ಕಲ್ಕಿ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಕಂಡೀರಾ..! ಗೆಸ್ಟ್‌ ಆಗಿ ಬಂದು ಹಿಟ್‌ ಪಡೆದ ನಟ

Kalki ad 2898 review : ನಾಗ್ ಅಶ್ವಿನ್ ನಿರ್ದೇಶನದ Kalki 2898 AD ಚಿತ್ರದಲ್ಲಿ ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಸಿನಿಮಾ ಕುರಿತು ಬ್ಲಾಕ್ ಬಸ್ಟರ್ ಟಾಕ್ ಎನ್ನುವ ಹೊಗಳಿಕೆ ಮಾತುಗಳು ಬರುತ್ತಿವೆ.. ಅಲ್ಲದೆ, ಈ ಚಿತ್ರದ ಮೂಲಕ ರೌಡಿಬಾಯ್ ತಮ್ಮ ಕ್ರೇಜ್‌ ಅನ್ನು ಡಬಲ್‌ ಮಾಡಿಕೊಂಡಿದ್ದಾರೆ.
 

1 /7

ವಿಜಯ್ ದೇವರಕೊಂಡ ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಸ್ಟಾರ್ ಇಮೇಜ್ ಗಳಿಸಿದ ನಟ. ಆದರೆ ಇತ್ತೀಚಿಗೆ ವಿಜಯ್‌ ನಟನೆಯ ಯಾವ ಸಿನಿಮಾಗಳು ಅಷ್ಟಕಾಗಿ ಸೌಂಡ್‌ ಮಾಡಲಿಲ್ಲ.   

2 /7

ಪ್ರತಿ ಸಿನಿಮಾದಲ್ಲೂ ವಿಭಿನ್ನತೆ ತೋರಿಸಲು ಯತ್ನಿಸುವ ವಿಜಯ್ ದೇವರಕೊಂಡ.. ಅವರ ಪ್ರಯೋಗಗಳು ವಿಫಲವಾಗುತ್ತಿವೆ. ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗುತ್ತಿವೆ.   

3 /7

ಇತ್ತೀಚೆಗಷ್ಟೇ ಫ್ಯಾಮಿಲಿ ಸ್ಟಾರ್ ಸಿನಿಮಾದಿಂದ ಬ್ರೇಕ್ ಸಿಗುತ್ತೆ ಅಂತ ಅಂದುಕೊಂಡಿದ್ರು ಆದ್ರೆ, ಅದು ಕೂಡ ಫ್ಲಾಪ್ ಆಯ್ತು. ಇದರಿಂದ ವಿಜಯ್ ಶಾಕ್ ಆಗಿದ್ದಾರೆ.   

4 /7

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898AD ಚಿತ್ರದಲ್ಲಿ ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಲನಚಿತ್ರ ಬ್ಲಾಕ್‌ಬಸ್ಟರ್ ಟಾಕ್ ಟಾಕ್‌ ಪಡೆದುಕೊಂಡಿದೆ. ಇದರಿಂದಾಗಿ ರೌಡಿಬಾಯ್‌ಗೆ ಸಂತೋಷವಾಗಿದೆ.  

5 /7

ಎಕೆಂದರೆ, ಇಲ್ಲಿಯವರೆಗೆ ಲೈಗರ್, ಖುಷಿ ಮತ್ತು ಫ್ಯಾಮಿಲಿ ಸ್ಟಾರ್ ಮೂರು ಅಟ್ಟರ್ ಫ್ಲಾಪ್ ಆಗಿದ್ದವು... ವಿಜಯ್ ದೇವರಕೊಂಡ ಹಿಟ್ ಗಾಗಿ ಕಾಯುತ್ತಿದ್ದರು. ಇಂತಹ ಹೊತ್ತಿನಲ್ಲಿ ಡಾರ್ಲಿಂಗ್ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾದಲ್ಲಿ ವಿಜಯ್‌ಗೆ ವಿಶೇಷ ಪಾತ್ರಕ್ಕೆ ಅವಕಾಶ ಸಿಕ್ಕಿತು.. ಇಂಡಸ್ಟ್ರಿಯಲ್ಲಿ ಸಿನಿಮಾ ಹಿಟ್ ಆಗಿದ್ದರಿಂದ ನಾಯಕನಿಗೆ ಗುಡ್ ವೈಬ್ಸ್ ಶುರುವಾಗಿದೆ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.   

6 /7

ವಿಜಯ್ ದೇವರಕೊಂಡ ಮೊದಲ ನಾಯಕನಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಪರಿಚಯವಾದರು... ಕಲ್ಕಿ ನಿರ್ದೇಶಕ ನಾಗ್ ಅಶ್ವಿನ್ ಅವರ ಮೊದಲ ಸಿನಿಮಾ ʼಎವಡೆ ಸುಬ್ರಮಣ್ಯಂʼನಲ್ಲಿ ನಾನಿ ನಾಯಕನಾಗಿ ನಟಿಸಿದಾಗ ವಿಜಯ್ ದೇವರಕೊಂಡ ಸೈಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.   

7 /7

ಸಧ್ಯ ನಾಗ್ ಅಶ್ವಿನ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ವಿಜಯ್ ದೇವರಕೊಂಡಗೆ ಕಲ್ಕಿ ಸಿನಿಮಾದ ಮೂಲಕ ಯಶಸ್ಸು ನೀಡಿದ್ದಾರೆ. ಇದು ಅವರಿಬ್ಬರ ನಡುವಿನ ಬಲವಾದ ಸ್ನೇಹವನ್ನು ತೋರಿಸುತ್ತದೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.