್ತಾರೆ. ಆದರೆ ಕೆಲವು ನಾಯಕಿಯರು ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿದ ನಂತರ ಸಿನಿಮಾಗಳಿಗೆ ಗುಡ್ ಬೈ ಹೇಳ್ತಾರೆ. ಅವರಲ್ಲಿ ಇಶಾ ಕೊಪ್ಪಿಕರ್ ಕೂಡ ಒಬ್ಬರು. ವೃತ್ತಿಬದುಕಿನ ಆರಂಭದಲ್ಲಿ ಸಾಲು ಸಾಲು ಆಫರ್ ಗಳನ್ನು ಪಡೆದಿದ್ದ ಭಾಮಾ ಆ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು.
ಬಹಳ ದಿನಗಳಿಂದ ಮೌನವಾಗಿದ್ದ ಇಶಾ ಇತ್ತೀಚೆಗಷ್ಟೇ ಸಿದ್ಧಾರ್ಥ್ ಕಣ್ಣನ್ಗೆ ನೀಡಿದ ಸಂದರ್ಶನದಲ್ಲಿ ವೃತ್ತಿಜೀವನದಲ್ಲಿ ತಾವು ಎದುರಿಸಿದ್ದ ಸನ್ನಿವೇಶಗಳು ಮತ್ತು ಚಲನಚಿತ್ರಗಳ ಮೇಲಿನ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆಯೂ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
ಇದನ್ನೂ ಓದಿ:ಟ್ರೇಲರ್ ಮೂಲಕವೇ ಕುತೂಹಲ ಮೂಡಿಸಿದ ʻಜಿಗರ್ʼ
ನಮಗಿಂತ 30 ಅಥವಾ 40 ವರ್ಷ ವಯಸ್ಸಿನ ನಟರೊಂದಿಗೆ ಕೆಲಸ ಮಾಡುವುದು ತುಂಬಾ ಅಹಿತಕರವಾಗಿರುತ್ತದೆ. ಹಳೇ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವಾಗ.. ಅವರ ಜೊತೆ ರೊಮ್ಯಾನ್ಸ್ ಸೀನ್ ಮಾಡುವಾಗ ಅದು ನನಗೆ ಇಷ್ಟ ಆಗಲ್ಲ. ಅವರನ್ನು ಅಪ್ಪಿಕೊಳ್ಳುವುದು ಅಪ್ಪನನ್ನು ಮುಟ್ಟಿದಂತೆ ಭಾಸವಾಗುತ್ತದೆ ಅಂತ ಇಶಾ ಹೇಳಿಕೊಂಡಿದ್ದಾರೆ.
ಕೆಲವು ಹೀರೋಗಳು ತಮ್ಮ ವಯಸ್ಸನ್ನು ತೋರಿಸಿಕೊಳ್ಳದೆ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ. ಆದರೆ ಕೆಲವರ ನಡತೆ ಮತ್ತು ಹಿರಿಯರ ವರ್ತನೆ ಅವರ ವಯಸ್ಸನ್ನು ಸ್ಪಷ್ಟಪಡಿಸುತ್ತದೆ. 35 ವರ್ಷ ದಾಟಿದ ನಂತರ ಪ್ರತಿಯೊಬ್ಬ ನಾಯಕಿಯೂ ತಾಯಿ ತಂದೆಯಂತೆ ಕಾಣುತ್ತಾರೆ. ಆದರೆ ನಾಯಕ ತನಗಿಂತ 25 ವರ್ಷ ಕಿರಿಯ ನಟಿಯ ಜೊತೆ ನಟಿಸುತ್ತಿದ್ದಾರೆ. ನಟಿಯರಿಗೆ ಅವರ ಜೊತೆ ನಟಿಸುವ ವೇಳೆ ಹೇಗಾಗುತ್ತೆ ಅಂತ ನೀವೇ ಅರ್ಥಮಾಡಿಕೊಳ್ಳಿ ಅಂತ ಇಶಾ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಜಿಮ್ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !
1999 ರಲ್ಲಿ ಬಿಡುಗಡೆಯಾದ ಸೂರ್ಯವಂಶ ಸಿನಿಮಾದ ಮೂಲಕ ಇಶಾ ಗೋಬಿಕರ್ ಸ್ಯಾಂಡಲ್ವುಡ್ಗೆ ಕಾಲಿಟ್ಟರು. 2001 ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ? ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ಮದುವೆಯ ನಂತರ ಇಶಾ ಕೊಪ್ಪಿಕರ್ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.