ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಈ ಕಾರಣದಿಂದಲೇ ಮಧುಮೇಹ ರೋಗಿಗಳು ದೀರ್ಘಕಾಲ ಔಷಧಗಳನ್ನು ಸೇವಿಸಬೇಕಾಗುತ್ತದೆ.
How to Control Blood sugar : ಮಧುಮೇಹ ಅಥವಾ ಡಯಾಬಿಟೀಸ್ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಜೀವನ ಪರ್ಯಂತ ನಮ್ಮನ್ನು ಕಾಡುತ್ತದೆ. ಮಧುಮೇಹ ಇದೇ ಎಂದು ಗೊತ್ತಾದಾಗ ಸೂಕ್ತ ಚಿಕಿತ್ಸೆ ಆರಂಭಿಸಬೇಕು. ತಪ್ಪಿದರೆ ಅದು ಇತರ ಅಪಾಯಕಾರಿ ಕಾಯಿಲೆಗೆ ಎಡೆ ಮಾಡಿಕೊಡುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಎಷ್ಟೋ ಬಾರಿ ಔಷಧಗಳನ್ನು ಸೇವಿಸಿತ್ತಿದ್ದರೂ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾದಾಗ ಅದಕ್ಕಿರುವ ಏಕೈಕ ಮಾರ್ಗ ಎಂದರೆ ನಮ್ಮ ಆಹಾರ ಪದ್ದತಿಯನ್ನು ಬದಲಿಸಿಕೊಳ್ಳುವುದು.
ಬೆಳಿಗ್ಗೆ ಲೋ ಫ್ಯಾಟ್ ಮೊಸರಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಸೇವಿಸಿದರೆ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗುತ್ತದೆ.
ಬೇಯಿಸಿದ ಕಡಲೆ ಕಾಳನ್ನು ಮೊಸರಿನೊಂದಿಗೆ ಸೇವಿಸಬಹುದು.ಒಂದು ಬಟ್ಟಲು ಬೇಯಿಸಿದ ಕಡಲೆಕಾಳನ್ನು ಲೋ ಫ್ಯಾಟ್ ಮೊಸರಿಗೆ ಸೇರಿಸಿ ಸೇವಿಸಬೇಕು. ರುಚಿ ಹೆಚ್ಚು ಮಾಡಲು ಉಪ್ಪು ಮತ್ತು ಕರಿಮೆಣಸನ್ನು ಸೇರಿಸಬಹುದು.
ಒಂದರಿಂದ ಎರಡು ಟೀಚಮಚ ಇಸಾಬ್ಗೋಲ್ ಅನ್ನು ಮೊಸರಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಹೈ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುತ್ತದೆ.
ಇನ್ನು ಹಸಿ ತರಕಾರಿಗಳಾದ ಸೌತೆಕಾಯಿ, ಟೊಮೆಟೊ, ಸೌತೆಕಾಯಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಮೊಸರಿನೊಂದಿಗೆ ತೆಗೆದುಕೊಳ್ಳಬಹುದು.
ಮಧುಮೇಹ ರೋಗಿಗಳು ಬೆಳಿಗ್ಗೆ ಮೊಸರಿನೊಂದಿಗೆ ದಾಳಿಂಬೆಯನ್ನು ಸೇವಿಸಬಹುದು.ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.